ಸುದ್ದಿಲೈವ್/ಶಿವಮೊಗ್ಗ
ಅನಾರೋಗ್ಯದಿಂದ ಬಳಲುತ್ತಿದ್ದ ಎನ್.ಜೆ ರಾಜಶೇಖರ್ (ಸುಭಾಶ್) (72) ವಿಧಿವಶರಾಗಿದ್ದಾರೆ. ಸುಭಾಶ್ ಅನಾರೋಗ್ಯದ ಹಿನ್ನಲೆಯಲ್ಲಿ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು.
ಲಿವರ್ ಕ್ಯಾನ್ಸರ್ ನಿಂದ ಬಳಲುತಿದ್ದ ಸುಭಾಶ್ ಲೋಕಸಭಾ ಚುನಾವಣೆಯ ವೇಳೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೂರು ವಾರದ ಹಿಂದೆ ನಂಜಪ್ಪ ಆಸ್ಪತ್ರೆಗೆ ದಾಖಲಾದವರು ಇಂದು ಕೊನೆ ಉಸಿರು ಎಳೆದಿದ್ದಾರೆ.
ಶಿವಮೊಗ್ಗದಲ್ಲಿ ನಗರ ಸಭೆ ಇದ್ದಾಗ ಸುಭಾಶ್ ಅಧ್ಯಕ್ಷರಾಗಿದ್ದರು, ಬಿಜೆಪಿ ಪಕ್ಷದಲ್ಲಿ ಉತ್ತಮ ಸೇವೆ ಮಾಡಿಕೊಂಡು ಬಂದಿದ್ದ ಇವರು ಬಸವೇಶ್ವರ ಸಮಾಜದ ಅಧ್ಯಕ್ಷರು ಆಗಿ ಸೇವೆ ಸಲ್ಲಿಸಿದ್ದರು. ನಾಲ್ಕು ಭಾರಿ ನಗರ ಸಭೆ ಸದಸ್ಯರಾಗಿ ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಶ್ರೀಯುತರು ಪತ್ನಿ, ಪುತ್ರ, ಇಬ್ಬರು ಹೆಣ್ಣಮಕ್ಕಳನ್ನ ಅಗಲಿದ್ದಾರೆ. ನಾಳೆ ಮಧ್ಯಹ್ನ ಮತ್ತೋಡಿನಲ್ಲಿರುವ ತೋಟದಲ್ಲಿ ನೆರವೇರಲಿದೆ. ವೀರಶೈವ ಕಲ್ಯಾಣ ಮಂಟಪದ ಅಧ್ಯಕ್ಷರಾಗಿದ್ದರು.