ಬನ್ನಿ ಕಡಿಯುವ ಹಬ್ಬ ಮಂಗಳವಾರನಾ ಅಥವಾ ಶನಿವಾರನಾ?


ಸುದ್ದಿಲೈವ್/ಶಿವಮೊಗ್ಗ

ಮಹಾನಗರ ಪಾಲಿಕೆಯಿಂದ ನಡೆಯುವ ದಸರಾ ಆಹ್ವಾನ ಪತ್ರಿಕೆಯಲ್ಲಿ ವಿಜಯ ದಶಮಿ ಹಬ್ವದ ಅಂಗವಾಗಿ ನಡೆಯು ಕಾರ್ಯಕ್ರಮದ ದಿನ ತಪ್ಪಾಗಿ ಅಚ್ಚಾಗಿರುವುದರಿಂದ ಚರ್ಚೆಗೆ ಗ್ರಾಸವಾಗಿದೆ. ಸರಿಯಾದ ದಿನ ಮಂಗವಾರನಾ ಅಥವಾ ಶನಿವಾರನಾ? ಎಂಬ ಗೊಂದಲ ಮೂಡಿದೆ. 

ಅ.12 ರಂದು ಮಂಗಳವಾರ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದೆ ಎಂದು ತಪ್ಪಾಗಿ ಪ್ರಿಂಟ್ ಆಗಿರುವ ಆಹ್ವಾನ ಪತ್ರಿಕೆ ಎಲ್ಲರ ಕೈ ಸೇರಿದ ಪರಿಣಾಮ ಚರ್ಚೆಗೆ ಗ್ರಾಸವಾಗಿದೆ. 

ಆಹ್ವಾನ ಪತ್ರಿಕೆ ಮಾಡಿಸುವ ಮುಂಚೆ ಹಲವು ಬಾರಿ ಕರಡು ತಿದ್ದುಪಡಿ ಮಾಡಲಾಗತ್ತದೆ. ಆದರೆ ಕಣ್ಷತಪ್ಪಿನಿಂದ ನಡೆದ ಈ ಪ್ರಿಂಟ್ಂಗ್ ಮಿಸ್ಟೇಕ್ ಆಹ್ವಾನ ಪತ್ರಿಕೆ ಹೊರಬಿದ್ದ ನಂತರ ಸಾರ್ವಜನಿಕವಾಗಿ ಹಂಚಿಕೆಯಾಗಿರುವುದರಿಂದ ಚರ್ಚೆಗೆ ಗ್ರಾಸವಾಗಿದೆ. 

ತಪ್ಪು ಸಹಜವಾಗಿರುತ್ತದೆ. ಆದರೆ ಪಂಡಿತೋತ್ತಮರ ಕೈಗೆ ಇಂತಹ ಆಹ್ವಾನ ಪತ್ರಿಕೆ ಸಿಕ್ಕಾಗ ಚರ್ಚೆಯಾಗುವುದು ಸಹಜ. ಶನಿವಾರ ಅ.12 ರಂದು ವಿಜಯದಶಮಿ ಹಬ್ಬ ನಡೆಯಲಿದ್ದು ಅಂದೇ ಬನ್ನಿ ಕಡಿಯುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಮಂಗಳವಾರ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಿಂಟ್ ಆಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close