ಖಾಸಗಿ ಬಸ್ ಗಳ ಟೈಮಿಂಗ್ಸ್ ವಿಚಾರದಲ್ಲಿ ಗಲಾಟೆ


ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಬಸ್ ಗಳ ಟೈಮಿಂಗ್ಸ್ ವಿಚಾರದಲ್ಲಿ ಗಲಾಟೆಯಾಗಿದ್ದು ಖಾಸಗಿ ಬಸ್ ಕಂಡಕ್ಟರ್ ಮತ್ತು ಚಾಲಕರ ನಡುವಿನ ಫೈಟಿಂಗ್ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಾಲೀಕರ ನಡುವೆ ನಡೆಯ ಬೇಕಿದ್ದ ಈ ಫೈಟಿಂಗ್ ಅವರ ಕೈಗೆಳಗೆ ಕೆಲಸ ಮಾಡುವರ ನಡುವೆ ನಡೆದಿದೆ. 

ನವದುರ್ಗಾ ಮತ್ತು ಶ್ರೀದುರ್ಗಾಂಬ ಬಸ್ ತೀರ್ಥಹಳ್ಳಿಗೆ ಬಂದಾಗ ನವದುರ್ಗ ಬಸ್ ನ ಕಂಡಕ್ಟರ್ ಯೂಸಫ್ ಮತ್ತು ಶ್ರೀದುರ್ಗಾಂಬದ ಬಸ್‌ನ ನಿರ್ವಾಹಕ ಉಮೇಶ್ ನಡುವೆ ಬಸ್ ನ  ಟೈಮಿಂಗ್ಸ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಯೂಸಫ್ ಗೆ ಉಮೇಶ್ ಶಿವಮೊಗ್ಗಕ್ಕೆ ಬಾ ನೋಡ್ಕೊಂತೀನಿ ಎಂದಿದ್ದಾನೆ. ಈ ವಿಷಯವನ್ನ ಯೂಸಫ್ ತನ್ನ ಬಸ್  ಮಾಲೀಕರಿಗೆ ಕರೆ ಮಾಡಿ ಈ ಗಲಾಟೆ ಬಗ್ಗೆ ತಿಳಿಸಿದ್ದಾರೆ. ಮಾಲೀಕರು ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಿದ್ದು ಯೂಸಫ್ ತೀರ್ಥಹಳ್ಳಿಯಲ್ಲಿಯೇ ಉಳಿದು ಕೊಂಡಿದ್ದಾರೆ. 

ತೀರ್ಥಹಳ್ಳಿ ಮೂಲಕ ಶಿವಮೊಗ್ಗಕ್ಕೆ ಬಂದ ಎರಡೂ ಬಸ್ ಗಳು ಮತ್ತೆ ಚಾಲಕ ಮತ್ತು ನಿರ್ವಾಹಕರು ಗಲಾಟೆಗೆ ಬಿದ್ದಿದ್ದಾರೆ. ಯೂಸಫ್ ಎಲ್ಲಿ ಎಂಬ ವಿಷಯದಲ್ಲಿ ಉಮೇಶ್ ನವದುರ್ಗ ಚಾಲಕ ಮಾಲ್ತೇಶ್ ಮೇಲೆ ಮುಗಿಬಿದ್ದಿದ್ದಾನೆ. ಏಜೆಂಟರೊಬ್ಬರು ಗಲಾಟೆಯನ್ನ ಬಿಡಿಸಿದ್ದಾರೆ. ಆದರೂ ಉಮೇಶ್ ಸಂಜೆ ಯೂಸಫ್ ನನ್ನ ಕರೆಯಸದೆ ಇದ್ದಲ್ಲಿ ಬಸ್ ಗೆ ಆಯನೂರಿನಲ್ಲಿಬೆಂಕಿ ಹಚ್ಚುವುದಾಗಿ ಆರೋಪಿಸಿದ್ದಾನೆ. 

ಈ ಕುರಿತು ಮಾಲ್ತೇಶ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಲೀಕರ ನಡುವೆ ನಡೆಯಬೇಕಿದ್ದ ಈ ವಿಷಯ ಅವರ ಕೆಲಸಗಾರರ ನಡುವೆ ಹೊಡೆದಾಟ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close