ಶಾಲಾ ಮಕ್ಕಳಿಗೆ ಮೊಟ್ಟೆ ಬದಲು ಹಾಲು ಕೊಡಿ-ಮಹಾಸಭಾ ಮನವಿ



ಸುದ್ದಿಲೈವ್/ಸಾಗರ

ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮೊಟ್ಟೆ ಬದಲು ಹಾಲು ನೀಡುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಸಾಗರ ತಾಲ್ಲೂಕು ಘಟಕ ಏಸಿಯವರ ಮೂಲಕ ಮುಖ್ಯಮಂತ್ರಿ  ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದೆ. 

ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಯ ಬದಲು ಈ ಹಿಂದಿನಂತೆ ಹಾಲನ್ನು ನೀಡುವಂತೆ ಸಂಘಟನೆ ಮನವಿಯಲ್ಲಿ ಒತ್ತಾಯಿಸಿದ್ದು,  ಕರ್ನಾಟಕ ಸರ್ಕಾರವು ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಆರು ದಿನ ಮೊಟ್ಟೆ ಕೊಡುವ ಯೋಜನೆಯನ್ನು ತಂದಿದೆ. 

ಈ ಹಿಂದೆ ರಾಜ್ಯ ಸರ್ಕಾರವು ಕ್ಷೀರ ಭಾಗ್ಯ ಎಂಬ ಹಾಲು ಕೊಡುವ ಉತ್ತಮವಾದ ಯೋಜನೆಯನ್ನು ನೀಡಿ ಎಲ್ಲಾ ಮಕ್ಕಳಿಗೂ ಹಾಲನ್ನು ನೀಡಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರವು ಹಾಲಿನ ಬದಲು ಮೊಟ್ಟೆಯನ್ನು ನೀಡುವ ಮೂಲಕ ಮಕ್ಕಳಲ್ಲಿ ತಾರತಮ್ಯ, ಬೇದ- ಭಾವದ ಭಾವನೆಯನ್ನು ಹುಟ್ಟುಹಾಕಿದೆ. 

ಸಸ್ಯಹಾರಿಗಳು ಈ ಮೊಟ್ಟೆಯನ್ನು ನಿರಾಕರಿಸುವ ಮೂಲಕ ಶಾಲೆಯಲ್ಲಿ ಮಕ್ಕಳ ನಡುವೆ ಮಾನಸಿಕವಾಗಿ ಬೇಧ ಉಂಟಾಗುತ್ತಿದೆ. ಅಲ್ಲದೇ ಸಸ್ಯಹಾರಿಗಳ ಭಾವನೆಗೆ ಈ ಯೋಜನೆ ಧಕ್ಕೆ ಉಂಟು ಮಾಡಿದೆ. ಹಾಗಾಗಿ ವಿದ್ಯೆ ಕಲಿಯುವ ಸರಸ್ವತಿ ಮಂದಿರದಲ್ಲಿ ಈ ರೀತಿಯ ಮೊಟ್ಟೆ ಭಾಗ್ಯವು ವಿದ್ಯಾರ್ಥಿಗಳ ನಡುವೆ ಬೇಧ-ಭಾವ, ಸಾಮಾಜಿಕ ವೈರುಧ್ಯಕ್ಕೆ ಕಾರಣವಾಗಿದೆ. 

ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಹೋಗಿವೆ ಈ ರೀತಿಯ ತಾರತಮ್ಯ ಮುಂದುವರೆದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆಯು ಮತ್ತಷ್ಟು ಕ್ಷೀಣಿಸುತ್ತದೆ. ಈ ಸರ್ಕಾರದ ವಿಷಯದಲ್ಲಿ ಮೊಟ್ಟೆಗಿಂತ ಹಾಲನ್ನು ನೀಡಬೇಕು ಮತ್ತು ಅದು ಮಕ್ಕಳ ಜ್ಞಾನಾರ್ಜನೆ ಮತ್ತು ಪೌಷ್ಠಿಕಾಂಶಕ್ಕೆ ಸಹಕಾರಿಯಾಗಿದೆ ಎಂದು ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ. 

ಆದ್ದರಿಂದ ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಯ ಬದಲು ಈ ಹಿಂದಿನಂತೆ ಹಾಲನ್ನು ನೀಡಬೇಕೆಂದು ಈ ಮೂಲಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭ, ಸಾಗರ ಘಟಕ ಮನವಿಯಲ್ಲಿ ಅಗ್ರಹಿಸಿದೆ. 

ಅಧ್ಯಕ್ಷರಾದ ಕೆ ವಿ ಪ್ರವೀಣ್ ಉಪಾಧ್ಯಕ್ಷರಾದ ಎಸ್ ಪಾಟೀಲ್ ಶ್ರೀಮತಿ ಶೋಭಾ ಶ್ರೀಮತಿ ವೀಣಾ ಜಂಬಿಗೆ ವೀರಭದ್ರಪ್ಪ ಕುಮಾರ್ ಗೌಡ್ರು ರಾಚಯ್ಯ ಚಂದ್ರಶೇಖರಯ್ಯ ಮುಂತಾದವರು ಮನವಿ ನೀಡುವ ವೇಳೆ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close