ಶೆಟ್ಟಿಕೆರೆ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ನಾಳೆ ಈ ಎರಡು ಸೇವೆಗಳಿರೊಲ್ಲ!


ಸುದ್ದಿಲೈವ್/ಶಿವಮೊಗ್ಗ

ಮಳೆಯ ಕಾರಣದಿಂದಾಗಿ ಐದು ದಿನಗಳ ಹಿಂದೆ ಪ್ರಕಟವಾಗಿದ್ದ ಶೆಟ್ಟಿಕೆರೆ ಸರ್ಕಾರಿ ಶಾಲಾ ಕಾಂಪೌಂಡಿಗೆ ಹೊಂದಿಕೊಂಡಿರುವ ಹಾಗೂ ರಸ್ತೆಗೆ ಹೊಂದಿಕೊಂಡಿರುವ ಬೃಹತ್ ಆಕಾರದ ಮರಗಳ ಕಟ್ಟಿಂಗ್ ಕಾರ್ಯಾಚರಣೆ ಮುಂದೂಡಲಾಗಿತ್ತು. 

ಆದರೆ ಮಳೆ ಕಡಿಮೆಯಾದ ಬೆನ್ನಲ್ಲೇ (ತೆರವು) ಮತ್ತೆ ನಾಳೆ ಈ ತೆರವು ಕಾರ್ಯಾಚರಣೆ ನಡೆಯಲಿದೆ. ಈ ಮಾರ್ಗಕ್ಕೆ  ಹೊಂದಿರುವ ಚೋರಡಿಯಿಂದ ಸುಡುರ್ ಗೇಟ್ ವರೆಗಿನ  ರಸ್ತೆಯಲ್ಲಿ ಹಾದು ಹೋಗುವಂತಹ ಬಾರಿ ವಾಹನಗಳು ಸಂಚಾರದಲ್ಲಿ ಕೆಲಸ ಸಮಯ ವ್ಯತ್ಯಾಸವಾಗಲಿದೆ.  

ಬದಲಿ ಮಾರ್ಗವಾಗಿ ಸುಡುರ್ ಗೇಟ್ ಶೆಟ್ಟಿಕೆರೆ ರಾಗಿಹೊಸಹಳ್ಳಿ ದ್ಯಾವನಕೆರೆ ಆಯನೂರು ಮೂಲಕದ ಶಿವಮೊಗ್ಗಕ್ಕೆ ಚಲಿಸುವ ಮಾರ್ಗ ಬಳಲು ಕೋರಲಾಗಿದೆ. 

ವಿದ್ಯುತ್ ವ್ಯತ್ಯಯ

11 ಕೆ ವಿ ಲೈನ್ ಗಳ ದುರಸ್ತಿ ಕಾರ್ಯದ ಹಿನ್ನಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಭಾಗವಾದ ಶೆಟ್ಟಿಕೆರೆ, ಶಾಂತೀಕೆರೆ, ಬಸವಪುರ, ಹಾಗು ರೇಚಿಕೊಪ್ಪ ಗ್ರಾಮಗಳಿಗೆ ನಾಳೆ ಬೆಳಗ್ಗೆ 10 ಗಂಟೆ ಇಂದ ಸಂಜೆ 6 ಗಂಟೆ ವರೆಗೆ ನಿರಂತರ ಜ್ಯೋತಿ ವಿದ್ಯುತ್ ವ್ಯತ್ಯಯವಾಗಲಿದೆ. 

ಈ ನಾಲ್ಕು ಗ್ರಾಮಗಳಿಗೆ 3 ಫೇಸ್ ವಿದ್ಯುತ್  ನಾಳೆ ಬೆಳಗಿನ ಜಾವ 3 ಗಂಟೆ ಇಂದ ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಇರುತ್ತದೆ ಎಂದು ತಿಳಿದು ಬಙದಿದೆ. ಗ್ರಾಮಸ್ಥರು ಸಹಕರಿಸುವಂತೆ ಕೋರಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close