Girl in a jacket

ಆಹಾರ ದಸರಾ, ಉಂಡವನೇ ಜಾಣ...!

ಆಹಾರ ದಸರಾದಲ್ಲಿ ಸತತ ನಾಲ್ಕನೇ ಬಾರಿಯ ಗೆಲುವನ್ನ ಮುಡಿಗೇರಿಸಿಕೊಂಡ ಅಣ್ಣನಗರದ ಶಿವಮ್ಮ

ಸುದ್ದಿಲೈವ್/ಶಿವಮೊಗ್ಗ

ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ದಸರಾ ಅಂಗವಾಗಿ ಸಾರ್ವಜನಿಕರಿಗೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ಆಹಾರ ದಸರಾ‌ ನಡೆದಿದೆ. ಆಹಾರ ದಸರದಲ್ಲಿ ಎರಡು ನಿಮಿಷದಲ್ಲಿ  ಯಾರು ಎಷ್ಟು ಇಡ್ಲಿ ಮತ್ತು ಬಾಳೆಹಣ್ಣು ತಿನ್ನುತ್ತಾರೆ ಅವರಿಗೆ ಬಹುಮಾನ ಘೋಷಿಸಲಾಗಿದೆ. 

ಮೊದಲಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ ನಡೆದಿದೆ‌ ಒಂದು ಸಾಲಿನಲ್ಲಿ 15 ಜನ ಅರಣ್ಯ ಇಲಾಖೆ ಸಿಬ್ಬಂದಿಗಳು ಅದರಲ್ಲೂ ಮಹಿಳಾ ಸಿಬ್ಬಂದಿಗಳು ಕುಳಿತು ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. 

ಮೊದಲಿಗೆ ಅರಣ್ಯ ಇಲಾಖೆಯವರಿಗೆ ಬಾಳೆಹಣ್ಣು ಸ್ಪರ್ಧೆ ನಡೆದಿತ್ತು. ಆರಂಭದಲ್ಲಿ ವಿಷಲ್ ಹೊಡೆಯುವ ತನಕ  ಬಾಳೆಹಣ್ಣು ಮತ್ತು ಬಾಳೆಹಣ್ಣಿನ ತಟ್ಟೆ ಮುಟ್ಟಲು ನಿರ್ಬಂಧಿಸಲಾಯಿತು.  ವಿಷಲ್ ಬಿದ್ದ ನಂತರ ಒಂದು ಬಾಳೆಹಣ್ಣು ತಿಂದು ಮುಗಿಸುವ ತನಕ ಮತ್ತೊಂದು ಹಣ್ಣನ್ನ ತಿನ್ನುವ ಹಾಗೆ ಇರಲಿಲ್ಲ ಕಾನೂನು ಜಾರಿಯಲ್ಲಿತ್ತು. 

ಈ ರೂಲ್ಸ್ ಮೂಲಕ ಆರಂಭವಾದ ಸ್ಪರ್ಧೆ ಎರಡು ನಿಮಿಷದಲ್ಲಿ ಯಾರು ಎಷ್ಟು ಬಾಳೆಹಣ್ಣು  ತಿನ್ನುತ್ತಾರೆ ಅವರಿಗೆ ಬಹುಮಾನ ನೀಡಲಾಯಿತು. ಅರಣ್ಯ ಮಹಿಳಾ ಸಿಬ್ಬಂದಿಗಳಿಗೆ ಮೊದಲು ಸ್ಪರ್ಧೆ ನಡೆದಿದೆ. 15 ಜನ ಮಹಿಳ ಸಿಬ್ಬಂದಿಯವರು ಸರದಿಯಲ್ಲಿ ಕುಳಿತು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.  

ಮಂಜುಳಾ ಎನ್  5½ಬಾಳೆಹಣ್ಣು ತಿಂದರೆ ಮೊದಲನೇ ಬಹುಮಾನ ಪಡೆದರು. ರೇಖಾ ಐದು ಕಾಲು ಬಾಳೆಹಣ್ಣು ಎರಡನೇ ಸ್ಥಾನ, ನಾಲ್ಕು ಮುಕ್ಕಾಲು ಬಾಳೆಹಣ್ಣು ತಿಂದ ಶಶಿಕಲಾ ಮೂರನೇಸ್ಥಾನ ಪಡೆದಿದ್ದಾರೆ.  ಪುರುಷರ ವಿಭಾಗದಲ್ಲಿ ಪ್ರಸನ್ನ ಕುಮಾರ್ 9 ಬಾಳೆಹಣ್ಣ ತಿಂದರೆ, 8½ ಬಾಳೆಹಣ್ಣನ್ನ ತಿಂದ ಗಣೇಶ್ ಎರಡನೇಸ್ಥಾನ ಪಡೆದರು. ಮೂರನೇಸ್ಥಾನ ಟೈ ಅಪ್ ಆಗಿತ್ತು, ಎಕ್ಸ ಟ್ರಾ ಎರಡುನಿಮಿಷ ನೋಡಲಾಗಿತ್ತು.‌ 7 ಕಾಲು ಬಾಳೆಹಣ್ಣು ತಿಂದ ಸೆಲ್ವಮಣಿ ಮೂರನೇ ಸ್ಥಾನ ಪಡೆದರು. 

