ಸುದ್ದಿಲೈವ್/ಶಿವಮೊಗ್ಗ
ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಸಿನಿಮಾತೆರೆ ಕಂಡಿದೆ. ಸಿನಿಮಾ ನೋಡಿದ ದೃವ ಸರ್ಜಾರ ಅಭಿಮಾನಿಗಳಿಗೆ ಹಬ್ಬದೂಟವಾಗಿದೆ. ಆದರೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಿನಿಮಾದಲ್ಲಿ ಕಥೆ ಬಿಟ್ಟು ಎಲ್ಲವೂ ಇದೆ ಎಂಬ ಮಾತನ್ನ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.
ಪಕ್ಕಾ ಕಮರ್ಷಿಯಲ್ ಆಗಿ ನಿರ್ದೇಶಕ ಎ.ಪಿ.ಅರ್ಜುನ್ ಕಟ್ಟಿಕೊಟ್ಟಿದ್ದಾರೆ. ಮಸಾಲೆ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಸಿನಿಮಾ ಆರಂಭದಿಂದ ಅಂತ್ಯದ ವರೆಗೆ ಆಕ್ಷನ್ ಗೆ ಕಡಿಮೆಯಿಲ್ಲ. ಹಾಗಾಗಿ ಆರ್ಭಟ ಮತ್ತು ಆಕ್ಷನ್‌ನ್ನೇ ಹೆಚ್ಚಾಗಿ ಬಿಂಬಿತವಾಗಿದೆ.
ಪಾಕಿಸ್ತಾನದಲ್ಲಿ ಸೆರೆಸಿಕ್ಕ ಭಾರತೀಯನಾಗಿ ಹೀರೋ ಕಾಣಿಸಿಕೊಳ್ಳುತ್ತಾನೆ. ಆದರೆ ಆತನಿಗೆ ತಾನು ಯಾರು ಎಂಬುದೇ ನೆನಪಿರುವುದಿಲ್ಲ. ತನ್ನ ಐಡೆಂಟಿಟಿ ಏನು ಎಂಬುದನ್ನು ಹುಡುಕಿಕೊಂಡು ಹೊರಟಾಗ ಅನೇಕ ಸಂಗತಿಗಳು ಮತ್ತು ಸವಾಲುಗಳು ಎದುರಾಗುತ್ತವೆ. ತನಗೆ ಎದುರಾದ ಕಷ್ಟಗಳಿಗೆಲ್ಲ ಮಾರ್ಟಿನ್ ಎಂಬುವವನು ಕಾರಣ ಎಂಬುದು ತಿಳಿಯುತ್ತದೆ. ಹಾಗಾದ್ರೆ ಆ ಮಾರ್ಟಿನ್ ಯಾರು? ಆತ ಎಲ್ಲಿದ್ದಾನೆ? ಆತನ ಹಿನ್ನೆಲೆ ಏನು ಎಂಬುದನ್ನು ವಿವರಿಸುತ್ತಾ ಸಾಗುತ್ತದೆ ಈ ಸಿನಿಮಾದ ಕಥೆ.
ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರು ‘ಮಾರ್ಟಿನ್’ ಸಿನಿಮಾಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ. ಅದರ ಪರಿಣಾಮವಾಗಿ ಈ ಸಿನಿಮಾದ ಎಲ್ಲ ದೃಶ್ಯಗಳು ಅದ್ದೂರಿಯಾಗಿ ಮೂಡಿಬಂದಿದೆ. ಆ್ಯಕ್ಷನ್ ಸನ್ನಿವೇಶಗಳಿಗಾಗಿ ಸಾಕಷ್ಟು ಹಣವನ್ನು ಸುರಿಯಲಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣದಿಂದ ಎಲ್ಲ ಫ್ರೇಮ್ಗಳು ರಿಚ್ ಆಗಿವೆ.
ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತದಲ್ಲಿ ಅಬ್ಬರ ಹೆಚ್ಚಿದೆ. ಗ್ರಾಫಿಕ್ಸ್ ವಿಚಾರದಲ್ಲಿ ಪ್ರೇಕ್ಷಕರ ನಿರೀಕ್ಷೆ ಇನ್ನೂ ಜಾಸ್ತಿ ಇತ್ತು. ಅಲ್ಲಿ ಚಿತ್ರತಂಡ ಕೊಂಚ ಎಡವಿದಂತಿದೆ. ಧ್ರುವ ಸರ್ಜಾ ಅವರು ಈ ಸಿನಿಮಾದಲ್ಲಿ ಎರಡು ಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶೇಡ್ನಲ್ಲಿ ತುಂಬ ನಟೋರಿಯಸ್ ಆಗಿ ಕಾಣಿಸುವ ಅವರು ಇನ್ನೊಂದರಲ್ಲಿ ಪೂರ್ತಿ ವಿರುದ್ಧವಾದ ಪಾತ್ರವನ್ನು ಮಾಡಿದ್ದಾರೆ. ಕಥೆಯಲ್ಲಿ ಪ್ರೀತಿ, ಪ್ರೇಮ, ರೊಮ್ಯಾನ್ಸ್ಗೆ ಹೆಚ್ಚಿನ ಜಾಗ ಇಲ್ಲ. ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವಂತನ ಮೆಲೋಡ್ರಾಮಾ ಕೂಡ ಇಲ್ಲ. ಅದರ ಬದಲು ಸಂಪೂರ್ಣ ಆ್ಯಕ್ಷನ್ಮಯವಾಗಿದೆ ‘ಮಾರ್ಟಿನ್’ ಪ್ರಪಂಚ.
ಇಂದು ಮಲ್ಲಿಕಾರ್ಜುನ ಚಲನಚಿತ್ರ ಮಂದಿರದಲ್ಲಿ ಬೆಳಿಗ್ಗೆ 6-30 ಕ್ಕೆ ಫ್ಯಾನ್ಸ್ ಸಿನಿಮಾ ಮಲ್ಲಿಕಾರ್ಜುನ ಚಲನಚಿತ್ರ ಮಂದಿರದಲ್ಲಿ ಪ್ರದರ್ಶನಗೊಂಡಿದೆ. ಆಕ್ಷನ್ ಪ್ರಿನ್ಸ್ ದೃವ ಸರ್ಜಾ ನ ಕಟೌಟ್‌ನ್ನ ನಿರ್ಮಿಸಿ ಹಾಲಿನ ಅಭಿಷೇಕ ಮಾಡಲಾಗಿದೆ. ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಂಭ್ರಮಾಚರಣೆಯ ವ್ಯವಸ್ಥೆ ಮಾಡುವಲ್ಲಿ ದೃವ ಸರ್ಜಾರ ಅಭಿಮಾನಿಳಾದ ಪ್ರವೀಣ, ಅಜಿತ್ ಹಾಗೂ ಅಭಿ ಎಂಬುವರ ಶ್ರಮ ಹೆಚ್ಚಿದೆ.