Girl in a jacket

ಕಾಂಗ್ರೆಸ್ ರೈತರ ಪರವಿದೆ-ಬೇಳೂರು



ಸುದ್ದಿಲೈವ್/ಶಿವಮೊಗ್ಗ

ಬೆಂಗಳೂರಿಗೆ ಶರಾವತಿ ನದಿ ನೀರನ್ನ ಕೊಂಡೊಯ್ಯುವ ಸುದ್ದಿ ಹೆಚ್ಚಿನ ಪ್ರಚಾರ ಪಡೆದುಕೊಂಡಿದೆ. ಯಾವುದೇ ಕಾರಣಕ್ಕೂ ನದಿಯ ನೀರನ್ನ ಬೆಂಗಳೂರಿಗೆ ಹರಿಸೊಲ್ಲ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಸ್ಪಷ್ಟಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರ್ಕಾರ ಬಂದ ನಂತರ ಎಷ್ಟು ಕರ್ಚು ಬೀಳಲಿದೆ ಎಂಬುದನ್ನ‌ ಮಾಹಿತಿಯನ್ನ ಕಲೆಹಾಕಲಾಯಿತು. 20 ಸಾವಿರ ಕೋಟಿ ಕರ್ಚು ತಗುಲಲಿದೆ ಎಂಬ ಮಾಹಿತಿ ಲಭ್ಯವಾಗಿದೆ.‌ ಹಾಗಾಗಿ ಈ ಯೋಜನೆಯನ್ನ ಕೈಬಿಡಲಾಗಿದೆ. ಇದು ಬೊಮ್ಮಾಯಿ ಸರ್ಕಾರದ ಯೋಜನೆಯಾಗಿತ್ತು ಎಂದರು.

ಯಾವುದೇ ಹೋರಾಟಗಳು ಸಜ್ಜುಗೊಳ್ಳುವ ಅವಶ್ಯಕತೆ ಇಲ್ಲ. ಸರ್ಕಾರದ ಮುಂದೆ ಇಲ್ಲ ಎಂದ ಬೇಳೂರು ಬಿಜೆಪಿಯಲ್ಲಿ ಕೆಲವರು ಶತೃಗಳಿದ್ದಾರೆ ಎಂದು ಕುಮಾರ ಸ್ವಾಮಿ ಎಂದಿದ್ದಾರೆ. ವಿಜೇಂದ್ರರನ್ನ ಇಳಿಸಲು ಯತ್ನಾಳ್ ಮತ್ತು ಈಶ್ವರಪ್ಪ ನವರ ತಂಡ ಹೊರಟಿದೆ. ಕಾಂಗ್ರೆಸ್ ನ ಅಧಿಕಾರದಿಂದ ಕೆಳಗಿಳಿಸಲು ಹೊರಟಿವೆ ಎಂದು ದೂರಿದರು. 

ಸಿಎಂ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸಲು ಕುಮಾರ ಸ್ವಾಮಿ ಅವರ ಷಡ್ಯಂತರವಿದೆ ಎಂಬುದು ಬಹಿರಂಗಗೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ. ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದರು. 

ಶರಾವತಿ ಮುಳುಗಡೆ ಸಂತ್ರಸ್ತರ ಜನರನ್ನ ಬಿಜೆಪಿ ಸರ್ಕಾರ ಇದ್ದಾಗ ಮುಳುಗಿಸಿದೆ. ಕೇಂದ್ರದಲ್ಲಿ ಸಂತ್ರಸ್ತರನ್ನ ಉಳಿಸುವ ಮಾತುಗಳನ್ನ ಆಡದೆ, ಅವರ ಆಸ್ತಿಯನ್ನ ಉಳಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಸಂಸದರ ಕಾಲೇಜು ಅಭಯಾರಣ್ಯದಲ್ಲಿದೆ. ಐದಾರು ಸುತ್ತು ವಿಧಾನ ಸಭೆಯಲ್ಲಿ ಸಭೆ ನಡೆದಿದೆ.ನ್ಯಾಯಾಲಯದಲ್ಲಿ  ಅರ್ಜಿ ವಜಾಗೊಂಡಿರುವುದು ಬಿಜೆಪಿ ಅಧಿಕಾರ ಇದ್ದಾಗಲೇ ನಡೆದಿದೆ. 

ಎಲ್ಲಾ ರೀತಿಯ ಚರ್ಚೆ ಆಗಿದೆ. ನಾವು ಖಂಡಿತ ರೈತರ ಪರ ಕಾಂಗ್ರೆಸ್ ಇದೆ. ನ್ಯಾಯಾಲಯದಲ್ಲಿ ಇರುವ ಪ್ರಕರಣಗಳಿಗೆ ನೋಟೀಸ್ ನೀಡಿದ್ದೇವೆ. ಹೊಸದಾಗಿ ಅತಿಕ್ರಮಣ ಆಗಲ್ಲ. ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕಿದೆ ಎಂದರು. 

ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರವನ್ನ ಗೆಲ್ತಿವಿ. ರಾಜ್ಯ ಸರ್ಕಾರವನ್ನ ಗಟ್ಟಿ ಇದೆ ಎಂದು ತೋರಿಸಿಕೊಡಲಿದ್ದೇವೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live