ಸುದ್ದಿಲೈವ್/ಶಿವಮೊಗ್ಗ
ತಿಪಟೂರಿನಲ್ಲಿ ಎರಡು ಜನಶತಾಬ್ದಿ ರೈಲಿಗೆ ನಿಲುಗಡೆಗೆ ಮುಂದಿನ ದಿನಗಳಲ್ಲಿ ಸೂಚಿಸಲಾಗುವುದು ಎಂದು ರೈಲ್ವೆ ರಾಜ್ಯಖಾತೆ ಸಚಿವ ವಿ ಸೋಮಣ್ಣ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಹುಬ್ಬಳ್ಳಿ - ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12079/80) ಹಾಗೂ ಶಿವಮೊಗ್ಗ - ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12089/90) ರೈಲುಗಳಿಗೆ ತಿಪಟೂರಿನಲ್ಲಿ ನಿಲುಗಡೆ ನೀಡಬೇಕೆಂಬುದು ನಿರ್ದೇಶಿಸಲಾಗಿದೆ ಎಂದು ಟ್ವಿಟರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಜನತೆಯ ಬಹುದಿನದ ಬೇಡಿಕೆಯಾಗಿತ್ತು. ಇದೀಗ ಈ ಬೇಡಿಕೆಯನ್ನು ಈಡೇರಿಸಲಾಗಿದ್ದು, ಶೀಘ್ರವೇ ನಿಲುಗಡೆಗೆ ಚಾಲನೆ ನೀಡಲಾಗುತ್ತದೆ ಎಂದು ಸೋಮಣ್ಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹುಬ್ಬಳ್ಳಿ ಮತ್ತು ಶಿವಮೊಗ್ಗ ಕಡೆ ಚಲಿಸುವ ಎಕ್ಸ್ ಪ್ರೆಸ್, ಪ್ಯಾಸೆಂಜರ್ ರೈಲುಗಳಿಗೆ ತಿಪಟೂರಿನಲ್ಲಿ ನಿಲುಗಡೆ ಇದ್ದರೂ. ಬೆಂಗಳೂರು-ಹುಬ್ಬಳ್ಳಿ ಮತ್ತು ಶಿವಮೊಗ್ಗ-ಬೆಂಗಳೂರು ರೈಲಿಗೆ ತಿಪಟೂರು ನಿಲುಗಡೆ ಇರಲಿಲ್ಲ. ಆದರೆ ಇಲ್ಲಿ ನಿಲುಗಡೆ ಕೊಡುವಂತೆ ಸಾರ್ವಜನಿಕರ ಬೇಡಿಕೆ ಇತ್ತು. ಈಗ ಬೇಡಿಕೆ ಈಡೇರಿದೆ.