ದಸರಾ ಹಬ್ಬಕ್ಕೆ ಬಜಾರ್ ಬ್ಯೂಸಿ...!





ಸುದ್ದಿಲೈವ್/ಶಿವಮೊಗ್ಗ

ದಸರಾ ಹಬ್ಬದ 8 ನೇ ದಿನಕ್ಕೆ ಕಾಲಿಟ್ಟಿದ್ದೇವೆ. ದುರ್ಗ ಪೂಜೆ ಇಂದು ನಡೆದಿದ್ದು, 9 ದಿನಗಳ ನವರಾತ್ರಿ ಹಬ್ಬಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಆಯುಧ ಪೂಜೆ ಮತ್ತು ವಿಜಯದಶಮಿ  ನಡೆಯುವ ಮೂಲಕ 2024 ರ ನವರಾತ್ರಿ ಹಬ್ಬ ಸಂಪನ್ನಗೊಳ್ಳಲಿದೆ. 

ಎರಡು ದಿನಗಳ ಹಬ್ಬಕ್ಕೆ ಇಂದು ಬಜಾರ್ ಜನರಿಂದ ಭರ್ತಿಯಾಗಿತ್ತು. ಹಬ್ಬದ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದರು. ನಾಳೆ ಆಯುಧ ಪೂಜೆಗೆ ಕುಂಬಳಕಾಯಿ, ಬಾಳೆಕಂದು, ಕಬ್ಬಿನ ಜಲ್ಲೆ, ಮಾವಿನ ಸೊಪ್ಪು, ಹೂವುಗಳ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದಾರೆ. 

ಬಿಡಿ ಚೆಂಡು ಹೂವು ಕೆಜಿಗೆ 100 ರೂ.ಗೆ ಮಾರಾಟವಾಗುತ್ತಿದ್ದರೆ. ಮಾರು 70-90 ರೂ.ಗೆ ಮಾರಾಟವಾಗುತ್ತಿದೆ. ಒಂದು ಕುಂಬಳಕಾಯಿ 100 ರೂ.ಗೆ ಮಾರಾಟವಾಗುತ್ತಿದೆ. 10 ರೂ.ಗೆ ಒಂದು ಬಾಳೆಕಂದು ಮಾರಾಟವಾಗುತ್ತಿದೆ. ಕಬ್ಬಿನಜಲ್ಲೆ 50 ರೂಗೆ 6 ಸಿಕ್ತಾ ಇದೆ. ಮಾವಿನ ಸೊಪ್ಪಿನ ಮಾರಾಟದಲ್ಲಿ ಏರಿಳಿತವಿದೆ. 

ಮಿಕ್ಸ್ ಹಣ್ಣು ಕೆಜಿಗೆ 100 ರೂ.ಗೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ದಸರಾ ಹಬ್ಬ ಆಚರಣೆಗೆ ಜನ ಖರೀದಿಯನ್ನ ಜೋರು ಮಾಡಿದ್ದಾರೆ. ವೀರಶೈವ ಕಲ್ಯಾಣ ಮಂದಿರದಿಂದ ಸಾಗುವ ಶಿವಪ್ಪ ನಾಯಕನ ಪ್ರತಿಮೆ ಗಾಂಧಿ ಬಜಾರ್ ರಸ್ತೆ ಜಿನಗುಡುತ್ತಿದೆ. ಸಂಜೆ ಇನ್ನೂ ಹೆಚ್ಚು ರಶ್ ಆಗುವ ಸಾಧ್ಯತೆ ಇದೆ. ಹಣತೆಗಳು ಸಹ ಈಗಾಗಲೇ ಬಜಾರ್ ಗೆ ಲಗ್ಗೆ ಇಟ್ಟಿವೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close