ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾನಿಲಯವು ನವೀನ ಹೆಚ್.ಎನ್. ಇವರಿಗೆ ಬ್ಯುಸಿನೆಸ್ ಅಡ್ಮಿಮಿನಿಸ್ಟ್ರೇಷನ್ ವಿಷಯದ “ಕನ್ಸೂಮರ್ ಪರ್ಸೆಪ್ಷನ್ ಆನ್ ಮಾರ್ಕೇಟಿಂಗ್ ಮಿಕ್ಸ್ ಸ್ಟ್ಯಾಟರ್ಜಿ ಆಫ್ ಕನ್ಸೂಮರ್ ಪ್ರೊಡೆಕ್ಟ್ ಇನ್ ರೂರಲ್ & ಅರ್ಬನ್ ಮಾರ್ಕೇಟ್ ಯಾನ್ ಇಂಪರಿಕಲ್ ಸ್ಟಡಿ ಇನ್ ಕರ್ನಾಟಕ” ಎಂಬ ವಿಷಯದ ಕುರಿತು ಕುವೆಂಪು ವಿ.ವಿ.ಯ ಎಂ.ಬಿ.ಎ. ವಿಭಾಗದ ಪ್ರೊಫೆಸರ್ ಹೆಚ್.ಎನ್. ರಮೇಶ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರೌಢಪ್ರಬಂಧಕ್ಕೆ ಡಾಕ್ಟರೇಡ್ ಪದವಿ ನೀಡಿ ಗೌರವಿಸಿದೆ.
ನವೀನ್ ಹೆಚ್.ಎನ್. ಇವರು ಹೊಸನಗರ ತಾಲೂಕಿನ ಹೆಬ್ಬುರುಳಿ ಗ್ರಾಮದ ಹೆಚ್.ಕೆ.ನಾರಾಯಣ ಕಿರುವಾಸೆ ಮತ್ತು ಹೇಮಾವತಿ ಹೆಚ್.ಎನ್. ದಂಪತಿಗಳ ಪುತ್ರರಾಗಿದ್ದು, ಈ ಸಾಧನೆ ಮಾಡಿದ್ದಾರೆ.