Girl in a jacket

ಮೂಡಾ ಹಾಗೂ ವಾಲ್ಮೀಕಿ ಹಗರಣ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ-ಜ್ಞಾನೇಂದ್ರ



ಸುದ್ದಿಲೈವ್/ತೀರ್ಥಹಳ್ಳಿ

ಎರಡು ರಾಜ್ಯದ ಚುನಾವಣಾ ಫಲಿತಾಂಶ ನೋಡಿ ಅತ್ಯಂತ ಸಂತೋಷವಾಯ್ತು ಶಿವಮೊಗ್ಗದಲ್ಲಿ ‌ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿ 25 ಸೀಟ್ ಗೆಲ್ಲಲ್ಲ ಅಂತಾ ಮೀಡಿಯಾದಲ್ಲಿ ಸಮೀಕ್ಷೆ ಹೇಳಿತ್ತು. ಆದರೆ ಚುನಾವಣೆ ಫಲಿತಾಂಶವೇ ಬೇರೆಯಾಗಿದೆ ಎಂದರು. 

ಎಲ್ಲಾ ಸಮೀಕ್ಷೆಯನ್ನು ಹರಿಯಾಣ ಮತದಾರರು ಸುಳ್ಳು ಮಾಡಿದ್ದಾರೆ. ಹರಿಯಾಣದಲ್ಲಿ 3 ನೇ ಬಾರಿ ಬಿಜೆಪಿ ಗೆಲ್ಲಿಸುವ ಮೂಲಕ ಇಡಿ ದೇಶಕ್ಕೆ ಸಂತೋಷ ಕೊಟ್ಟಿದ್ದಾರೆ. 3-4 ಅಂಶಗಳು ಬಿಜೆಪಿ ಸೋಲಿಗೆ ಕಾರಣ ಆಗ್ತದೆ ಅಂತಾ ವಿಶ್ಲೇಷಣೆ ಮಾಡಿದ್ದರು. 

ಜಾಟ್ ಸಮುದಾಯ ಬಿಜೆಪಿ ಜೊತೆಯಲ್ಲಿ ಇಲ್ಲ ಅಂದಿದ್ದರು. ರಾಜ್ಯದ ಚುನಾವಣಾ ಮಟ್ಟಿಗೆ ಮೋದಿ ಶಕ್ತಿ ಫಲಿತಾಂಶ ಕೊಡಲ್ಲ ಅಂದಿದ್ದರು. 3 ನೇ ಬಾರಿ ಚುನಾವಣೆ ಆಗಿದ್ದರಿಂದ ಆಡಳಿತ ವಿರೋಧಿ ಅಲೆ ಇದೆ ಅಂತಿದ್ದರು. ಇವೆಲ್ಲಾ ಅಂಶ ಸುಳ್ಳು ಮಾಡಿ ಬಿಜೆಪಿ ದೇಶಕ್ಕೆ ಹರಿಯಾಣಕ್ಕೆ, ಜಮ್ಮು ಕಾಶ್ಮೀರಕ್ಕೆ ಅಗತ್ಯವಿದೆ ಅಂತಾ ತೋರಿಸಿಕೊಟ್ಟಿದ್ದಾರೆ ಎಂದರು. 

ರಾಹುಲ್ ಗಾಂಧಿ ಎಲ್ಲಾ ಕಡೆ ಪ್ರಚಾರ ಮಾಡಿದ್ದರು. ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಗೆ ಸೋಲಾಗುತ್ತದೆ ಎಂಬುದನ್ನ ಹರಿಯಾಣ ಜನ ಸಾಭೀತುಗೊಳಿಸಿದ್ದಾರೆ. ಇದು ರಾಹುಲ್ ಗಾಂಧಿ ಭವಿಷ್ಯಕ್ಕೆ ಮಾರಕವಾಗಿದೆ ಎಂದರು. 

ರಾಜ್ಯದ ಮುಡಾ ಹಗರಣ, ವಾಲ್ಮೀಕಿ ಹಗರಣ ಚುನಾವಣಾ ಪ್ರಚಾರದ ವೇಳೆ ವರ್ಕ್ ಆಯ್ತು‌. ದಲಿತರ ದುಡ್ಡನ್ನು ತಿಂದಿದ್ದಾರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂ ಹಗರಣದಲ್ಲಿ ಸಿಲುಕಿದ್ದಾರೆ ಅಂತಾ ಅಲ್ಲಿಯ ಜನರಿಗೆ ಗೊತ್ತಾಯ್ತು. ಕಾಂಗ್ರೆಸ್ ಭ್ರಷ್ಟಾಚಾರಿಗಳ ಪಕ್ಷ ಅಂತಾ ಗೊತ್ತಾಯ್ತು. ಹಾಗಾಗಿ ಕಾಂಗ್ರೆಸ್ ಸೋಲಿನ ದವಡೆಗೆ ಸಿಲುಕಿದೆ ಎಂದರು. 

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಒಳ್ಳೆಯ ಸೀಟ್ ಗೆದ್ದಿದೆ. ಮುಸ್ಲಿಂ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಹ ರಾಜ್ಯ ಅದು. ಎಲ್ಲರೂ ಒಗ್ಗಟ್ಟಾಗಿ ಬಿಜೆಪಿ ವಿರೋಧವಾಗಿ ಓಟು ಕೊಟ್ಟಿದ್ದಾರೆ. ಆದರೂ ಒಳ್ಳೆಯ ಸಂಖ್ಯೆಯಲ್ಲಿ ಬಿಜೆಪಿಯವರು ಗೆದ್ದಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಜೆಪಿ ಸ್ಥಾಪನೆ ಮಾಡ್ತು. ಕಾಂಗ್ರೆಸ್ ಏನು ಹೆಚ್ಚಿನ ಸ್ಥಾನ ಗೆದ್ದಿಲ್ಲ, ಏನು ಪ್ರಯೋಜ‌ನ ಇಲ್ಲ ಎಂದು ದೂರಿದರು. 

ಈಡಿ ದೇಶದಲ್ಲಿ ಸಂತೋಷದ ವಾತಾವರಣ, ಮೋದಿ ಅವರ ಕೈ ಬಲಪಡಿಸಿದೆ. ಜಮ್ಮು ಮತ್ತು ಕಾಶೀರದ ಜನ  ಬಿಜೆಪಿಯ ಸಿದ್ದಾಂತ ಒಪ್ಪಿಕೊಂಡಿದ್ದಾರೆ, ಅಭಿವೃದ್ಧಿಗೆ ಮತ ಹಾಕಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹಾಗು ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಗರಣ ಹೊಡೆತ ಕೊಟ್ಟಿದೆ.‌ ಸಿದ್ದರಾಮಯ್ಯ ಅವರು ಗೌರವದಿಂದ ರಾಜೀನಾಮೆ ಕೊಟ್ಟು ಇಳಿಯೋದು ಒಳ್ಳೆಯದು. ಹರಿಯಾಣದಲ್ಲಿ ಪಕ್ಷವನ್ನ ಗೆಲ್ಲಿಸಿದ ಜನತೆಗೆ ಹಾಗೂ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close