ನದಿಯ ಕಲ್ಲು ಬಂಡೆಗಳ ಮೇಲೆ ಮಲಗಿದ ವ್ಯಕ್ತಿ-ಅಗ್ನಿಶಾಮಕದಳದಿಂದ ರಕ್ಷಣೆ


ಸುದ್ದಿಲೈವ್/ಶಿವಮೊಗ್ಗ

ನಿನ್ನೆ ರಾತ್ರಿ ಮಳೆ(rain) ಆರಂಭಕ್ಕೂ ಮುನ್ನ ತುಂಗ ನದಿಯ(Tunga River) ದಂಡೆಯ ಮೇಲೆ ಹೋಗಿ ಮಲಗಿದ್ದ ವ್ಯಕ್ತಿಗೆ,  ಬೆಳಿಗ್ಗೆ  ನದಿಯ ನೀರು ಹೆಚ್ಚಾದ ಪರಿಣಾಮ ದಡಕ್ಕೆ ಬರಲು ಆಗದೆ, ನಂತರ ಅಗ್ನಿಶಾಮಕ ದಳದ ಸಿಬ್ವಂದಿಗಳು ರಕ್ಷಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. 

ನಿನ್ನೆ ಗೋಪಾಲ್ s/o ಕಮಲ್ (35 ವರ್ಷ )ಎಂಬ ವ್ಯಕ್ತಿಯು ಶಿವಮೊಗ್ಗದ ತುಂಗಾ ನದಿಯ ಮಧ್ಯದಲ್ಲಿರುವ ಬಂಡೆಯಮೇಲೆ ಹೋಗಿ ಮಲಗಿದ್ದ, ನದಿ ದಾಟಿಕೊಂಡು ಹೋಗುವಾಗ ಮೊಣಕಾಲಿನಷ್ಟು ಇಲ್ಲದ ನದಿಯ ನೀರು ರಾತ್ರಿ ಇಡಿ ಸುರಿದ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾಗಿದೆ. 

ಕಲ್ಲು ಬಂಡೆಯ ತುದಿ ಹೊರತು ಪಡಿಸಿ ಉಳಿದಕಡೆಯೆಲ್ಲಾ ನೀರು ಆವರಿಸಿಕೊಂಡಿದೆ. ಬೆಳಿಗ್ಗೆ ಎಚ್ಚರಗೊಂಡಾಗ ಆತನಿಗೆ ಹೊಳೆ ದಾಟಿ ಬರಲು ಆಗದೆ ದಂಡೆಯ ಮೇಲೆ  ಕೂತಿದ್ದಾನೆ.  ನೀರಿನ ಹರಿವು ಜಾಸ್ತಿ ಆದ ಕಾರಣ ದಡಕ್ಕೆ ಬಾರಲು ಸಾಧ್ಯವಾಗಿರುವುದಿಲ್ಲ. ಚಂದ್ರಶೇಖರಪ್ಪ  ಎಂಬುವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.  

ಕರೆ ಸ್ವೀಕರಿಸಿಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಬೆಳಿಗ್ಗೆ 6 ಗಂಡೆಗೆ  ಸ್ಥಳಕ್ಕೆ ಧಾವಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.‌ ಬೋಟ್ ನಲ್ಲಿ ರಕ್ಷಣೆ ಮಾಡಲಾಗಿದೆ.  ಕಲ್ಲು ಬಂಡೆಯ ಬಳಿ ಬೋಟ್ ಬರುತ್ತಿದ್ದಂತೆ ಸಂತ್ರಸ್ತನನ್ನ ರಕ್ಷಣೆ ಮಾಡುವಾಗ ಬೋಟ್ ಸಹ ದಂಡೆಗೆ ಸಿಲುಕಿ ಕೊಂಚ ಸಮಯ ವಿಳಂಭವಾಗಿತ್ತು.

ಬೋಟ್ ನ ಮೋಟಾರು ಕಲ್ಲು ಬಂಡೆಗೆ ಸಿಲುಕಿದ ಕಾರಣ ರಕ್ಷಣೆ ಕಾರ್ಯವೂ ಸಹ ಕೊಂಚ ತಡವಾಗಿತ್ತು. ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ನಂತರ ರಕ್ಷಣೆ ಕಾರ್ಯ ಚುರುಕುಗೊಂಡಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close