ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ ಶೀಘ್ರವೇ ಉದ್ಘಾಟನೆ


ಸುದ್ದಿಲೈವ್/ಶಿವಮೊಗ್ಗ

ಕನ್ನಡ ಚಿತ್ರರಂಗದ ಕಲಾಸೇವೆಯ ಹಿತದೃಷ್ಠಿಯಿಂದ ನೂತನವಾಗಿ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ ಉದ್ಘಾಟನೆ ಮತ್ತು ಶಿವಮೊಗ್ಗ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ -ನೃತ್ಯ ಸಿರಿ 2024 ಸಮಾರಂಭವು ನಡೆಯಲಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪ್ರೊಡಕ್ಷನ್ ನ ರಾಜ್ಯಾಧ್ಯಕ್ಷ ಸುರೇಂದ್ರ ಶಿವಮೊಗ್ಗ, 28 ವರ್ಷಗಳಿಂದ ಕನ್ನಡ, ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ್ದು ಚಿತ್ರರಂಗದ ಪೋಷಕ ಕಲಾವಿದರು ಮತ್ತು ಹೊಸ ಕಲಾವಿದರು, ತಂತ್ರಜ್ಞ ವಿಭಾಗದ ಗಣ್ಯರ ಸಲಹೆ ಮೇರೆಗೆ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ ಸಂಸ್ಥೆ ಆರಂಭಿಸಲಾಗಿದೆ ಎಂದರು. 

ಇಲ್ಲಿ ನುರಿತ 10 ನಿರ್ದೇಶಕರು, 13 ಸಹ ನಿರ್ದೇಶಕರು, 43 ಪೋಷಕ ಕಲಾವಿದರು, 188 ಕ್ಕೂ ಹೆಚ್ಚು ತಂತ್ರಜ್ಞರು ತಂಡ ಮತ್ತು ನನ್ನ ಅತಿ ಆಪ್ತರ ಜೊತೆಗೂಡಿ ನಮ್ಮ ಪ್ರೊಡಕ್ಷನ್ ನಿಂದ ಕಲಾಸಾಧಕರನ್ನ ಪೋಷಿಸಲು ಮುಂದಿನ ದಿನಗಳಲ್ಲಿ ಕಿರುಚಿತ್ರ, ಧಾರವಾಹಿ, ವೆಬ್ ಸೀರಿಯಸ್ ಮತ್ತು ಚಲನಚಿತ್ರಗಳನ್ನ ಆರಂಭಿಸಿ ಕಲಾವಿದರ ಕಷ್ಟಕಾಲದಲ್ಲಿ ಬೆನ್ನಲುಬಾಗಿ ನಿಲ್ಲಲು ಪ್ರಯತ್ನಿಸಲಿದೆ ಎಂದು ಹೇಳಿದರು. 

ಡಿಸೆಂಬರ್ 15 ರಂದು ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ, ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ಸ್ ಅದ್ದೂರಿಯಾಗಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಶಿವಮೊಗ್ಗ ಜಿಲ್ಲಾ ಮಟ್ಟದ ಗುಂಪು, ನೃತ್ಯ ಮತ್ತು ಏಕವ್ಯಕ್ತಿ ನೃತ್ಯ ಸ್ಪರ್ಧೆಯನ್ನ ನೃತ್ಯ ಸಿರಿ-2024 ಎಂಬ ಶೀರ್ಷಿಕೆ ಅಡಿ ನೃತ್ಯ ಸ್ಪರ್ಧೆ ನಡೆಸಲಾಗಿದೆ. 

ನೃತ್ಯ ಸ್ಪರ್ಧೆಯಲ್ಲಿ ತಂಡವಾಗಿ ಭಾಗಿವಹಿಸಲು 1000 ರೂ. ಮತ್ತು ಏಕವ್ಯಕ್ತಿ ನೃತ್ಯಸ್ಪರ್ಧಿ ರೂ.500 ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ. ಡಿ.10 ರ ಒಳಗೆ 9902961495, 8746886787 ( ಅಭಿಷೇಕ್) 8147159559 ( ಶಿವಕುಮಾರ್ ಸಿ.ಆರ್) ರ ಬಳಿ ನೋಂದಾಯಿಸಿಕೊಳ್ಳಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ ನ ರಾಜ್ಯ ಉಪಾಧ್ಯಕ್ಷ ಗುಬ್ಬಿನಟರಾಜ್, ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಮೂಗು ಸುರೇಶ್, ಜಯಪ್ಪ ಎಂ.ಕೆ, ಮೊದಲಾದವರು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close