ಬಟ್ಟೆಮಲ್ಲಪ್ಪ ಸಮೀಪದಲ್ಲಿ ಚಿರತೆ ಪ್ರತ್ಯಕ್ಷ - ಆತಂಕದಲ್ಲಿ ಗ್ರಾಮಸ್ಥರು


ಸುದ್ದಿಲೈವ್/ರಿಪ್ಪನ್‌ಪೇಟೆ

ಇಲ್ಲಿನ ಬಟ್ಟೆಮಲ್ಲಪ್ಪ ಸಮೀಪದ ಹಲುಸಾಳೆ ಮಳವಳ್ಳಿ ಗ್ರಾಮದ ದೇವಸ್ಥಾನದ ಹಿಂಭಾಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಮಳವಳ್ಳಿ ಗ್ರಾಮದ ದಿನೇಶ್ ಎಂಬುವವರು ಇಂದು ಬೆಳಿಗ್ಗೆ ಹಾಲು ತರಲು ತೆರಳುತಿದ್ದ ವೇಳೆಯಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.

ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಿಗೆ ಭಯ ಮೂಡಿಸಿದ್ದು ಸಾಕು ಪ್ರಾಣಿಗಳು ಹಾಗೂ ದನಕರುಗಳಿಗೆ ಕಂಟಕವಾಗುವ ಭೀತಿ ಎದುರಾಗಿದೆ.ಚಿರತೆ ಕೆಲ ಗ್ರಾಮಸ್ಥರಿಗೆ ಕಂಡಿದೆಯಾದರೂ ಅರಣ್ಯ ಇಲಾಖೆ ಸಿಬ್ಬಂದಿಗೆ ಜಾಡು ಹಿಡಿಯಲು ಅಸಾಧ್ಯವಾದ ಕಾರಣ ಗ್ರಾಮಸ್ಥರೇ ಚಿರತೆ ಹೆಜ್ಜೆ ಫೊಟೋ‌ ತೆಗೆದು ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ದಯವಿಟ್ಟು ಚಿರತೆಯನ್ನು ಸೆರೆ ಹಿಡಿಯಿರಿ ಅಥವಾ ಓಡಿಸಿ ಎಂದು ಅರಣ್ಯಾಧಿಕಾರಿಗಳಲ್ಲಿ ಹಲುಸಾಲೆ ಮಳವಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close