ಕಾರು ಚಾಲಕನ ಬಂಧನ

 


ಸುದ್ದಿಲೈವ್/ಶಿವಮೊಗ್ಗ

ಕಾರಿನ ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನ ಎತ್ತಾಕಿಕೊಂಡು 50-100 ಮೀಟರ್ ಅಂತರದ ವರೆಗೆ ಚಲಿಸಿದ ಪ್ರಕರಣದಲ್ಲಿ ವ್ಯಕ್ತಿಯೋರ್ವನನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧಿಸಿದವನನ್ನ ಭದ್ರಾವತಿಯ ಮಿಥುನ್ ಜಗದಾಳೆ ಎಂದು ಗುರುತಿಸಲಾಗಿದೆ. ಕಾಲೇಜಿನ ಬಳಿ ತಪಾಸಣೆ ನಡೆಸುವ ವೇಳೆ ಕಿಯಾ ಸೊನಾಟಾ ಎಂಬ ಕಾರಿನವನು ನಿಧಾನವಾಗಿ ಬರುತ್ತಿದ್ದು ಸಿಬ್ಬಂದಿ ಪ್ರಭು ಸೈಡ್ ಗೆ ಹಾಕುವಂತೆ ಸೂಚಿಸಿದ್ದಾರೆ.

ಕಾರಿಗೆ ಅಡ್ಡ ನಿಂತು ಸೈಡ್ ಗೆ ಹಾಕಲು ಸೂಚಿಸಿದರೂ ಕಾರಿನವನು ಅಟ್ಟಹಾಸ ಮೆರೆದಿದ್ದಾನೆ. ಕಾರಿನ ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನ ಎತ್ತಾಕಿಕೊಂಡು ಮುಂದೆ ಸಾಗಿದ್ದಾನೆ. 50-100 ಮೀಟರ್ ದೂರ ಚಲಿಸಿ ಪೊಲೀಸ್ ಇಳಿಯುತ್ತಿದ್ದಂತೆ ಕಾರು ಚಾಲಕ ಭದ್ರಾವತಿ ಕಡೆ ಚಲಿಸಿದ್ದಾನೆ.

ಭದ್ರಾವತಿಯ ಕಡೆ ಕಾರು ಚಲಾಯಿಸಿದವನನ್ನ ಪೊಲೀಸರು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close