ಸುದ್ದಿಲೈವ್/ಶಿವಮೊಗ್ಗ
ಬೆಳಗಿನ ಜಾವದ ಸೋನೆ ಮಳೆ ಶಿವಮೊಗ್ಗದಲ್ಲಿ ಸುಮಾರು ಹೊತ್ತು ಸುರಿದೆ. ಬೆಳಿಗ್ಗೆ 5 ಗಂಟೆಯಿಂದಲೇ ಮಳೆ ನಗರದಲ್ಲಿ ಮಳೆಗಾಲದ ಅನುಭವ ನೀಡಿದೆ.
ಜುಲೈನಲ್ಲಿ ಸುರಿದ ಮಳೆಯು ನಂತರದ ಎರಡು ತಿಂಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ನಗರದಲ್ಲಿ ಮಳೆಯಾಗುತ್ತಿದೆ. ನಿನ್ನೆಯಿಂದ ಅ.22 ರವರೆಗೆ ಮಳೆಯಾಗುವ ನಿರೀಕ್ಷೆಯಿದೆ ಇದೆ ಎಂದು ಹಮಾನ ಇಲಾಖೆ ಸೂಚಿಸಿದೆ. ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಇಂದು ಉತ್ತಮ ಮಳೆಯಾಗಿದೆ.
ಅಕ್ಟೋಬರ್ 14 ರಿಂದ ಅಕ್ಟೋಬರ್ 22 ರವರೆಗೆ ಮಳೆ ಮುನ್ಸೂಚನೆಯನ್ನ ಕರ್ನಾಟಕ ರಾಜ್ಯ ಹವಮಾನ ಇಲಾಖೆ ಸೂಚಿಸಿತ್ತು. ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಮಳೆ ಎಚ್ಚರಿಕೆ ನೀಡಲಾಗಿತ್ತು.
ಉತ್ತರ ಒಳನಾಡು ಜಿಲ್ಲೆಗಳಿಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಕ್ಟೋಬರ್ 17 ಮತ್ತು 18 ರಂದು ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಮಾನ ಇಲಾಖೆ ಸೂಚಿಸಿದೆ.