Girl in a jacket

ಸಿದ್ದರಾಮಯ್ಯನವರೇ ನಿಜವಾದ ಭಯೋತ್ಪಾದಕರು-ಚಲವಾದಿ ನಾರಾಯಣ ಸ್ವಾಮಿ


ಸುದ್ದಿಲೈವ್/ಶಿವಮೊಗ್ಗ

ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರ ಕೈಯಲ್ಲಿ  ಬಿಜೆಪಿ ಪಕ್ಷ ಸುಭದ್ರವಾಗಿದೆ ಎಂದುವಿಧಾನ ಪರಿಷತ್‌ನ ವಿಪಕ್ಷ ನಾಯಕ ಚಲುವಾದಿ ನಾರಾಯಣ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಹುರುಪಿನ ಯುವ ನಾಯಕ ಬಿ.ವೈ ವಿಜೇಂದ್ರ ಅವರ ಕೈ‌ಅಡಿ ಮೂರು ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದರು. ಆದರೆ ಯತ್ನಾಳ್ ಅವರ ನಾಯಕತ್ವವನ್ನೇ ಪ್ರಶ್ನಿಸಿದ್ದಾರೆ ಎಂಬ ಮಾಧ್ಯಮ ಪ್ರಶ್ನೆ ಉತ್ತರಿಸಿದ ಅವರು ಯತ್ನಾಳ್ ಪಕ್ಷದ ಹಿರಿಯರು, ಅವರು ಹೇಳುವ ವಿಷಯವನ್ನ ಸರಿಪಡಿಸಿಕೊಂಡು ವಿಜೇಂದ್ರ ಮುಂದೆ ಸಾಗುತ್ತಿದ್ದಾರೆ ಎಂದರು.‌   

ಕಾಂಗ್ರೆಸ್ ಲೂಟಿಯಲ್ಲಿ ತೊಡಗಿದೆ. ಮೂಡಾ ಮತ್ತು ವಾಲ್ಮೀಕಿ ಹಗರಣದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಅಲಿಖಿತ ಸಂವಿಧಾನ ಜಾರಿಯಲ್ಲಿದೆ. ಬಾಂಬ್ ಹಾಕಿದ್ದವರು ಬ್ರದರ್ಸ್, ಕದ್ದವರು ಅಮಾಯಕರು, ಬಾಂಗ್ಲಾ ವ್ಯವಸ್ಥೆಯನ್ನ ಬೆಂಬಲಿಸುವವರು  ದೇಶಭಕ್ತರಾಗಿದ್ದಾರೆ. ನಾನು ಜಗ್ಗೋದಿಲ್ಲ ಬಗ್ಗೋದಿಲ್ಲ ಎಂದು ಸಿಎಂ ವಿಪಕ್ಷಗಳನ್ನ ಜರಿಯುತ್ತಿದ್ದಾರೆ. 

ರಾತ್ರೋರಾತ್ರಿ ಮೂಡ ಸೈಟ್ ಗಳನ್ನ ಸರೆಂಡರ್ ಮಾಡಿದ್ದೇಕೆ? ಜಗ್ಗಿದ್ಯಾಕೆ ಎಂದು ಪ್ರಶ್ನಿಸಿದ ನಾರಾಯಣ ಸ್ವಾಮಿ ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ಕೇಳೋದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಸೈಟ್ ಗಳನ್ನ ಜಮೀನನ್ನ ಸರೆಂಡರ್ ಮಾಡಿ ಬಟ್ಟೆ ಹರಿದುಕೊಂಡಿದ್ದೇಕೆ ಎಂದು ಪ್ರಶ್ನಿಸಿದರು. 

ಸಿಬಿಐ ಕೇಸನ್ನ ಸಚಿವ ಸಂಪುಟದಲ್ಲಿ ಹಿಂಪಡೆದಿರುವ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಲಿದೆ. ಅದನ್ನ ಹಿಂಪಡೆಯಲು ಸಾಧ್ಯವಾಗಿಲ್ಲ ಮುಂದುವರೆದಿದೆ. ಹುಬ್ಬಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಗಲಭೆಕೋರರ ಮೇಲೆ ಕೇಸ್ ವಾಪಾಸ್ ಪಡೆಯಲಾಗಿದೆ. ಇದನ್ನ ಕೇಳಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯನ್ನ ಭಯೋತ್ಪಾದಕ ಎಂದು ಸಿಎಂ ಹೇಳುತ್ತಾರೆ. ನಿಜವಾದ ಭಯೋತ್ಪಾದಕ ಸಿದ್ದರಾಮಯ್ಯನೇ ಎಂದರು. 

ಸಾರ್ವಜನಿಕ ಕಾರ್ಯಕ್ರಮಕ್ಕೆ ಸಿಎಂ ಹೋದರೆ ಸಾರ್ವಜನಿಕರು ಸೈಟ್ ಕಳ್ಳ ಬಂದ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ‌ ಅಧಿಕಾರಕ್ಕೆ ಬರೊಲ್ಲ. ಕಾಂಗ್ರೆಸ್ ಸಚಿವರೆಲ್ಲಾ ಜಾಮೀನನ ಮೇಲೆ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಚುನಾವಣೆಯನ್ನ ಹೇಗೆ ಎದುರಿಸುತ್ತಾರೆ ಎಂದು ಪ್ರಶ್ನಿಸಿದರು. 

