ಗಮನ ಸೆಳೆಯುತ್ತಿದೆ ನ್ಯೂಸ್18ರವರ ಕರುನಾಡ ಹಬ್ಬ- ನೀವು ಭಾಗಿಯಾಗುವಿರಲ್ಲಾ?


ಸುದ್ದಿಲೈವ್/ಶಿವಮೊಗ್ಗ

ಇಂದಿನಿಂದ ಶಿವಮೊಗ್ಗದಲ್ಲಿ ನ್ಯೂಸ್ 18 ಕನ್ನಡದ ಕರುನಾಡ ಹಬ್ಬ ಕಲರವ ಕೇಳಿ ಬರುತ್ತಿದೆ. ಸೈನ್ಸ್ ಮೈದಾನದಲ್ಲಿ ಕಾರ್ಯಕ್ರಮದ  ಆರಂಭದ ಬಗ್ಗೆ ವೇದಿಕೆ ಸಜ್ಜಾಗುತ್ತಿದೆ. 

ಭರದಿಂದ ನ್ಯೂಸ್ 18 ಕನ್ನಡದ ಕರುನಾಡ ಹಬ್ಬದ ತಯಾರಿ ಭರದಿಂದ ಸಾಗಿದೆ. ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿರುವ ಮೀನಾಕ್ಷಿ ಭವನದ ಎದುರಿನ ಸೈನ್ಸ್ ಮೈದಾನದಲ್ಲಿ ಕರುನಾಡ ಹಬ್ಬ ಕಾರ್ಯಕ್ರಮಕ್ಕೆ ಭರ್ಜರಿ ವೇದಿಕೆ ಆರಂಭಿಸಲಾಗುತ್ತಿದೆ. 

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಮೂರು ದಿನಗಳ ಈ ಸಂಭ್ರಮದ ಹಬ್ಬದಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 10 ರವರೆಗೆ ಕನ್ನಡದ ಕಂಪನ್ನು ಬೀರುವ ಕಾರ್ಯಕ್ರಮಗಳು ನಡೆಯಲಿವೆ.

ದೊಡ್ಡ ದೊಡ್ಡ ಪ್ರವೇಶ ದ್ವಾರಗಳು, ಪ್ರವೇಶ ದ್ವಾರಗಳಲ್ಲಿ ಕನ್ನಡದ ಕವಿಗಳಾದ ದಾ.ರಾ ಬೇಂದ್ರೆ, ಗಿರೀಶ್ ಕಾಸರವಳ್ಳಿ, ಡಾ.ಯು.ಆರ್. ಅನಂತ ಮೂರ್ತಿ, ಕುವೆಂಪು ಡಾ.ಶಿವರಾಮ್ ಕಾರಂತರು ಸೇರಿದಂತೆ ಇತರೆ ಸಾಹಿತಿಗಳ, ಸಿನಿಮಾ ನಟ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅವರ ಫ್ಲೆಕ್ಸ್ ಗಳನ್ನ ಅಳವಡಿಸಲಾಗಿದೆ. 


ಹಂಪಿ, ಮಹಿಷಾಸುರ, ಅಕಗಕಮಹಾದೇವಿ, ಗೊಮ್ಮಟೇಶ್ವರ, ಸಾಸಿವೆ ಕಾಳು ಗಣಪತಿ, ಹಂಪಿ ನರಸಿಂಹ ಹೀಗೆ ಮೊದಲಾದ ಐತಿಹಾಸಿಕ ಕ್ಷೇತ್ರಗಳ ಫ್ಲೆಕ್ಸ್, ಶಾಪ್ ಗಳು ತಿನಿಸು ಅಂಗಡಿಗಳು ಹೀಗೆ ಕಣ್ಮನ ಸೆಳೆಯವಂತೆ ರಚಿಸಲಾಗಿದೆ. ಪ್ರವೇಶ ದ್ವಾರವೇ ಮನಸೆಳೆಯುವಂತೆ ರಚಿಸಲಾಗಿದೆ. ಸುದ್ದಿಲೈವ್ ಸುದ್ದಿವಾಹಿನಿ ಸಹ ಪ್ರಯೋಜಕರಾಗಿದ್ದೇವೆ.‌ ಸಾರ್ವಜನಿಕರು ಹೆಚ್ಚಿನ‌ ಸಂಖ್ಯೆಯಲ್ಲಿ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ. 

ಕರುನಾಡ ಹಬ್ಬಕ್ಕೆ ಮಳೆ ಕೊಂಚಮಟ್ಟಿಗೆ ಬಿಡುವು ನೀಡಿದೆ. ಮಧ್ಯಾಹ್ನದ ವೇಳೆ ಸುರಿದ ಮಳೆ ಎಲ್ಲಾವನ್ನೂ ನೀರಾಗಿಸಿದೆ. ಸಾರ್ವಜನಿಕರು ಮಳೆನ್ನೂ ಲೆಕ್ಕಿಸದೆ ಬಾಗಿಯಾಗುವ ನಿರೀಕ್ಷೆಯಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close