Girl in a jacket

ಸಂಸದರ ಮತ್ತೊಂದು ಯೋಜನೆಗೆ ಹಳೇ ವಿದ್ಯಾರ್ಥಿಗಳ ವಿರೋಧ



ಸುದ್ದಿಲೈವ್/ಶಿವಮೊಗ್ಗ

ಸಹ್ಯಾದ್ರಿ ಕಾಲೇಜಿನ ಆವರಣದ ಮೇಲೆ ಕೆಂಗಣ್ಣು ಬಿದ್ದಿದೆ. ಖೇಲೋ ಇಂಡಿಯಾ ಮಾಡಲು ಮೊದಲು  ಯೋಜಿಸಲಾಗಿತ್ತು.  ಈಗ ಮತ್ತೊಂದು ಯೋಜನೆಯನ್ನ ತರಾತುರಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು  ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗೆ ಸಹ್ಯಾದ್ರಿ ಕಾಲೇಜು ವಿದ್ಯಾ ಕೇಂದ್ರವಾಗಿದೆ. ಆ ಕಾಲೇಜಿನ ಜಾಗದಲ್ಲಿ 7 ಎಕರೆ  ವಿಜ್ಞಾನ ಕೇಂದ್ರಕ್ಕೆ ಬಿಟ್ಟುಕೊಡಲು ಜಿಲ್ಲಾಡಳಿತ ತೀರ್ಮಾನಿಸಿದೆ.  ಮೊದಲು ನವುಲೆ ಬಳಿ ಜಾಗದಲ್ಲಿ ವಿಜ್ಞಾನ ಕೇಂದ್ರ ನಿರ್ಮಿಸಲು ಜಾಗ ಗುರುತಿಸಲಾಗಿತ್ತು. 2022 ರಲ್ಲಿ ಕಮಿಟಿ ರಚಿಸಲಾಗಿತ್ತು. ನವುಲೆ ಜಾಗವನ್ನ ಕೇಂದ್ರ ಕಮಿಟಿ ರದ್ದುಗೊಳಿಸಿತು. ಆಗ ನಾನು ಶಾಸಕನಾಗಿದ್ದೆ. ನಮ್ಮನ್ನ ಸಮಿತಿಯಲ್ಲಿ ಸೇರಿಸಿಕೊಳ್ಳಲೇ ಇಲ್ಲ. ಯಾವಾಗ ನವುಲೆ ಜಾಗ ತಿರಸ್ಕಾರಗೊಂಡಿತೋ ಜಿಲ್ಲಾಧಿಕಾರಿ ಮತ್ತು ಸಂಸದರು ಇರುವ ಕಮಿಟಿ ಸಹ್ಯಾದ್ರಿ ಕಾಲೇಜಿನ ಮೇಲೆ ಕಣ್ಣು ಹಾಕಿತು ಎಂದರು. 

ಆಯನೂರಿನಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಇದೆ. ವಿಜ್ಞಾನಕೇಂದ್ರ ಹೈವೆ ರಸ್ತೆಯ ಬಳಿ ಇದೆ. ಆರಂಭವಾಗದ ಕಾರಣ ನಂತರ ಸಾಯಿ ಸೆಂಟರ್ ಆರಂಭಿಸಲು ಮೊದಲು ಯೋಜಿಸಲಾಗಿತ್ತು. ಆದರೆ ಸಾಯಿ ಸೆಂಟರ್ ಆರಂಭವಾಗದೆ ಇರುವುದರಿಂದ ಅಲ್ಲಿ ಈ ವಿಜ್ಞಾನ ಕೇಂದ್ರವನ್ನ ಯಾಕರ ಆರಂಭಿಸಲಿಲ್ಲ ಎಂದು  ಆಗ್ರಹಿಸಿದರು. ಈ ವಿಜ್ಞಾನಕೇಂದ್ರ ಆರಂಭಕ್ಕೆ 7 ಎಕರೆ ಜಾಗವನ್ನ 30 ವರ್ಷ ಲೀಜ್ ಗೆ ನೀಡಲಾಗುತ್ತಿದೆ. ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನ ಕೇಂದ್ರ ಆರಂಭಿಸಲು ಹಳೇ ವಿದ್ಯಾರ್ಥಿಗಳು ವಿರೋದಿಸುವುದಾಗಿ ಹೇಳಿದರು. 

