ಸುದ್ದಿಲೈವ್/ಶಿವಮೊಗ್ಗ
ಎಸ್ ಬಂಗಾರಪ್ಪನವರ ಹುಟ್ಟುಹಬ್ಬವನ್ನ ಅ.26 ರಂದು ಸೊರಬದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಬೆಂಗಳೂರಿನ ಎಸ್ ಬಂಗಾರಪ್ಪ ವಿಚಾರ ವೇದಿಕೆಯ ವೇಣುಗೋಪಾಲ್ ನಾಯ್ಕ್, ಈ ಹಿಂದೆ ಅನಿಲ್ ಕುಂಬ್ಳೆ ಸೇರಿದಂತೆ ಹಲವರಿಗೆ, ಸೇವಬಂಗಾರ ಪ್ರಶಸ್ತಿಯನ್ನ ನೀಡಲಾಗಿತ್ತು.
ಅದರಂತೆ ಸಾಹಿತಿ ಕು.ವೀರಭದ್ರಪ್ಪ ನವರಿಗೆ ಸಾಹಿತ್ಯ ಬಂಗಾರ ಪ್ರಶಸ್ತಿ ನೀಡಲಾಗುತ್ತಿದೆ. ಸಮಾಜ ಸೇವಾ ಕ್ಷೇತ್ರದ ಸಾಧಕಿ ಸುಮಂಗಲಿಗೆ ಸೇವಾ ಬಂಗಾರ, ಪ್ರತಿಭಾ ನಾರಾಯಣ್ ಅವರಿಗೆ ಕಲಾಬಂಗಾರ ಪ್ರಶಸ್ತಿಯನ್ನ ನೀಡಲಾಗುತ್ತಿದೆ. ಅ.26 ರಂದು ಸೊರಬದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
2012-13 ರಿಂದ ನೀಡಲಾಗುತ್ತಿತ್ತು. ಮಧ್ಯದಲ್ಲಿ ನಿಂತಿತ್ತು. ಮತ್ತೆ ಕಳೆದ ವರ್ಷದಿಂದ ಕೊಡಲಾಗುತ್ತಿದೆ ಎಂದ ಅವರು ಅ.24 ರಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಂಗಾರಪ್ಪನವರ ಕುರಿತಂತೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಶಸ್ತಿಯು ಒಂದು ಲಕ್ಷ ನಗದು ಮತ್ತು ತಾಮ್ರದ ಪ್ರಶಸ್ತಿಯನ್ನ ಹೊಂದಿದೆ ಎಂದು ಅವರು ತಿಳಿಸಿದರು. ಶಮಂತ್, ಮಧುಚಂದ್ರ ಹಾಗೂ ಹಿಮಗಿರಿ ಮಂಜುನಾಥ್ ಜಿ.ಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.