ದಲಿತರ ಭೂಮಿ ಸ್ವಾಧೀನ ಬಿಡಿಸಿಕೊಡಿ ಎಂದು ಆಗ್ರಹಿಸಿ ದಸಂಸ ಬೃಹತ್ ಪ್ರತಿಭಟನೆ



ಸುದ್ದಿಲೈವ್/ಶಿವಮೊಗ್ಗ

ದಲಿತರ ಭೂಮಿಯ ಸ್ವಾಧೀನ ಬಿಡಿಸಿಕೊಡುವಂತೆ ಆಗ್ರಹಿಸಿ ಇಂದು ದಲಿತ ಸಂಘರ್ಷ ಸಮಿತಿ ಗುರುಮೂರ್ತಿ ಬಣ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದೆ. ಬಿಹೆಚ್ ರಸ್ತೆಯಲ್ಲಿರುವ ಡಿಎಸ್ಎಸ್ ಕಚೇರಿಯಿಂದ ಡಿಸಿ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಲಾಯಿತು. 

ಪರಿಶಿಷ್ಟ ಜಾತಿ / ಪಂಗಡದವರ ಜೀವನ ಮಟ್ಟವನ್ನು ಸುಧಾರಿಸುವ ದೃಷ್ಟಿಯಿಂದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿ ಆ ಮೂಲಕ ಸುಗಮ ಜೀವನ ನಡೆಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಪರಿಶಿಷ್ಟ ಜಾತಿ / ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಸರ್ಕಾರವು ಮಂಜೂರು ಮಾಡಿರುವ ಭೂಮಿಗಳನ್ನು ಅವರ ಅಜ್ಞಾನ ಮತ್ತು ಬಡತನವನ್ನು ಪ್ರಭಾವಿ ಮತ್ತು ಬಲಿಷ್ಠ ವರ್ಗಗಳು ದುರುಪಯೋಗ ಮಾಡಿ ಕೊಂಡು ಮಾರಾಟ ಮತ್ತು ಅಡಮಾನ ಮಾಡಿಸಿಕೊಂಡಿದೆ.  ಈ ಅನ್ಯಾಯವು ನಡೆದಿದೆ. 

ಪರಿಶಿಷ್ಟರಿಗೆ ಮಂಜೂರಾದ ಭೂಮಿಯ ಸ್ವಾಧೀನದಿಂದ ಪರಿಶಿಷ್ಟರ ಮೇಲೆ ಹಲ್ಲೆ ದೌರ್ಜನ್ಯವ್ಯಸಗಿ ಆ ಭೂಮಿಯಿಂದ ಒಕ್ಕಲೆಬ್ಬಿಸಿ ಮೇಲು ಜಾತಿ ಮೇಲು ವರ್ಗದ ಶೋಷಕರು ಕಾನೂನುಬಾಹಿರವಾಗಿ ಪರಿಶಿಷ್ಟರ ಭೂಮಿಯ ಸ್ವಾದೀನವನ್ನು ಪಡೆದಿದ್ದು ಅಲ್ಲಿ ಬೆಳೆ ಬೆಳೆದು ಅವರು ಹಣ ಸಂಪಾದಿಸುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಸಂಘಟನೆ ಆಗ್ರಹಿಸಿದೆ. 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕ್ ಕೂಡ್ಲಿಗೆರೆ ಹೋಬಳಿ ಕಾಚಗೊಂಡನಹಳ್ಳಿ ಗ್ರಾಮದ ಸರ್ವೆ ನಂ 15 ರಲ್ಲಿ ಒಟ್ಟು 528.27 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಭದ್ರಾವತಿ ನಗರದ ಭೋವಿ ಕಾಲೋನಿಯಲ್ಲಿ ವಾಸವಿರುವ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮುದಾಯದ 49 ಜನರಿಗೆ ತಲಾ 2-00 ಎಕರೆಯಂತೆ ಒಟ್ಟು 98.00 ಎಕರೆ ಭೂಮಿಯನ್ನು ದರಕಾಸ್ತು ಮೂಲಕ ಸರ್ಕಾರಿ ಆದೇಶ ಸಂಖ್ಯೆ ಡಿ ಎಸ್ ಆರ್ 2 ಡಿ ಡಿ 24:1956-57 ದಿನಾಂಕ 07-06-57ನೇ ಸಾಲಿನಲ್ಲಿ ಮಂಜೂರು ಮಾಡಿತ್ತು.

ಮಂಜೂರಾದ ಕೆಲವು ವರ್ಷಗಳ ಕಾಲ ದಲಿತರು ಭೂಮಿಯ ಸ್ವಾದೀನಾನುಭದಲ್ಲಿದ್ದು ಖಾತೆ ಪಹಣಿ ಮತ್ತು ಮಂಜೂರಾತಿ ಪತ್ರ ಎಲ್ಲವನ್ನು ಪಡೆದು ಕೊಂಡಿದ್ದರು. ನಂತರದ ವರ್ಷಗಳಲ್ಲಿ ಕಾಚಗೊಂಡನ ಹಳ್ಳಿಯ ಬಲಿಷ್ಠ ವರ್ಗಗಳು ಪ.ಜಾತಿ ಗೆ ಸೇರಿದ ಭೋವಿ ಸಮುದಾಯದವರು ನಮ್ಮ ಗ್ರಾಮದ ನಿವಾಸಿಗಳಲ್ಲ ಇವರೆಲ್ಲರೂ ಭದ್ರಾವತಿಯ ಭೋವಿ ಕಾಲೋನಿಯವರು ಇವರಿಗೆ ಇಲ್ಲಿ ಭೂಮಿ ಮಂಜೂರು ಮಾಡಿದ್ದೇ ತಪ್ಪು ಎಂದು ಕ್ಯಾತೆ ತೆಗೆದು ಭೋವಿ ಸಮುದಾಯವರ ಮೇಲೆ ದೌರ್ಜನ್ಯ ಮಾಡಿ ಭೂಮಿಯಿಂದ ಒಕ್ಕಲೆಬ್ಬಿಸಿದ ಬಲಿಷ್ಠ ಜಾತಿಗಳು ಅಕ್ರಮವಾಗಿ ಭೂಮಿಯ ಸ್ವಾದೀನವನ್ನು ಕಬಳಿಸಿದ್ದಾರೆ. 

ಮಂಜೂರಾತಿಯಾದ 49 ಜನರ ಪೈಕಿ ನಾಲ್ಕು ಜನ ಮಾತ್ರ ಭೂಮಿಯ ಸ್ವಾದೀನನುಭವದಲ್ಲಿದ್ದಾರೆ. ಉಳಿದವರು ಭಯಗೊಂಡು ಅವರಿಗೆ ಮಂಜೂರಾಗಿದ್ದ ಭೂಮಿ ಮೇಲೆ ಹೋಗಲು ಸಾಧ್ಯವಾಗಿಲ್ಲ. ಕೆಲವರು ನ್ಯಾಯಾಲಯದ ಮೊರೆ ಹೋಗಿ ಪಜಾತಿ / ಪಂಗಡಗಳ ( ಕೆಲವು ಭೂಮಿಗಳ ಪರಭಾರೆ ನಿಷೇದ ಕಾಯ್ದೆ 1978 ರಡಿ ಭೂಮಿಯನ್ನು ವಾಪಾಸ್ ಬಿಡಿಸಿಕೊಂಡಿದ್ದಾರೆ.


ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಅಧಿಕಾರಿಗಳು ಮಂಜೂರಾತಿ ಪಡೆದ ಪರಿಶಿಷ್ಟ ಜಾತಿ ಭೋವಿ ಸಮುದಾಯದ ಜನರಿಗೆ ಭೂಮಿಯನ್ನು ವಾಪಾಸ್ ಬಿಡಿಸಿಕೊಟ್ಟಿದ್ದೇವೆಂದು ಕಡತಗಳಲ್ಲಿ ದಾಖಲೆ ಮಾಡಿಕೊಂಡಿದ್ದಾರೆಯೇ ಹೊರತು ಭೂ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಭೂಮಿಯ ಸ್ವಾದೀನವನ್ನು ವಾಪಾಸ್ ಬಿಡಿಸಿಕೊಟ್ಟಿರುವುದಿಲ್ಲ. 1956-57 ನೇ ಸಾಲಿನಿಂದ ಇಂದಿನವರೆಗೂ ದಲಿತರ ಭೂಮಿಗೆ ಸರ್ಕಾರವನ್ನು ಆಗ್ರಹಿಸುತ್ತದೆ.


ಹಕ್ಕೋತ್ತಾಯಗಳು


ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಕೂಡ್ಲಿಗೆರೆ ಹೋಬಳಿ ಕಾಚಕೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 15 ರಲ್ಲಿ 49 ಜನ ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಸಮುದಾಯದ ಕುಟುಂಬಗಳಿಗೆ ದರಕಾಸ್ತು ಮೂಲಕ 1956-57 ರಲ್ಲಿ ಮಂಜೂರಾದ ಭೂಮಿಯಿಂದ ಒಕ್ಕಲೆಬ್ಬಿಸಿ ಬಲಿಷ್ಟ ಮೇಲು ಜಾತಿಯವರು ಅಕ್ರಮವಾಗಿ ಭೂಮಿಯ ಸ್ವಾಧೀನವಯನ್ನು ಹೊಂದಿದ್ದು ಸದರಿಯವರನ್ನು ಭೂಮಿಯಿಂದ ತೆರವುಗೊಳಿಸಿ ಮೂಲ ಮಂಜೂರಾತಿದರಾದ 44 ಜನ ದಲಿತರಿಗೆ ಭೂಮಿಯ ಸ್ವಾಧೀನವನ್ನು ಮರು ಪ್ರನರ್ ಸ್ಥಾಪಿಸಿ/ವಾಪಸ್ ಬಿಡಿಸಿ ಕೊಡಬೇಕು.

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕ್ ಗಳಲ್ಲಿ ಬಗರ್ ಹುಕುಂ ಸಮಿತಿಗಳನ್ನು ಸರ್ಕಾರ ಈಗಾಗಲೇ ರಚನೆ ಮಾಡಿದ್ದು. ಶಿವಮೊಗ್ಗ ತಾಲೂಕಿನಲ್ಲಿ ಮಾತ್ರ ಬಗರ್ ಹುಕುಂ ಸಮಿತಿಯನ್ನು ಇದುವರೆಗೂ ರಚನೆ ಮಾಡಿರುವುದಿಲ್ಲ. ಆದ್ದರಿಂದ ಸರ್ಕಾರ ಶಿವಮೊಗ್ಗ ತಾಲೂಕ್ ಬಗರ್ ಹುಕುಂ ಸಮಿತಿಯನ್ನು ತಕ್ಷಣವೇ ರಚಿಸಿ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close