ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಸನ್ಮಾನ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಪ್ರೆಸ್ ಟ್ರಸ್ಟ್, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆಯ ವತಿಯಿಂದ ಹನುಮಂತ ರಾಯ ಪ್ರಶಸ್ತಿ ಪಡೆದ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್ ಮಂಜುನಾಥ್, ಡಿಜಿಟಲ್ ವಾಹಿನಿ ಸಂಪಾದಕ ಹೊನ್ನಾಳಿ ಚಂದ್ರು ಅವರಿಗೆ ಅಭಿನಂದನಾ ಸಮಾರಂಭ ನಡೆದಿದೆ. 

ಆರ್ ಟಿ ಒ ಕಚೇರಿ ರಸ್ತೆಯಲ್ಲಿರುವ ಪತ್ರಿಕಾಭವನದಲ್ಲಿ ಈ ಕಾರ್ಯಕ್ರಮ ಜರುಗಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಗೋಪಾಲ ಯಡಗೆರೆ ಎನ್ ಮಂಜುನಾಥ್ ಅವರು ಕ್ರಾಂತಿದೀಪ ಆರಂಭದ ವೇಳೆಯಲ್ಲಿ ಮಾಡಿರುವ ಸೌಂಡ್ ಗೆ ಶಿವಮೊಗ್ಗವನ್ನ ಅಲುಗಾಡಿಸಿತ್ತು. 

ಮಂಜುನಾಥ್ ಅವರಿಗೆ ಹೊಂದಾಣಿಕೆಯ ಜೀವನ ನಡೆಸಿದವರಲ್ಲ ಸವಾಲನ್ನ ಎದುರಿಸಿಕೊಂಡು ಬಂದವರು, ಇವರ ಹೋರಾಟದ ಹಿಂದೆ ಅವರ ಪತ್ನಿಯ ಶ್ರಮವೂ ಇದೆ. 40 ವರ್ಷದ ಪತ್ರಿಕೋದ್ಯಮ ನಡೆಸಿಕೊಂಡು ಬಂದವರ ಪಾಳೆಯದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು ಅನೇಕರಿದ್ದರೆ. ಶಿವಮೊಗ್ಗ ಪತ್ರಿಕೋದ್ಯನದಲ್ಲಿ ಅವರ ಶಿಷ್ಯಂದಿರೆ ಹೆಚ್ಚು  ಎಂದರು. 

ಹೊನ್ನಾಳಿ ಚಂದ್ರು ಸಹ ಹೋರಾಟದ ಹಿನ್ನಲೆಯಲ್ಲಿ ಬಂದವರು. ಕನ್ನಡ ಪ್ರಭ ದಿನಪತ್ರಿಜೆಯಲ್ಲಿ ವರದಿಗಾರರಾಗಿ ಬಂದ ಹೊನ್ನಾಳಿ ಚಂದ್ರು ಈಗ ಡಿಜಿಟ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅವರಿಗೂ ಒಳ್ಳೆಯದಾಗಲಿ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close