ಭದ್ರಾವತಿಯಲ್ಲಿ ಮಳೆಯ ಆರ್ಭಟ




ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಸಂಜೆಯ ನಂತರ ಸುರಿದ ಮಳೆ ಭದ್ರಾವತಿಯನ್ನ ಅಕ್ಷರಶಃ ಮುಳುಗಡೆಯ ಭೀತಿ ಉಂಟು ಮಾಡಿತ್ತು. ಭದ್ರಾವತಿಯಲ್ಲಿ ಮಳೆಯೋ ಮಳೆ ಆಗಿದೆ. 

ಮೊನ್ನೆ ಅ.08 ರಂದು ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಳೆ ಒಂದಿಷ್ಟು ಅನಾಹುತವನ್ನುಂಟು ಮಾಡಿತ್ತು. ಓರ್ವನ ಜೀವ ಹಾನಿಗೂ ಕಾರಣವಾಗಿತ್ತು. ಆದರೆ ಭದ್ರಾವತಿಯಲ್ಲಿ ಇಂದು ಭಾರಿ ಪ್ರಮಾಣದ ಮಳೆ ಸುರಿದಿದೆ. 

ಬಸವ ಸರ್ಕಲ್ ನಲ್ಲಿ ಬೈಕ್ ಮುಳುಗಡೆಯಾಗಿದೆ.  ಭಾರಿ ಮಳೆಗೆ ಮನೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಭಾರಿ ಮಳೆಗೆ ಭದ್ರಾವತಿ ಪಟ್ಟಣದ ರಸ್ತೆಗಳು ಜಲಾವೃತಗೊಂಡಿದೆ. 

ಇದೇ ರೀತಿ ಮಳೆ ಮುಂದುವರಿದರೆ ಜಲಾವೃತವಾಗುವ ಆತಂಕ ಹೆಚ್ಚಿಸಿದೆ. ಭದ್ರಾವತಿಯಿಂದ ತಟ್ಟೆಹಳ್ಳಿಯವರೆಗೂ ಮಳೆ ಉದೋ ಅಂತ ಸುರಿದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close