Girl in a jacket

ಸಿಡಿಲು ಬಡಿದು ಸೀಳಿಹೋದ ಟಾರ್ ರಸ್ತೆ?


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ತಾಲ್ಲೂಕು ಸಿಂಹಾ ಧಾಮದ ಮುಖ್ಯ ರಸ್ತೆಯಿಂದ ಮುದ್ದಿನಕೊಪ್ಪ ಮತ್ತು ಯರೇಕೊಪ್ಪ ಗ್ರಾಮದ  ಮಧ್ಯ ಇಂದು ಬೆಳಗ್ಗೆ ಭಾರಿ ಮಳೆಯ ವೇಳೆ ಕಾಣಿಸಿಕೊಂಡ ಸಿಡಿಲು ರಸ್ತೆ ಗೆ ಬಡೆದಿರುವ ದೃಶ್ಯ ಲಭ್ಯವಾಗಿದೆ. 

ರಸ್ತೆಯನ್ನೇ ಸೀಳಿರುವ ಫೊಟೊವೊಂದು ಕಳುಹಿಸಿರುವ ಸ್ಥಳೀಯರು ಸಿಡಿಲ ಪರಿಣಾಮ ರಸ್ತೆ ಹಾನಿಯಾಗಿರುವುದಾಗಿ ದೂರಿದ್ದಾರೆ.  ಅದೃಷ್ಟ ವಶಾಹಾತ ಆ ಸಮಯದಲ್ಲಿ ರಸ್ತೆಯಲ್ಲಿ ಯಾರು ಇಲ್ಲವಾದುದರಿಂದ ದೊಡ್ಡ ದುರಂತವೊಂದು ತಪ್ಪಿದೆ.

ಸಿಡಿಲು ಬಡಿದು ಸ್ವಲ್ಪ ಸಮಯದ ನಂತರ ಸ್ಥಳೀಯರು ಸ್ಥಳದ ಪೋಟೋವನ್ನ  ಪತ್ರಿಕೆಗಳಿಗೆ ಹಾಗೂ ವೈಬ್ ಸೈಟ್ ಗೆ ಕಳಿಸಿಕೊಟ್ಟಿದ್ದಾರೆ. ಸಂಬಂಧ ಪಟ್ಟ ಇಲಾಖೆಯವರು ಇದರ ಬಗ್ಗೆ ಗಮನ ಹರಿಸಬೇಕೆಂದು ಕೋರಿದ್ದಾರೆ. 

ಆದರೆ ಸಿಡಿಲು ಹೊಡೆದ ಮತ್ತು ಸಿಡಿಲಿನ ಅನಾಹುತದ ಬಗ್ಗೆ ಜಿಲ್ಲಾಡಳಿತದ ಬಳಿ ಮಾಹಿತಿ ಲಭ್ಯವಾಗದೆ ಇರುವುದರಿಂದ ವೆಬ್ ಸೈಟ್ ಸಹ ಈ ಘಟನಾವಳಿಯ ಬಗ್ಗೆ ಖಾತರಿ ಪಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಸ್ಥಳೀಯರ ಮಾತನ್ನೂ ಸಹ ತೆಗೆದು ಹಾಕುವಂತಿಲ್ಲ. ಸ್ಥಳೀಯರೆ ಪ್ರತಿ ಘಟನಾವಳಿಗೆ ಸಾಕ್ಷಿಯಾಗುವುದರಿಂದ ಪುರಸ್ಕರಿಸಿ ಸುದ್ದಿಮಾಡಲಾಗಿದೆ. 

ತಹಶೀಲ್ದಾರ್ ರೌಡ್ಸ್


ಈ ಮಧ್ಯೆ ಮಳೆಹಾನಿಗೊಳಗಾದ ಎಲ್ ಬಿಎಸ್ ನಗರದಲ್ಲಿ ತಹಶೀಲ್ದಾರ್ ಗಿರೀಶ್ ಭೇಟಿ ನೀಡಿದ್ದಾರೆ. ಎಲ್ ಬಿಎಸ್ ನಗರದ ಪಕ್ಕದ ರಾಜಾಕಾಲುವೆ ಮೈದುಂಬಿ ಹರಿಯುತ್ತಿದೆ. ಇಲ್ಲಿನ ಸುತ್ತಮುತ್ತಲಿನ ಮನೆಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ವೇಳೆ ತಹಶೀಲ್ದಾರ್ ಭೇಟಿಯಿಂದ ಸ್ಥಳೀಯರಿಗೆ ದೈರ್ಯ ತುಂಬಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live