ನಂದಿಕಂಬಕ್ಕೆ ಪೂಜೆಸಲ್ಲಿಸಿ ಅಂಬಾರಿ ಮೆರವಣಿಗೆಗೆ ಚಾಲನೆ



ಸುದ್ದಿಲೈವ್/ಶಿವಮೊಗ್ಗ

ರಾಜ್ಯದ ಎರಡನೇ ಅತಿದೊಡ್ಡ ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿ ಮೆರವಣಿಗೆ ಹಿನ್ನಲೆಯಲ್ಲಿ ಕೋಟೆ ಚಂಡಿಕಾಪರಮೇಶ್ವರ ದೇವಾಲಯದಲ್ಲಿ ಬೆಳ್ಳಿ ಅಂಬಾರಿಗೆ ವಿಶೇಷ ಪೂಜೆ ನಡೆದಿದೆ. 

ಶಾಸಕ ಚನ್ನಬಸಪ್ಪ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಲಾಗಿದೆ. ಈ ವೇಳೆ ಬೆಳ್ಳಿ ಅಂಬಾರಿ ಪೂಜೆಯಲ್ಲಿ ಭಾಗವಹಿಸಿದ ನಟಿ ಭವ್ಯ ಭಾಗಿಯಾಗಿ ನಂತರ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಿಯ ಆಶೀರ್ವಾದ ಪಡೆದರು. 

ಮಧ್ಯಾಹ್ನದ ನಂತರ ಶಿವಪ್ಪ ನಾಯಕ ಅರಮನೆ ಎದುರು  ಜಂಬೂ ಸವಾರಿಗೆ ಚಾಲನೆ ನೀಡಲಾಯಿತು. ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರ ವೇದ ಘೋಷದ ನಡುವೆ ಶಾಸಕ ಚೆನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮೂಲಕ  ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. 

ಈ ವೇಳೆ ಸಚಿವ ಮಧುಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ,  ಡಿ.ಎಸ್.ಅರುಣ್, ಬಲ್ಕಿಸ್ ಭಾನು, ಹೆಚ್ ಸಿ ಯೋಗೀಶ್,  ಎಸಿ ಸತ್ಯನಾರಾಯಣ ಮೊದಲಾದವರು ಭಾಗಿಯಾಗಿದ್ದರು. ನಂತರ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. 53 ದೇವತೆಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ. 

ಮಂಡ್ಯ ಕಲಾತಂಡದಿಂದ ಮತ್ತು ಮಹಿಳೆಯರಿಂದ ಡೊಳ್ಳು, ಕೀಲು ಕುದರೆ, ಮೊದಲಾದ ಜಾನಪದ ತಂಡಗಳು ಮೆರವಣೆಗೆಯ ವೈಭೋಗವನ್ನ ಹೆಚ್ಚಿಸಿದೆ.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close