ಸುದ್ದಿಲೈವ್/ಶಿವಮೊಗ್ಗ
ಸೂಳೆಬೈಲಿನ ಗುಡ್ಡೇಮರಡಿ ದೇವಸ್ಥಾನಕ್ಕೆ ಹೋಗುವ ದಾರಿ ಎಂದು ನಾಪಫಲಕ ಹಾಕಿರುವುದಕ್ಕೆ ಸ್ಥಳೀಯ ಮುಸ್ಲೀಂ ಓರ್ವರಿಂದ ವಿರೋಧ ವ್ಯಕ್ತವಾಗಿದೆ. ಪಿಐ ಗುರುರಾಜ್ ನೇತೃತ್ವದಲ್ಲಿ ಪರಿಸ್ಥಿತಿ ತಿಳಿಗೊಂಡಿದೆ.
ಸೂಳೆಬೈಲಿನಲ್ಲಿ ಗುಡ್ಡೇಮರಡಿಯ ಮಲ್ಲೇಶ್ವರ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ಹೋಗುವ ದಾರಿ ಎಂದು ನಾಮ ಫಲಕ ಹಾಕಿದ ಹಿಂದೂ ಸಂಘಟನೆ ಹಾಗೂ ಬಿಜೆಪಿಯ ಕಾರ್ಯಕರ್ತರು ನಾಮಫಲಕ ಹಾಕಿದಕ್ಕೆ ಸ್ಥಳೀಯ ಮುಸ್ಲೀಂರು ವಿರೋಧ ವ್ಯಕ್ತಡಿಸಿದ್ದಾರೆ.
ಮುಸ್ಲೀಮರು ಇರುವ ಜಾಗ ಇಲ್ಲಿ ನಾಮಫಲಕ ಹಾಕದಂತೆ ಓರ್ವ ವ್ಯಕ್ತಿ ವಿರೋಧ ವ್ಯಕ್ತಪಡಿಸಿದ್ದಾರೆ. ತುಂಗ ನಗರ ಪೊಲೀಸ್ ಠಾಣೆ ಪಿಐ ಗುರುರಾಜ್ ನೇತೃತ್ವದಲ್ಲಿ ಪ್ರಕರಣ ತಿಳಿಗೊಂಡಿದ್ದು ನಾಮಫಲಕ ಹಾಕಲಾಗಿದೆ.