Girl in a jacket

ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಎಸ್ಪಿ ಕುರಿತು ನ್ಯಾಯಾಧೀಶರು ಹೇಳಿದ್ದೇನು?



ಸುದ್ದಿಲೈವ್/ಶಿವಮೊಗ್ಗ

ಡಿಎಆರ್ ಕವಾಯಿತು ಮೈದಾನದಲ್ಲಿ ಇಂದು ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಯಿತು.  1959 ರಂದು ಕೇಂದ್ರ ಪಡೆ, ಕರಣ್ ಸಿಂಗ್ ಅವರ ನೇತೃತ್ವದಲ್ಲಿ ಚೈನಾ-ಗಡಿ ಭಾಗದಲ್ಲಿ ರಕ್ಷಣ ಪಡೆಯಲ್ಲಿದ್ದ ಪೊಲೀಸ್‌ರ ಮೇಲೆ ಚೈನ ಸೇನೆ ದಿಡೀರ್ ದಾಳಿ  ನಡೆಸಿತ್ತು. 

ದಾಳಿಯಲ್ಲಿ ಭಾರತೀಯ ಪೊಲೀಸರನ್ನ ಚೈನ ಸೇನಿಕರು  ಧಾರುಣ ಹತ್ಯೆ ನಡೆಸಿ ಗಡಿ ಭಾಗವನ್ನ ಅತಿಕ್ರಮಣ ಮಾಡಿಕೊಂಡಿತ್ತು. ಅ.21 ರಂದು ನಡೆದ ಈ ದಾರುಣ ಹತ್ಯೆಯಲ್ಲಿ ಹುತಾತ್ಮರಾದ ಪೊಲೀಸರನ್ನ ನೆನಪಿಸಿಕೊಳ್ಳಲು ಪೊಲೀಸ್ ಹುತಾತ್ಮರ ದಿಬಾಚರಣೆಯನ್ನ ಆಚರಿಸಲಾಗುತ್ತಿದೆ.   

ಹತ್ಯೆಯಲ್ಲಿ ಯಾರು ಪ್ರಾಣ ತ್ಯಜಿಸಿದ್ದಾರೆ ಅವರನ್ನ ನೆನಪಿಸಿಕೊಂಡು ಗೌರವ ಸಮರ್ಪಿಸುವುದನ್ನ ಹುತಾತ್ಮರ ದಿನಾಚರಣೆಯ ವಿಶೇಷವಾಗಿದೆ. ಅದರಂತೆ ಶಿವಮೊಗ್ಗದಲ್ಲಿ ನಡೆದಿದೆ. ಮೂರು ಸುತ್ತು ಗುಂಡು ಹಾರಿಸಿ, ಅರ್ಧ ಧ್ವಜ ಹಾರಿಸಿ ಹುತಾತ್ಮರಿಗೆ ಗೌರವ ಸಮರ್ಪಿಸಲಾಗಿದೆ. 

ಈ ವೇಳೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ  ಮಿಥುನ್ ಕುಮಾರ್, ಪೊಲೀಸರ ಹತ್ಯೆ ಈಗಲೂ ಮುಂದುವರೆದಿದೆ.  2023-2024 ರಲ್ಲಿ 213 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದುಗಳು ಸಾವನ್ನ ಹೊಂದಿದ್ದಾರೆ.  ರಾಜ್ಯದಲ್ಲಿ ಐದು ಜನ ಪೊಲೀಸರು ಸೇವೆಯಲ್ಲಿರುವಾಗ ಹುತಾತ್ಮರಾಗಿದ್ದಾರೆ ಎಂದರು. ನಂತರ ಹುತಾತ್ಮರಾದ 213 ಪೊಲೀಸರ ಹೆಸರನ್ನ  ಓದಿ ಅವರಿಗೆ ಗೌರವ ಅರ್ಪಣೆ ಸಲ್ಲಿಸಿದರು. 


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯಾಧೀಶ ಮಂಜುನಾಥ್ ಮಾತನಾಡಿ, ಸ್ವಾತಂತ್ರ್ಯ ನಂತದ ದಿನಗಳಲ್ಲಿ 36 ಸಾವಿರದ 350 ಜನ ಪೊಲೀಸರು ಹುತಾತ್ಮರಾದರೆ,  24500 ಸೈನಿಕರು ಹುತಾತ್ಮರಾಗಿದ್ದಾರೆ. ಥ್ಯಾಂಕ್ ಲೆಸ್ ಜಾಬ್ ಆದ ಕಾರಣ ಪೊಲೀಸ್ ಇಲಾಖೆ ಟೀಕೆಗೊಳಪಡುತ್ತದೆ ಎಂದರು. 

ರಾಜಕಾರಣ, ಮಾಧ್ಯಮ, ನ್ಯಾಯಾಲಯ ಮೊದಲಾದ ಕ್ಷೇತ್ರಗಳಿಂದ ಪೊಲೀಸರು ಟೀಕೆಗೆ ಒಳಗಾಗುತ್ತಾರೆ. ಆದರೆ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಕರ್ತವ್ಯ ನಿರ್ವಹಿಸಲು ಸೂಚಿಸಿದರು. ವೈದ್ಯ, ಸೈನಿಕರಲ್ಲಿರುವ ಧೃಡತೆ, ನ್ಯಾಯಾಧೀಶರಲ್ಲಿ ಇರುವ ಅರ್ಹತೆ ಪೊಲೀಸರಿಗೆ ಬೇಕಿದೆ. 

ಹುತಾತ್ಮರಾದ ಪೊಲೀಸರ ಕುಟುಂಬಕ್ಕೆ ಕೇವಲ ಅನುಕಂಪದ ಆಧಾರ ಕೆಲಸವಲ್ಲ ಎಲ್ಲಾ ರೀತಿಯ ಸೌಕರ್ಯಗಳನ್ನ ನೀಡಬೇಕು. ಶಿವಮೊಗ್ಗದಲ್ಲಿ ಎಸ್ಪಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೂಕ್ಷ್ಮ ಪ್ರದೇಶವಾದ ಶಿವಮೊಗ್ಗದಲ್ಲಿ ಎಸ್ಪಿಯವರ ಕಾರ್ಯ ವೈಖರಿ ಶ್ಲಾಘನೀಯ ಎಂದು ಹಾಡಿಹೊಗಳಿರುವುದು ಗಮನಾರ್ಹವಾಗಿದೆ. 

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಹೇಮಂತ್, ನ್ಯಾಯಾಧೀಶ ಹೇಮಂತ್ ಕುಮಾರ್, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಕೆಎಸ್ಐಎಸ್‌ಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ನಿವೃತ್ತ ಪೊಲೀಸರು ಭಾಗಿಯಾಗಿದ್ದರು. ಭಾಗಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿಕೊಂಡಿರುವುದು ಹುತಾತ್ಮ ದಿನಾಚರಣೆಯ ವಿಶೇಷವಾಗಿತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live