9 ಬಾಳೆಹಣ್ಣನ್ನ ತಿಂದ ಗೀತಾರಿಗೆ ಗೆಲುವಿನ ಭಾಗ್ಯವಿಲ್ಲ


ಸ್ಪರ್ಧೆಯಲ್ಲಿ ಯಡವಟ್ಟು

ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಗೀತಾ ಎನ್ನುವರು 9 ಬಾಳೆಹಣ್ಣು ತಿಂದಿದ್ದರು. ಇವರಿಗೆ ಮೊದಲ ಬಹುಮಾನ ಸಹ ಘೋಷಿಸಲಾಗಿತ್ತು.  ಗೀತಾ ಅರಣ್ಯ ಇಲಾಖೆಯವರು ಅಲ್ಲವೆಂದು ಗೊತ್ತಾದ ನಂತರ ಘೋಷಿಸಲಾಗಿದ್ದ ಮೊದಲ ಸ್ಥಾನವನ್ನ ವಾಪಾಸ್ ಪಡೆಯಲಾಯಿತು. 

ನಂತರ ಸಾರ್ವಜನಿಕರಿಗೆ ಇಡ್ಲಿ ಸ್ಪರ್ಧೆ ನಡೆದಿದೆ. ಮಹಿಳೆಯರಿಗೆ ಮೊದಲ ಸ್ಪರ್ಧೆ ನಡೆದಿತ್ತು.‌ ಈ ಸ್ಪರ್ಧೆ ಸಹ ಎರಡು ನಿಮಿಷದಲ್ಲಿ ಯಾರು ಎಷ್ಟು ಇಡ್ಲಿ ತಿನ್ನುತ್ತಾರೆ ಅವರಿಗೆ ಬಹುಮಾನ ನಿಗದಿಪಡಿಸಲಾಗಿತ್ತು.  

ಕಳೆದ ಬಾರಿ ಗೆದ್ದ ಅಣ್ಣನಗರದ ಶಿವಮ್ಮ 10 ಇಡ್ಡಿ ತಿಂದು ಸತತ ನಾಲ್ಕು ಬಾರಿ ಗೆದ್ದಿದ್ದಾರೆ. ಕಳೆದ ಬಾರಿ ಮುದ್ದೆ,  ಅದಕ್ಕೂ ಹಿಂದೆ ಕಡಬು ತಿಂದು ಶಿವಮ್ಮ ಜಯಭೇರಿ ಭಾರಿಸಿದ್ದರು. ಈ ಬಾರಿಯೂ  ಇವರೇ ಮೊದಲ ಬಹುಮಾನವನ್ನ ಪಡೆದಿದ್ದಾರೆ.  ಇವರು ಅಣ್ಣನಗರದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದು ಅದರ ಅಧ್ಯಕ್ಷ‌ತೆ ಮಾರುತಿ ಯಾಗಿದ್ದಾರೆ. 8 ಇಡ್ಲಿ ತಿಂದ ಧನಲಕ್ಷ್ಮಿ ಎರಡನೇ ಸ್ಥಾನ, 6½ ಇಡ್ಲಿ ತಿಂದ ರಾಜಲಕ್ಷ್ಮೀ ಮೂರನೇ ಸ್ಥಾನ ಪಡೆದಿದ್ದಾರೆ. 


ಪುರುಷರ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ   11½ ಇಡ್ಲಿ ತಿಂದ ಪ್ರವೀಣ್ ಕುಮಾರ್ ಮೊದಲ ಬಹುಮಾನ, 11 ಇಡ್ಲಿ ತಿಂದ ರವಿಕಿರಣ್ ಗೆ ದ್ವಿತೀಯ ಬಹುಮಾನ,  10½ ಇಡ್ಲಿ ತಿಂದ ನಿರಂಜನ್ ತೃತೀಯ ಬಹುಮಾನ ಗೆದ್ದಿದ್ದಾರೆ.‌ ಮೊದಲ ಬಹುಮಾನ ಗ್ರೈಂಡರ್, ಎರಡನೇ ಬಹುಮಾನ ಮಿಕ್ಸಿ, ತೃತೀಯ ಬಹುಮಾನ ಖಡಾಯಿಯನ್ನ ನೀಡಲಾಗಿತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು