ನಾಳೆ ನಿರ್ಮಲಾ ಸೇವಾ ಕೇಂದ್ರದಿಂದ ನಡೆಯಲಿದೆ ಸ್ವಚ್ಛತೆ

 


ಸುದ್ದಿಲೈವ್/ಶಿವಮೊಗ್ಗ

ಗಾಂಧಿ ಜಯಂತಿ ಪ್ರಯುಕ್ತ ನಿರ್ಮಲಾ ಸೇವಾ ಕೇಂದ್ರದ 60-70 ಜನ ಸದಸ್ಯರು ಖಾಸಗಿಬಸ್ ನಿಲ್ದಾಣದ ಆವರಣ ಸುತ್ತಮುತ್ತಲು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

ಮಹಾನಗರ ಪಾಲಿಕೆ ಈ ಬಸ್ ನಿಲ್ದಾಣವನ್ನ ನಿರ್ಮಿಸಿ ಕೈತೊಳೆದುಕೊಂಡು ಬಿಟ್ಟಿತ್ತು. ಇಲ್ಲಿನ ಸ್ವಚ್ಛತೆ ಎಂಬುದು ಮರಿಚಿಕೆಯಾಗಿತ್ತು.  ಗಾಂಧಿ ಜಯಂತಿಯ ನೆಪದಲ್ಲಾದರೂ ಮೊದಲಬಾರಿಗೆ ಸಂಸ್ಥೆಯೊಂದು ಮುಂದು ಬಂದು ಸ್ವಚ್ಛತೆಗೆ ಇಳಿದಿದೆ.

ನಿರ್ಮಲಾ ಸೇವಾ ಕೇಂದ್ರದ ಸದಸ್ಯರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಅನುಮತಿ ದೊರೆತಿರುವುದಾಗಿ ತಿಳಿದುಬಂದಿದೆ.  ಬೆಳಿಗ್ಗೆ 9-30 ರಿಂದ 10-30 ರವರೆಗೆ ಈ ಕಾರ್ಯ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close