Girl in a jacket

ಸಮಗ್ರ ಹಿಂದೂಗಳ ರಕ್ಷಣೆಗಾಗಿ ಬ್ರಿಗೇಡ್ ಸ್ಥಾಪನೆ-ಈಶ್ವರಪ್ಪ

 


ಸುದ್ದಿಲೈವ್/ಶಿವಮೊಗ್ಗ

ಸನಾತನ ಸಾಧು ಸಂತರ ಮಾರ್ಗದರ್ಶನದಲ್ಲಿ ಬ್ರಿಗೇಡ್ ಮುಂದೆ ಸಾಗಲಿದ್ದು, ಬ್ರಿಗೇಡ್ ಅಡಿಯಲ್ಲಿ ಸಮಗ್ರ ಹಿಂದೂಗಳ ರಕ್ಷಣೆ ನಡೆಸಲಾಗುವುದು ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು. 

ಮಾಧ್ಯಗಳಿಗೆ ಮಾತನಾಡಿದ ಅವರು, ಪೇಜಾವರ ಶ್ರೀಗಳಿಗೂ ನನಗೂ ಕೃಷ್ಣ ಮತ್ತು ಕನಕನ ಸಂಬಂಧವಿದೆ ಎಂದು ಆರಂಭಿಸಿದರು. ಅಸ್ಪೃಶ್ಯ ಹೋರಾಟಕ್ಕೆ ಸ್ಪೂರ್ತಿಯಾದವರು ಹಿಂದಿನ ಪೇಜಾವರ ಶ್ರೀಗಳಾಗಿದ್ದಾರೆ. ಈಗಿನ ಶ್ರೀಗಳು ಮತ್ತು ಹಿಂದಿನ ಶ್ರೀಗಳ ಜೊತೆ ಅವಿನಾಭಾವ ಸಂಬಂಧವಿದೆ.  ಹೊಸಪೇಟೆಗೆ ಹೊರಟ ವಿಶ್ವಪ್ರಸನ್ನ ಶ್ರೀಗಳು ನಮ್ಮ ಮನೆಗೆ ಭೇಟಿ ಕೊಟ್ಟಿದ್ದಾರೆ. ಇದೊಂದು ಸೌಹಾರ್ಧ ಭೇಟಿ ಎಂದರು. 

ನಿನ್ನೆ 100 ಜನ‌ ಬಾಗಲಕೋಟೆಯಲ್ಲಿ ಸಾಧು ಸಂತರು ಬ್ರಿಗೇಡ್ ಸಭೆಗೆ ಸೇರಿದ್ದರು. ಬ್ರಿಗೇಡ್ ನ ಹೆಸರು ಮತ್ತು ಉದ್ದೇಶ ಏನುಎಂಬುದು ಚರ್ಚೆ ಆಗಿದೆ. ಹಿಂದೂ ಬಾಂಧವರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಬ್ರಗೇಡ್ ರಚನೆ ಆಗಲು ತೀರ್ಮಾನಿಸಲಾಗಿದೆ.  ಸಂಕ್ರಾಂತಿಯ ಸಂದರ್ಭದಲ್ಲಿ ಬ್ರಿಗೇಡ್ ಗೆ ಹೆಸರು ಏನು ಎಂಬುದು ತೀರ್ಮಾನಿಸಲಾಗುವುದು. ಸಂಕ್ರಾಂತಿಯ ವೇಳೆ ಸ್ವಾಮಿಗಳು ಭಾಗಿಯಾಗಲಿದ್ದಾರೆ. ಮುಂದಿನ ಕಾರ್ಯ ಚಟುವಟಿಕೆ ಏನು ಎಂಬುದು ನಡೆಯಲಿದೆ ಎಂದರು.

ಅಲ್ಲಿಯವರೆಗೆ ಸಾಧು ಸಂತರೇ ಪ್ರವಾಸ ಮಾಡಿ ಬ್ರಿಗೇಡ್ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಸನಾತನ ಸಾಧು ಸಂತರ ಮಾರ್ಗದರ್ಶನದಲ್ಲಿ ಬ್ರಿಗೇಡ್ ಮುಙದೆ ಸಾಗಲಿದೆ. ಇಲ್ಲಿಯವರೆಗೆ ಹಿಂದೂಗಳ ರಕ್ಷಣೆ‌ಆಗಲಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ಪೊಲೀಸರನ್ನ ರಕ್ಷಣೆ ಮಾಡಿಕೊಳ್ಳಲಾಗದ ಸರ್ಕಾರ,  ಗಣಪತಿ ಮೆರವಣಿಗೆಯ ವೇಳೆಯ ಗಲಾಟೆ ಹಾಗೂ ಹುಬ್ಬಳ್ಳಿಯ ಠಾಣೆ ಮೇಲೆ ದಾಳಿ ಈ ಎಲ್ಲಾ ಪ್ರಕರಣಗಳಲ್ಲಿ ಹಿಂದೂಗಳು ಆರೋಪಿ ಎಂದು ಬಿಂಬಿಸಿ ಬಂಧಿಸಲಾಗಿದೆ. ಇವರ ಕೈಯಲ್ಲಿ ಹಿಂದೂ ಸುರಕ್ಷಿತನಾಗುತ್ತಾನೆಯೇ? ಹಾಗಾಗಿ ಬ್ರಿಗೇಡ್ ಹುಟ್ಟು ಹಾಕುವುದು ಅನಿವಾರ್ಯ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live