ಪೆಸಿಟ್ ಕಾಲೇಜಿನಲ್ಲಿ ಸೈನ್ಸ್ ಪಾರ್ಕ್ ಆರಂಭಿಸಿದರೆ ತಮ್ಮ ತಕರಾರು ಇಲ್ಲ. ಇದರ ಆರಂಭಕ್ಕೆ ಘಟನೋತ್ತರ ಅನುಮತಿ ನೀಡಲಾಗಿದೆ. ಅಳತೆ ಮಾಡದೆ ಕಾಮಗಾರಿಗೆ ಅನುಮೋದನೆ ದೊರೆತಿದೆ. ಅಲ್ಲಿ ಹಳೇ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ಆರಂಭಕ್ಕೆ ಜಿಲ್ಲಾಡಳಿತ ತುದಿಗಾಲಿನಲ್ಲಿದೆ. ಇದನ್ನ ಮಾಡಲು ಮುಂದಾದರೆ ಸಂಘರ್ಷದ ಮೂಲಕವೇ ಪ್ರತಿಭಟನೆಗೆ ಇಳಿಯುವುದಾಗಿ ಆಗ್ರಹಿಸಿದರು. 

ಸಂಸದರು ಇದನ್ನ ಹಠಕ್ಕೆ ಬೀಳದೆ ಜಾಗ ಬದಲಿಸಲಿ. ಆಯನೂರು ತಾರಾಲಯ ಕ್ಯಾಮೆರಾದ ಕೊರತೆ ಇದೆ. ಅದನ್ನ ಸರಿಪಡಿಸಿ ಆರಂಭಿಸಲಿ. ಸಹ್ಯಾದ್ರಿ ಕಾಲೇಜಿನ ಜಾಗದಲ್ಲಿ ವಿಜ್ಞಾನ ಕೇಂದ್ರ ಆರಂಭಿಸುವ ಬಗ್ಗೆ ನಮ್ಮ ವಿರೋಧವಿದೆ. ವಿಜ್ಞಾನ ಕೇಂದ್ರ ಬೇರೆ ಮಾಡಲಿ ಎಂದು ಸಲಹೆ ನೀಡಿದರು. 

ವಿದ್ಯಾರ್ಜನೆಗೆ ಮಾತ್ರ ಸಹ್ಯಾದ್ರಿ ಕಾಲೇಜು ಸೀಮಿತವಾಗಬೇಕು. ಬಡವರ ಜ್ಞಾನಾರ್ಜನೆಯ ಕೇಂದ್ರ ಜ್ಞಾನಾರ್ಜನೆಗೆ ಸೀಮಿತವಾಗಬೇಕು. ಈ ಹಿಂದೆ ಹಳೆಯ ವಿದ್ಯಾರ್ಥಿ ಖೇಲೋ ಇಂಡಿಯಾಗೆ ವಿರೋಧಿಸಲಾಗಿತ್ತು. ವಿಜ್ಞಾನಕೇಂದ್ರ ಆರಂಭಿಸಲು ನಮ್ಮ ವಿರೋಧವಿದೆ ಎಂದರು.

ವಕೀಲ ಶ್ರೀಪಾಲ್ ಮಾತನಾಡಿ, ಬೇರೆ ಬೇರೆ ಪಿಜಿ, ಹಾಸ್ಟೆಲ್, ಪತ್ರಿಕೋದ್ಯಮ ಆರಂಭಿಸಬೇಕು. ಶೌಚಾಲಯದ ಕಟ್ಟಡ ನಿರ್ಮಿಸುವ ಅವಶ್ಯಕತೆಇದೆ. ಗ್ರಾಮಾಂತರದ ವಿದ್ಯಾರ್ಥಿಗಳು ಹೆಚ್ಚು ಅಲ್ಲಿಗೆ ಬರುತ್ತಾರೆ. ಅಲ್ಲಿ ವಿಜ್ಞಾನ ಕೇಂದ್ರ ಬೇಡ ಎಂದು ಆರೋಪಿಸಿದರು. 

ಉನ್ನತ ಶಿಕ್ಷಣ ಸಚಿವ, ಸಿಎಂಗೆ ಮನವಿ ನೀಡಲು ನಿಯೋಗ ರಚಿಸಲಾಗಿದೆ. ಸಂಸದರಿಗೂ ನಿಯೋಗ ಕಾಲೇಜಿನಲ್ಲಿ ಬೇಡ ಎನ್ನಲಾಗಿದೆ. ಸಹ್ಯಾದ್ರಿ ಕಾಲೇಜು 76 ಎಕರೆ ಇದೆ. ಬೈಪಾಸ್ , ಚೌಡೇಶ್ವರಿ ಮತ್ತು ವಕ್ಪ್ ಮಸೀದಿಗೆ ಜಾಗ ನೀಡಲಾಗಿದೆ. ಕೆಲ ಬುಡಗಟ್ಟು ಜನ ವಾಸವಾಗಿದ್ದಾರೆ. ಕಾಲೇಜಿನ ಜಾಗ ಕಾಲೇಜಿಗೆ ಬಳಕೆ ಆಗಬೇಕು ಎಂದರು. 


ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾದ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ, ಡಿಎಸ್ಎಸ್‌ನ ಗುರುಮೂರ್ತಿ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ ಮಂಜುನಾಥ್, ಪ್ರಾಧ್ಯಾಪಕ ರಾಮಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live