ಶೂಟ್ಔಟ್ ಇರ್ಫಾನ್ ವಿರುದ್ಧ ದೂರು ದಾಖಲು


ಸುದ್ದಿಲೈವ್/ಶಿವಮೊಗ್ಗ

ಇರ್ಫಾನ್ ಯಾನೆ ಶೂಟ್ ಔಟ್ ಇರ್ಫಾನ್ ವಿರುದ್ಧ ದೂರು ದಾಖಲಾಗಿದೆ. ಕೊಲೆಗೆ ಯತ್ನಿಸಿದ ಆರೋಪದ ಅಡಿ ನಗರದ ತುಂಗ ನಗರ ಪೊಲೀಸ್  ಠಾಣೆಯಲ್ಲಿ ದೂರು ದಾಖಲಾಗಿದೆ.

ಜೆಪಿ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಅಲಿಖಾನ್ ಮೇಲೆ ಶೂಟ್ ಔಟ್ ಇರ್ಫಾನ್  ಮಾರಣಾಂತಿಕ ಹಲ್ಲೆಗೆ ಯತ್ನಿಸಿದ್ದು, ಈತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮದ್ಯ ಸೇವಿಸಿ ಗಾಂಜಾ ಅಮಲಿನಲ್ಲಿದ್ದ ಇರ್ಫಾನ್ ಮೊದಲಿಗೆ ಅಲಿಖಾನ್ ನ ಚಿಕ್ಕಮ್ಮನ ಮಗ ಚಾಂದು ಬಳಿ ಗಲಾಟೆ ನಡೆಸಿದ್ದಾನೆ. 

ಇದನ್ನ ಕಂಡ ಅಲಿಖಾನ್ ಜಗಳ ಬಿಡಿಸಿದ್ದಾನೆ. ಚಾಂದು ಗಲಾಟೆ ಜಾಗದಿಂದ ತೆರಳಿದ ನಂತರ ಶೂಟ್ ಔಟ್ ಇರ್ಫಾನ್ ಅಲಿಖಾನ್ ಗೆ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾನೆ. ತನ್ನ ಬಳಿ ಇದ್ದ ಭರ್ಜಿಯಿಂದ ಇರ್ಫಾನ್ ಅಲಿಖಾನ್ ತಲೆಗೆ ಹೊಡೆದಿದ್ದಾರೆ. ಅಕ್ಕಪಕ್ಕದ ಜನ ಗಾಯಗೊಂಡ ಅಲಿಖಾನ್ ನನ್ನ ಮೆಗ್ಗಾನ್ ಗೆ ದಾಖಲಿಸಿದ್ದನೆ. 

ಇದರಿಂದ ಸಾಯಿಸುವ ಉದ್ದೇಶದಿಂದ ಸಂಚುರೂಪಿಸಿ ಭರ್ಜಿಯಿಂದ ತಲೆಗೆ ಹೊಡೆದ ಇರ್ಫಾನ್ ಯಾನೆ ಶೂಟ್ ಔಟ್ ಇರ್ಫಾನ್ ವಿರುದ್ಧ ಕ್ರಮ ಜರುಗಿಸುವಂತೆ ಲಿಖಾಮ್ ದೂರಿನಲ್ಲಿ ಆಗ್ರಹಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close