ಲಿಂಗನಮಕ್ಕಿ ಜಲಾಶಯದ ಕಡೆ ತಿರುಗಿದ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಎಸಿ ಕಚೇರಿ ಎದುರು ಮುಳುಗಡೆ ಸಂತ್ರಸ್ತರಿಗೆ ಭೂ ಹಕ್ಕು ನೀಡುವಂತೆ ಆಗ್ರಹಿಸಿ ನಡೆಯುತ್ತಿದ್ದ ಅನಿರ್ಧಿಷ್ಠಾವಧಿ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ನಾಲ್ಕನೇ ದಿನ ಲಿಂಗನಮಕ್ಕಿ ಜಲಾಶಯ ಧ್ವಂಸಗೊಳಿಸಲು ರೈತರ ಪ್ರತಿಭಟನೆ ಮುನ್ನುಗ್ಗುತ್ತಿದೆ.

ಸಧ್ಯಕ್ಕೆ ತಾಳಗುಪ್ಪದ ಕಡೆ ಹೊರಟಿರುವ ಶರಾವತಿ ಸಂತ್ರಸ್ತರ ರೈತರ ಪ್ರತಿಭಟನೆ ತಾಳಗುಪ್ಪದಲ್ಲಿ ಇಂದು ತಂಗಲಿದೆ. ನಾಳೆ ಮತ್ತೆ ಅಲ್ಲಿಙದ 15-20 ಕಿಮಿ ದೂರವಿರುವ ಲಿಂಗನಮಕ್ಕಿ ಜಲಾಶಯಕ್ಕೆ ರೈತರು ತೆರಳಿ ಪ್ರತಿಭಟನೆ ನಡೆಸಲಿದ್ದಾರೆ. ಸಂತ್ರಸ್ತರ ಬದುಕಿಗೆ ಕಂಟಕವಾದ ಲಿಂಗನಮಕ್ಕಿ ಜಲಾಶಯವೇ ಬೀದಿಗೆ ತಳ್ಳಿದ್ದು ಅದನ್ನ  ಧ್ವಂಸಗೊಳಿಸಲು ರೈತರು  ಮುನ್ನುಗ್ಗುತ್ತಿದ್ದಾರೆ. 

ಪ್ರತಿಭಟನೆ ರೋಚಕತೆ ಪಡೆದಿರುವ ಹಿನ್ನಲೆಯಲ್ಲಿ ನಾಳೆ ರೈತರು ಯಶಸ್ವಿಗೊಳ್ಳುತ್ತಾರಾ ಅಥವಾ ಬಂಧನಕ್ಕೊಳಗಾಗುತ್ತಾರಾ ಎಂಬ ಕುತೂಹಲ ಹೆಚ್ಚಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close