Girl in a jacket

ವೈರಲ್ ಆಯ್ತು ಕುಡಿಯುವ ನೀರಿನ ಬಾವಿಯಲ್ಲಿರುವ ಮಣ್ಣುಗಳ ರಾಶಿ




ಸುದ್ದಿಲೈವ್/ಶಿವಮೊಗ್ಗ

ವಾಟರ್ ಬೋರ್ಡ್ ನ ಪಂಪ್ ಹೌಸ್ ನಿಂದ ನಗರದ 35 ವಾರ್ಡ್ ಗಳಲ್ಲಿನ ಮನೆಗಳಿಗೆ ಕುಡಿಯುವ ನೀರು ಸರಬರಾಜುವಾಗುತ್ತಿದ್ದು, ಈಗ ಸರಬರಾಜುವಾಗುತ್ತಿರುವ ಮಣ್ಣು ಮಿಶ್ರಿತ ನೀರು ಸರಬರಾಜುವಿನಿಂದ ವಾಟರ್ ಬೋರ್ಡ್ ಅಧಿಕಾರಿಗಳ ವಿರುದ್ಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. 

ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿವೆ. ಅ.08 ರಿಂದ ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಂದ ಕುಡಿಯುವ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ಸರಬರಾಜು ಆಗುತ್ತಿದೆ. ಇದರ ಹಿನ್ನಲೆಯಲ್ಲಿ  ವಾಟರ್ ಬೋರ್ಡ್  ಕುದಿಸಿ ಆರಿಸಿ ನೀರು ಕುಡಿಯಿರಿ ಎಂದು ಹೇಳಿದ್ದೇ ತಡ ಸಂಘಟನೆಗಳು ವಾಟರ್ ಬೋರ್ಡ್ ನ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿರುದ್ಧ ನಿಗಿ ನಿಗಿ ಎನ್ನ ತೊಡಗಿದವು. 

ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಸಂಘಟನೆಗಳು ಯಂತ್ರೋಪಕರಣಗಳು ದುರಸ್ಥಿಯಾಗದ ಹಿನ್ನಲೆಯಲ್ಲಿ,  ಅಧಿಕಾರಿಗಳ ನಿರ್ಲಕ್ಷತನದಿಂದ ಕುಡಿಯುವ ನೀರು ಕಲೂಷಿತಗೊಳ್ಳಲು ಆರಂಭವಾಗಿದೆ. ಇದರಿಂದ ಅನಾರೋಗ್ಯ ಹೆಚ್ಚಾಗಿವೆ ಎಂದು ದೂರಲಾರಂಭಿಸಿದವು. 

ಇದು ಸತ್ಯನೂ ಹೌದು ಎಂಬಂತೆ ಇಂದು ಕುಡಿಯುವ ನೀರಿನ ಬಾವಿಗೆ ಇಳಿದು ಸಿಬ್ಬಂದಿಗಳು ಸ್ವಚ್ಚಗೊಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ನೀರಿನ ಮಣ್ಣುಗಳ ರಾಶಿ ಕಂಡುಬಂದಿದೆ. ಇದನ್ನ ಆಗಾಗ್ಗೆ ಸ್ವಚಛಗೊಳಿಸದೆ ಇರುವುದು ಈ ವಿಡಿಯೋದಿಂದ ತಿಳಿದುಬರುತ್ತಿದೆ. ಯಾವುನೇ ಈ ವಿಡಿಯೋ ನೋಡಿದ್ರು ಈ ನೀರುನ್ನ ನಾನು ನೋಡ್ತಾ ಇದ್ದೀನಾ ಎಂಬ ಆತಂಕಕ್ಕೆ ಒಳಗಾಗುವುದು ಸತ್ಯವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು