ಸರ್ಕಾರದನಿರ್ಧಾರವನ್ನ ಖಂಡಿಸುತ್ತೇನೆ ಎಂದ ಜ್ಞಾನೇಂದ್ರ



ಸುದ್ದಿಲೈವ್/ಶಿವಮೊಗ್ಗ

ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಮೇಲೆ ನಢದ ಧಾಂದಲೆ ಪ್ರಕರಣದ ಆರೋಪಿಗಳ ಕೇಸ್‌ನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆದ ಬೆನ್ನಲ್ಲೇ ಕೇಸರಿ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.‌ 2022 ರಲ್ಲಿ ಪ್ರಕರಣವನ್ನ ಈಗ ಕೇಸ್ ವಾಪಸ್ಸು ತೆಗೆದ ವಿಚಾರಕ್ಕೆ ಮಾಜಿ ಗೃಹ ಸಚಿವ  ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಅವರು,  ಮಂತ್ರಿ ಮಂಡಲ ಪ್ರಕರಣವನ್ನ ಹಿಂಪಡೆದಿದೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರು ಎಂಟತ್ತು ಜನ ಪೊಲೀಸರು ಅವತ್ತು ಸಾವನಪ್ಪುತ್ತಿದ್ರು. ಪೊಲೀಸ್ ಠಾಣೆ ಮೇಲೆ ಕಲ್ಲೆಸೆದು ದಾಂದಲೆ ಮಾಡಿದ್ರು. ಡಿಜೆಹಳ್ಳಿ,ಕೆಜೆಹಳ್ಳಿ ರೀತಿಯಲ್ಲಿ ಘಟನೆ ಪುನರಾವರ್ತನೆ ಆಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಕರಣ ಸಂಬಂಧ 160 ಜನರನ್ನ ಪೊಲೀಸರು ಜೈಲಿಗೆ ಕಳಿಸಿದ್ರು.ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿತ್ತು. ಇಷ್ಟೆಲ್ಲಾ ಆದ್ರು ಅಮಾಯಕರು ಅಂತಾ ಪಟ್ಟ ಕಟ್ಟಿ ಪ್ರಕರಣ ಹಿಂಪಡೆದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಕೂಡ ಇದೆ, ಚಾರ್ಜ್ ಶೀಟ್ ಸಲ್ಲಿಕೆಯಾದ ಮೇಲೆ ಕೇಸ್ ಹಿಂಪಡೆಯಲು ಸಾಧ್ಯವಿಲ್ಲ ಅಂತ ಹೇಳಿದೆ. ಆದರೆ ರಾಜ್ಯ ಸಚಿವ ಸಂಪುಟದಲ್ಲಿ ಈ ನಿರ್ಣಯ ಆಘಾತ ಉಂಟುಮಾಡಿದೆ ಎಂದರು. 

ರೈತರು, ವಿದ್ಯಾರ್ಥಿಗಳು, ಸಾಮಾಜಿಕ ಹೋರಾಟಗಾರರ ಮೇಲೆ ಹಿಂಪಡೆದ್ರೆ ಯಾರು ಪ್ರಶ್ನೆ ಮಾಡಲ್ಲ. ಈ ರೀತಿ ಗಲಭೆಕೋರರನ್ನ, ಅಶಾಂತಿ ಸೃಷ್ಟಿಸುವವರನ್ನ, ಪ್ರಾಣ ಹಾನಿ ಮಾಡುವವರ ಕೇಸ್ ಹಿಂಪಡೆದ್ರೆ ನಾಳೆ ಶಾಂತಿ ಸುವ್ಯವಸ್ಥೆ ಗತಿ ಏನಾಗುತ್ತದೆ. ಕಾಂಗ್ರೆಸ್ ಒಂದು ಮತ ಬ್ಯಾಂಕಿಗಾಗಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು. 

ಗಲಭೆ ಕೋರರಿಗೆ ಕೆಟ್ಟ ಮೆಸೇಜನ್ನು ಸರ್ಕಾರ ಕೊಡುತ್ತಿದೆ. ಓಟು ಬ್ಯಾಂಕಿಗಾಗಿ ರಾಜ್ಯ ಸರ್ಕಾರ ಕೀಳು, ಹೇಸಿಗೆ ಮಟ್ಟಕ್ಕೂ ಇಳಿಯಲು ಮುಂದಾಗಿದೆ. ಈ ನಿರ್ಧಾರವನ್ನು ರಾಜ್ಯ ಸರ್ಕಾರ ಕೂಡಲೇ  ಕೈ ಬಿಡಬೇಕು. ಗಲಭೆ ಕೋರರಿಗೆ ತಕ್ಕ ಶಿಕ್ಷೆ ಆಗಬೇಕು. ನಾನು ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close