Girl in a jacket

ವಾಟರ್ ಬೋರ್ಡ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ ಡಿಪಿಐ ಆಗ್ರಹ


ಸುದ್ದಿಲೈವ್/ಶಿವಮೊಗ್ಗ

ಕುಡಿಯುವ ನೀರು ಸರಬರಾಜು ಮಾಡಿದ ಅಧಿಕಾರಿಗಳ ವಿರುದ್ಧ ಎಸ್ ಡಿ ಪಿಐ ಶಿವಮೊಗ್ಗ‌ ಘಟಕ ಮತ್ತೊಂದು ಆಗ್ರಹಕ್ಕೆ ಮುಂದಾಗಿದೆ.‌ 

ವಾಟರ್‌ಬೋರ್ಡ್ ಅಧಿಕಾರಿಗಳು ನೀರಿನಲ್ಲಿ ಕಲುಷಿತ ನೀರು ಸೇರಿಕೊಂಡಿದೆ ಎಂಬ ಪತ್ರಿಕಾ ಪ್ರಕಟಣೆ ಮಾಡಿದ ಬೆನ್ನಲ್ಲೇ ಅ.11 ರಂದು ಎಸ್ ಡಿಪಿಐ ಜಿಲ್ಲಾ ಘಟಕ ಕಲುಷಿತ ನೀರು ಸರಬರಾಜಿಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ‌ ಎಂದು ಆರೋಪಿಸಿತ್ತು. 

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಾಗರೀಕರಿಗೆ ನೀರು ಶುದ್ದೀಕರಿಸಿ, ವೈಜ್ಞಾನಿಕ ಪರೀಕ್ಷೆ ನಡೆಸಿ ಆರೋಗ್ಯಕರ ಶುದ್ಧ ನೀರು ನೀಡುವುದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜವಾಬ್ದಾರಿಯಾಗಿದೆ. 

ಆದರೆ ವರ್ಷಾನುಗಟ್ಟಲೆ ನೀರು ಶುದ್ದೀಕರಣ ಘಟಕ ಸ್ವಚ್ಛ ಮಾಡದೇ ನಿರ್ಲಕ್ಷ್ಯ ವಹಿಸಿಕೊಂಡು ಮಂಡಳಿಯ ಅಧಿಕಾರಿಗಳು ಕಲುಷಿತಗೊಂಡಿರುವ ನೀರು ಸರಬರಾಜು ಮಾಡಿ ನೀರಿನಲ್ಲಿ Turbidity ಹೆಚ್ಚಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸುಳ್ಳು ಹೇಳಿತ್ತಿದ್ದಾರೆ ಎಂದು  ಪಕ್ಷದ ಜಿಲ್ಲಾಧ್ಯಕ್ಷ ಇಮ್ರಾನ್ ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿದ್ದರು.  

ಯಾವಾಗ ಪಕ್ಷದ ಆಗ್ರಹದ ಹಿನ್ನೆಲೆಯಲ್ಲಿ  ಎಚ್ಚೆತ್ತುಕೊಂಡ ಅಧಿಕಾರಿಗಳು ನೀರೂ ಶುದ್ದೀಕರಣ ಘಟಕ ಸ್ವಚ್ಛ ಕಾರ್ಯ ಆರಂಭಿಸಿದೆ. ಈ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಿವಮೊಗ್ಗ ಮಹಾನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದೆ ಜನತೆ ಕಳೆದ 6ದಿನಗಳಿಂದ ಕೊಳಕು ನೀರು ಕುಡಿದಿರುವುದು ಆರೋಗ್ಯದಲ್ಲಿ ಏರುಫೇರು ಆಗಿದೆ.

ನಿರ್ಲಕ್ಷ್ಯ ವಹಿಸಿದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬಕ್ಕೆ ಅದೇ ಕೊಳಕು ಹಾಗೂ ಕಲುಷಿತ ನೀರು ಕುಡಿಯಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಇಮ್ರಾನ್ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು