Girl in a jacket

ಎಸ್ ಜಿ ಎಂ ಟೆಕ್ನಾಲಜಿಸ್ ನಿಂದ ಹೊಸ ತಂತ್ರಜ್ಞಾನದ ಅಡಿಕೆ ಸುಲಿಗೆಯಂತ್ರ ಬಿಡುಗಡೆ



ಸುದ್ದಿಲೈವ್/ಶಿವಮೊಗ್ಗ

ಅಡಿಕೆ ಸಿಪ್ಪೆ ಸುಲಿಯಲು 2007 ರಲ್ಲಿ ಬೆಕ್ಟ್ರೈವ್ ನ್ನ ತಯಾರಿಸಲಾಯಿತು. 2011 ರಲ್ಲಿ ಹಸಿ ಮತ್ತು ಚಾಲಿ ಅಡಿಕೆ ಸುಲಿಯುವ ಯಂತ್ರವನ್ನ ಕಂಡು ಹಿಡಿಯಲಾಯಿತು ಎಂದು  ಎಸ್ ಜಿಎಂ ಟೆಕ್ನಾಲಜೀಸ್ ಮಾಲೀಕ ಪ್ರಕಾಶ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 15 ವರ್ಷ ಜರ್ನಿ ಕಳೆದಿದ್ದೇವೆ. ಈ ಯಂತ್ರದಲ್ಲಿನ ನೂನ್ಯತೆಯನ್ನ ಕಂಡು ಹಿಡಿದು ಗುಣಮಟ್ಟದ ಯಂತ್ರವನ್ನ ಗೇರು ಬಳಸಿ ಹಸಿ ಮತ್ತು ಚಾಲಿ ಅಡಿಕೆ ಸುಲಿಯುವ ಯಂತ್ರ ಬಿಡುಗಡೆ ಮಾಡಲಾಗಿದೆ. ಈ ಯಂತ್ರಗಳ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ದೊರೆಯುತ್ತಿದೆ ಎಂದರು. 

ಇದರ ದುರಸ್ಥಿಯನ್ನ ರೈತರಿಗಳಿಂದಲೇ ನಡೆಸಲಾಗುತ್ತಿದೆ. ಈ ಯಂತ್ರ ಜನವರಿಯಿಂದ ಆರಂಭವಾಗಲಿದೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ರೈತರಿಗೆ ಯಂತ್ರ ದುರಸ್ಥಿಯ ತರಬೇತಿ ಕಾರ್ಯಗಾರ ನಡೆಸಲಾಗುವುದು ಎಂದರು. 

ಒಂದು ಗಂಟೆಗೆ 4 ಡಬ್ಬದಿಂದ 50 ಡಬ್ಬ ಅಡಿಕೆ ಸುಲಿಯಬಹುದು 60 ಸಾವಿರ ಸಾಮಾನ್ಯ ಮತ್ತು ಪರಿಶಿಷ್ಠ ಜಾತಿಯವರಿಗೆ 90 ಸಾವಿರ ರೂ. ಸಬ್ಸಿಡಿ ದೊರೆಯಲಿದೆ. 2 ಲಕ್ಷದಿಂದ 4.5 ಲಕ್ಷ ರೂ.ವರೆಗೆ ಯಂತ್ರ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದರು.‌

ಕೃಷಿ ಸಹಾಯಕ ಯಂತ್ರಗಳು

ಗೇರು ಅಳವಡಿಸಿದ ಹಸಿ ಮತ್ತು ಚಾಲಿ ಅಡಿಕೆ ಯಂತ್ರ, ಗೊರಬಲು ಪಾಲೀಶ್ ಯಂತ್ರ, ಹಸಿ ಗಂಜು ಹೊಡೆಯುವ ಯಂತ್ರ, ಅಡಿಕೆ ಬೇಸುವ ಯಂತ್ರ, ಅಡಿಕೆ ಒಣಗಿಸುವ ಯಂತ್ರ, ಗೊನೆಯಿಂದ ಬೇರ್ಪಡಿಸುವ ಯಂತ್ರ, ಮೂಗು ಮತ್ತು ತೊಟ್ಟು ಮುರಿಯುವ ಯಂತ್ರ ಅಡಿಕೆ ಮತ್ತು ಸಿಪ್ಪೆಯನ್ನ ಕನ್ವೇಯರ್ ಮೂಲಕ ಸಾಹಿಸುವ ಯಂತ್ರ ದೊರೆಯಲಿದೆ. 


ಆಸಕ್ತರು ಸಾಗರ ರಸ್ತೆಯಲ್ಲಿರುವ ಎಸ್.ಜಿ.ಎಂ ಟೆಕ್ನಾಲಜೀಸ್ ಕಚೇರಿಯನ್ನ ಅಥವಾ ಮಾಲೀಕ ಪ್ರಕಾಶ್ ರನ್ನ ಸಂಪರ್ಕಿಸಬಹುದು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close