ಗೌರಿ ಹಂತಕರಿಗೆ ಸನ್ಮಾನ-ಸಂಘಟನೆಯಿಂದ ಆಕ್ಷೇಪ


ಸುದ್ದಿಲೈವ್/ಶಿವಮೊಗ್ಗ

ಗೌರಿ ಹಂತಕರನ್ನ ಸನ್ಮಾನಿಸಿರುವುದನ್ನ ಖಂಡಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗ ಇಂದು ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ. 

ಗೌರಿ ಕೊಲೆ ಪಾತಕರಿಗೆ ಸನ್ಮಾನಿಸುವ ಮೂಲಕ ಕರ್ನಾಟಕಕ್ಕೆ ಅವಮಾನ ಹಾಗೂ ದೇಶದ ಸನ್ಮಾನ ಮಾಡಿರುವುದಾಗಿ ಸಂಘಟನೆ ಆರೋಪಿಸಿದೆ. ಉತ್ತರ ಪ್ರದೇಶ, ಗುಜರಾತ್, ಬಿಹಾರ ಮೊದಲಾದ ಉತ್ತರ ಭಾರತೀಯ ಭಾಗಗಳಲ್ಲಿ ಕೊಲೆ ಹಂತಕರ ಸನ್ಮಾನ ನಡೆಯುತ್ತಿತ್ತು. ಈಗ ನಮ್ಮ ರಾಜ್ಯದಲ್ಲಿಯೂ ಸನ್ಮಾನಿಸಿರುವುದು ದುರಂತ ಎಂದು ಆರೋಪಿಸಿದೆ. 

ಶ್ರೀಕಾಂತ್ ಪಾಂಗಾರ್ಕರ್ ಎಂಬಾತ ಗೌರಿ ಕೊಲೆ ಆರೋಪಿಯಾಗಿದ್ದು, ಆತನಿಗೆ ಜಾಮೀನು ದೊರೆಯುತ್ತಿದ್ದಂತೆ ಸನ್ಮಾನಿಸಲಾಯಿತು. ಈ ಮಹಾರಾಷ್ಟ್ರದ ಚುನಾವಣೆಯಲ್ಲಿ ಸಕ್ರಿಯಗೊಂಡಿದ್ದಾನೆ.  ಅಲ್ಲಿ ರಾಜಕೀಯ ಪಕ್ಷಗಳು ಆತನನ್ನ ಪ್ರಚಾರದ ಜವಬ್ದಾರಿ ವಹಿಸಲು ತುದಿಗಾಲಿನಲ್ಲಿ ನಿಂತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ. 

ತಕ್ಷಣವೇ ಗೌರಿ ಹತ್ಯೆ ಪ್ರಕರಣದ ವೇಗವನ್ನ ಹೆಚ್ಚಿಸಿ  ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಸರ್ಕಾರ ಸಂಘಟನೆಯ ಹಕ್ಕೋತ್ತಾಯವನ್ನ ಮನ್ನಿಸಬೇಕು ಎಂದು ಆಗ್ರಹಿಸಲಾಯಿತು. 2017 ಸೆ.5 ರಂದು ಹತ್ಯೆಯಾಗಿತ್ತು. ಇದರಲ್ಲಿ 18 ಜನ ಹತ್ಯೆಯ ಆರೋಪಿಗಳನ್ನ ಬಂಧಿಸಲಾಗಿತ್ತು. 

ಈ 18 ಜನ ಆರೋಪಿಗಳಲ್ಲಿ 3 ಜನ‌ಆರೋಪಿಗಳಿಗೆ ಜಾಮೀನು ದೊರೆತಿದೆ. ಹತ್ಯೆ ಆರೋಪಿಗಳ ತನಿಖೆಗೆ ಎಸ್ಐಟಿ ರಚಿಸಲಾಗಿತ್ತು. ಎಸ್ಐಟಿ 9 ಸಾವಿರ ಪುಟಗಳ ವರದಿ ಸಲ್ಲಿಸಿತ್ತು. 400 ಕ್ಕೂ ಹೆಚ್ಚು ಸಾಕ್ಷಿ ಪುರಾವೆಗಳಿದ್ದರೂ ಪ್ರಕರಣ ನಿಧಾನಗತಿಯಲ್ಲಿ ಸಾಗುತ್ತಿವೆ ಎಂಬ ಕೂಗು ಕೇಳಿಬಂದಿತ್ತು. 

ಮನವಿ ಕೊಡುವ ಸಂದರ್ಭದಲ್ಲಿ ಗೌರಿ ಬಳಗದ ಕೆ.ಎಲ್ ಅಶೋಕ್, ವಕೀಲ ಶ್ರೀಪಾಲ್ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಹಾಲೇಶಪ್ಪ, ಪತ್ರಕರ್ತ ಟೆಲೆಕ್ಸ್ ರವಿ ಕುಮಾರ್ ಮೊದಲಾದವರು ಭಾಗಿಯಾಗಿದ್ದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close