ಸುದ್ದಿಲೈವ್/ಹೊಳೆಹೊನ್ನೂರು
ಸಮೀಪದ ಕೂಡ್ಲಿಯ ತುಂಗಾಭದ್ರ ಸಂಗಮದಲ್ಲಿ ಮುಳುಗಿ ಯುವಕ ಹರ್ಷಿತ್ (೨೩) ನಾಪತ್ತೆಯಾಗಿದ್ದಾನೆ.
ಹೊಳಲ್ಕೆರೆಯಿಂದ ಕುಟುಂಬಸ್ಥರೊಂದಿಗೆ ಬುಧವಾರ ಕೂಡ್ಲಿಯ ತುಂಗಾ ಭದ್ರ ಸಂಗಮದಲ್ಲಿ ಮಹಾಲಯ ಅಮವಾಸ್ಯೆ ಪೂಜೆ ನೆರವೇರಿಸಲು ಬಂದಿದ ಯುವಕ ಪೂಜೆ ನೆರವೇರಿಸಿ ಸ್ನಾನ್ನಕೆಂದು ಸಂಗಮಕ್ಕಿಳಿದಾಗ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ಸಂಗಮದ ತುಂಗಾಭದ್ರ ನದಿಯಲ್ಲಿ ಯುವಕನ ಶೋದಕಾರ್ಯ ನಡೆಸಿದರು. ಸಂಜೆಯಾದರು ಯುವಕನ ಪತ್ತೆಯಾಗಿರಲಿಲ್ಲ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.