ಎನ್.ಜೆ ರಾಜಶೇಖರ್(ಸುಭಾಷ್) ನಿಧನಕ್ಕೆ ಗಣ್ಯರ ಸಂತಾಪ


ಸುದ್ದಿಲೈವ್/ಶಿವಮೊಗ್ಗ

ಎನ್.ಜೆ ರಾಜಶೇಖರ್(ಸುಭಾಷ್) ಅವರ ನಿಧನಕ್ಕೆ ಬಿಜೆಪಿಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಆರ್ ಎಸ್ ಎಸ್ ನ ಪಟ್ಟಾಭಿರಾಮ್  ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ,  ಮೊದಲಾದ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ. 

ಉತ್ತಮ ಸಂಸ್ಕಾರ ಕುಟುಂಬದಿಂದ ಬಂದಿರುವ ರಾಜಶೇಖರ್, ರಾಷ್ಟ್ರೀಯ ಸ್ವಯಂಸೇವಕರಾಗಿ, ವೀರಶೈವ ಸಮಾಜದ ಅಧ್ಯಕ್ಷರಾಗಿ, ವೀರಶೈವ ಕಲ್ಯಾಣ ಮಂದಿರದ ಕಾರ್ಯದರ್ಶಿಯಾಗಿ,  ಭಾರತಿಯ ಜನತ ಪಾರ್ಟಿಯ ಅನನ್ಯ ಬಿಜೆಪಿಯ ಪಕ್ಷದ ಜವಬ್ದಾರಿಗಳನ್ನು ಹೋತ್ತು ಶಿವಮೊಗ್ಗ ನಗರದಲ್ಲಿ ಪಕ್ಷಕ್ಕೆ ದೋಡ್ಡಶಕ್ತಿಯಾಗಿದ್ದರು.

ಶಿವಮೋಗ್ಗ ನಗರಸಭಾ ಅದ್ಯಕ್ಷಾರಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸಮಾಜದ ಹಾಲವಾರು ಉಚಿತ ಸಾಮಜಿಕ ಕಾರ್ಯ ಮಾಡಿದ ದಿಮಂತ ನಾಯಕ ಎನ್.ಜೆ ರಾಜಶೇಖರ್(ಸುಭಾಷ್) ನಿನ್ನೆ ದಿನಾಂಕ 27-10-2024 ಭಾನುವಾರ ರಾತ್ರಿ ನಿದನರಾಗಿರುತ್ತಾರೆ. ಅವರಿಗೆ ದಿವ್ಯ ಅತ್ಯಕ್ಕೆ ಭಗವಂತನು ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಅವರ ಕುಟುಂಬಕ್ಕೆ ಅವರ ಅಭಿಮಾನಿವರ್ಗಕ್ಕೆ ದುಂಖ ಸಹಿಸುವ ಶಕ್ತಿ ಭಗವಂತ ಕರುಣಿಸಲಿ. ಸಂತಾಪ ಸುಚಿಸುವರು ಶಾಸಕರು ಎಸ್ ಎನ್  ಚನ್ನಬಸಪ್ಪ(ಚೆನ್ನಿ), ಶಿವಮೊಗ್ಗ ನಗರ ಅಧ್ಯಕ್ಷರಾದ ಡಿ ಮೋಹನ್ ರೆಡ್ಡಿ , ಎಸ್. ಜ್ಞಾನೇಶ್ವರ, ಎನ್ ಜೆ ನಾಗರಾಜ್, ಎನ್.ಕೆ ಜಗದೀಶ್, ಹೆಚ್ ಕೆ ದೀನದಯಾಳು, ನವುಲೆ ಮಂಜುನಾಥ್,  ಬಿಜೆಪಿ ಶಿವಮೊಗ್ಗ ನಗರ ಸಮಿತಿ ಸಂತಾಪ ಸೂಚಿಸಿದೆ.


ಮನೆಯ ಮುಂದೆ ಶಾಂತಿ ಸಭೆ

ರಾಜಶೇಖರ್ ಅವರ ಮನೆಯ ಮುಂದೆ ಇಂದು ಶಾಂತಿ ಸಭೆ ನಡೆದಿದೆ. ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಟ್ಟಿಗೆ ಭಾಗಿಯಾಗಿ ಅಗಲಿದ ಗಣ್ಯರಿಗೆ ಕಂಬನಿ ಮಿಡಿದಿದ್ದಾರೆ. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ, ಶಾಸಕ ಚೆನ್ನಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಉಪಾಧ್ಯಕ್ಷ ಮರಿಯಪ್ಪ, ಹೆಚ್ ಸಿ ಯೋಗೀಶ್ ಮೊದಲಾದವರು ಭಾಗಿಯಾಗಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮಧ್ಯಾಹ್ನ 2 ರ ನಂತರ ಮತ್ತೋಡು ಗ್ರಾಮದಲ್ಲಿರುವ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close