ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಲಿನ ಸ್ನಾತಕೊತ್ತರ ಪದವಿ/ ಸ್ನಾತಕೊತ್ತರ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗೆ ಯು.ಯು.ಸಿ.ಎಂ.ಎಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನಾಂಕವೆAದು ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ದೋಷದಿಂದ ನ. 05 ರವರೆಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿದಾರರು ನ.06 ರ ಒಳಗೆ ಹಾರ್ಡ್ ಕಾಪಿಯನ್ನು ಸಂಬಂಧಪಟ್ಟ ವಿಭಾಗಕ್ಕೆ ಕಡ್ಡಾಯವಾಗಿ ನೀಡಬೇಕು. ಅರ್ಜಿ ಶುಲ್ಕ ಸಾಮಾನ್ಯ ಮತ್ತು ಓ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ರೂ.350 ಹಾಗೂ ಎಸ್.ಸಿ/ಎಸ್.ಟಿ/ ಪ್ರವರ್ಗ-01ರ ವಿದ್ಯಾರ್ಥಿಗಳಿಗೆ ರೂ.175 ನಿಗದಿಪಡಿಸಲಾಗಿದೆ. ಹಣವನ್ನು ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ ಪದನಾಮದಲ್ಲಿ ಚಲನ್ ಮೂಲಕ ಖಾತೆ ಸಂಖ್ಯೆ 54023036291 ಐಎಫ್‌ಎಸ್‌ಸಿ ಕೋಡ್ SBIN0040759 ಗೆ ಜಮಾ ಮಾಡಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