ವಕ್ಫ್ ಬೋರ್ಡ್ ನಿಂದ ಅಂಬ್ಯುಲೆನ್ಸ್ ಮತ್ತು ಫ್ರೀಜರ್ ವಿತರಣೆ



ಸುದ್ದಿಲೈವ್/ಶಿವಮೊಗ್ಗ

ನಾಳೆ ಬೆಂಗಳೂರಿನ ಹಜ್ ಭವನದಲ್ಲಿ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಸಚಿವರಾದ ಬಿ. ಜಮೀರ್ ಅಹಮದ್ ಖಾನ್ ಸಾಬ್‌ ರವರ ನೇತೃತ್ವದಲ್ಲಿ ರಾಜ್ಯದ ವಕ್ಫ್ ಸಂಸ್ಥೆಯ ವತಿಯಿಂದ ಅಂಬ್ಯುಲೆನ್ಸ್ ಮತ್ತು ಫ್ರೀಜರ್(ಶವಪೆಟ್ಟಿಗೆ) ಬಾಕ್ಸ್ ವಿತರಣಾ ಕಾರ್ಯಕ್ರಮ ನಡೆಯಲಿದೆ. 

ಈ ಸಂಧಂರ್ಭದಲ್ಲಿ ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿರುವ ಸುನ್ನಿ ಜಾಮಿಯ ಮಸೀದಿಗೆ ಆಂಬುಲೆನ್ಸ್ ಮತ್ತು ಪ್ರತಿ ತಾಲ್ಲೂಕಿನ ಪ್ರಮುಖ್ಯ ಅಂದರೆ ಜಾಮೀಯಾ ಮಸ್ಟೀದ್ ಸುನ್ನಿ ಮತ್ತು ಹೆಚ್ಚುವರಿ ಆಸ್ತಿಗಳು, ಗಾಂಧೀ ಬಜಾರ್, ಶಿವಮೊಗ್ಗ ಜಾಮೀಯಾ ಮಸ್ಟೀದ್ ಸುನ್ನಿ ಮತ್ತು ಹೆಚ್ಚುವರಿ ಆಸ್ತಿಗಳು, 

ಮಜೀಸ್-ಎ-ಮುಂತಜಿಮಾ ಜಮಾತುಲ್ ಮುಸ್ಲಿಮೀನ್, ಸಾಗರ ಟೌನ್, ಜಾಮಿಯ ಮಸೀದಿ, ಖಾಜೀ ಮೊಹಲ್ಲ, ಭದ್ರಾವತಿ, ಜಾಮಿಯ ಮಸೀದಿ, ಸೊರಬ, ಪೇಟೆ ಜಾಮಿಯ ಮಸೀದಿ, (ಅಂಜುಮನ್-ಎ-ಇಸ್ಲಾಂ) ಶಿರಾಳಕೊಪ್ಪ, ಕಲೂರು ಜಾಮಿಯ ಮಸೀದಿ, ಹೊಸನಗರ ಹಾಗೂ ಜಾಮೀಯಾ ಮಸೀದ್,  ಸುನ್ನಿ ಮತ್ತು ಹೆಚ್ಚುವರಿ ಆಸ್ತಿಗಳು, ತೀರ್ಥಹಳ್ಳಿ ವಕ್ಫ್ ಸಂಸ್ಥೆಗಳಿಗೆ ಸಚಿವ ಜಮೀರ್ ಅಹಮದ್ ಖಾನ್ ಸಾಬ್, 

ಸಚಿವರು, ವಸತಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಹಾಗೂ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ. ಅನ್ವರ್ ಬಾಷಾ, ಫ್ರೀಜರ್‌ಗಳನ್ನು ವಿತರಿಸಲಿದ್ದಾರೆ ಎಂದು ಜಿಲ್ಲಾ ವಕ್ಫ್ ಆಧಿಕಾರಿಗಳಾದ ಸೈಯದ್ ಮೆಹ್ರಾಬ್ ತಿಳಿಸಿದ್ದಾರೆ.

ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಮಹಿಳಾ ಕಾಲೇಜ್ ಕಟ್ಟಡಗಳ ಸ್ಥಾಪನೆಯ ಅಡಿಗಲ್ಲು ಸಮಾರಣಭದ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮವನ್ನ ಸಚಿವ ಜಮೀರ್ ಸಾಬ್ ರವರು ನೆರವೇರಿಸಲಾಗುತ್ತದೆ. 

ಇದನ್ನೂ ಓದಿ-https://www.suddilive.in/2024/10/blog-post_64.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close