ಹಿಂದೂ ಸಂಘಟನೆ, ದಲಿತರ, ರೈತರ ವಿರುದ್ಧ ಕೇಸ್ ಆಗಿವೆ. ಆ ಕೇಸ್ ಗಳನ್ನ ಯಾಕೆ ವಾಪಾಸ್ ಪಡೆಯಲಿಲ್ಲ? ಪೂರ್ವಯೋಜನೆ ಅಪರಾಧವನ್ನ ಹಿಂಪಡೆದಿರುವ ರಾಜ್ಯ ಸರ್ಕಾರವೂ ಸಹ   ಕ್ರಿಮಿನಲ್ ಆರೋಪಕ್ಕೆ ಬರಲಿದೆ. ಇದನ್ನ ಕೇಂದ್ರ ಸರ್ಕಾರವನ್ನ ವಜಾಗೊಳಿಸಬೇಕು. ಇದಕ್ಕೆ ನಾನು ಕೇಂದ್ರಕ್ಕೆ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದು ವಜಾಗೊಳಿಸಲು ಆಗ್ರಹಿಸಿರುವೆ ಎಂದರು. 

ಎಸ್ಎಟಿಪಿಗೆ ಇಟ್ಟ ದಲಿತರ ಅಭಿವೃದ್ಧಿ ಹಣವನ್ನ ದುರ್ಬಳಕೆ ಮಾಡಲಾಗಿದೆ. ಬಳ್ಳಾರಿ ಉಪಚುನಾವಣೆಗೆ ಹಣ ದುರ್ಬಳಕೆ ಮಾಡಲಾಗಿದೆ. ವಾಲ್ಮೀಕಿ ಹಗರಣದಲ್ಲಿ 187 ಕೋಟಿ ದುರಪಯೋಗವಾಗಿದೆ ಎಂದರೆ 84 ಕೋಟಿ ಮಾತ್ರ ದುರ್ಬಳಕೆ ಆಗಿದೆ ಎಂದು ಸಿಎಂ ಹೇಳುತ್ತಾರೆ. ಎಐಆರ್ ಡಿಎಲ್ ಜಮೀನನ್ನ  2.5 ಕೋಟಿ ರೂ.ಗೆ ಖರೀದಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆಯವರು 6 ತಿಂಗಳ ನಂತರ 5.5 ಕೋಟಿಗೆ ಏರಿಸಿ ಮಾರಾಟ ಮಾಡಿದ್ದಾರೆ.‌ ಆ ಹಣವನ್ನ ತೆಲಂಗಾಣ ಚುನಾವಣೆಗೆ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಲೂಟಿಯಲ್ಲಿರುವ‌ ರಾಜ್ಯ ಸರ್ಕಾರ ವಜಾಗೊಳ್ಳಬೇಕೆಂದರು. 

ನಾಲ್ಕುವರ್ಷ ನಂತರ ಯಾವುದೇ ಸರ್ಕಾರ ಆರೋಪಗಳು ಕೇಳಿ ಬರುತ್ತದೆ. ಆದರೆ ಈ ಸರ್ಕಾರ ಬಂದ ತಕ್ಷಣ ಲೂಟಿಯಲ್ಲಿ ತೊಡಗಿವೆ. ಇದನ್ನ ಡೈವರ್ಟ್ ಮಾಡಲು ಜನಗಣತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನಾಲ್ಕುಗ್ರೂಪ್ ಗೆ ಮೀಸಲಾತಿ ಹೆಚ್ಚಿಸಿ ಹಂಚಿಕೆ ಮಾಡಿರುವ ಬಿಜೆಪಿ ಜಾರಿಗೊಳಿಸಿದಂತೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ತೊಂದರೆಯಲ್ಲಿ ಸಿಲುಕಿಕೊಳ್ತೀರಿ ಎಂಬ ಕಿವಿ ಮಾತನ್ನ‌ಹೇಳಿದರು. 

ಶಿಗ್ಗಾವಿ, ಚನ್ನಪಟ್ಟಣ ಹಾಗೂ ಸಂಡೂರಿನಲ್ಲಿ ಉಪಚುನಾವಣೆ ಘೋಷಣೆಯಾಗಿದೆ ಅಭ್ಯರ್ಥಿಗಳು ಯಾರು ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ವಿಪಕ್ಷ ನಾಯಕ,  ಯಾರೇ ಇದ್ದರೂ ಎನ್ ಡಿಎ ಕ್ಯಾಂಡಿಡೇಟ್ ಆಗಿರುತ್ತಾರೆ. ಅಭ್ಯರ್ಥಿಯನ್ನ ಈ ವಾರದಲ್ಲಿ ತೀರ್ಮಾನಿಸಲಾಗುವುದು ಎಂದರು.‌

ಠಾಣೆಯ ಮೇಲಿನ ದಾಳಿಕೋರರ ಮೇಲಿನ ಕೇಸ್ ವಾಪಾಸ್ ಪಡೆದು ವಿಪಕ್ಷಗಳನ್ನ ಡೈವರ್ಟ್ ಮಾಡಲೆತ್ತಿಸಿದ್ದಾರೆ. ಎಷ್ಟುದಿನ ಹೀಗೆ ಡೈವರ್ಟ್ ಮಾಡಿ ಎಷ್ಟುದಿನ ಸಿದ್ರಾಮಯ್ಯ ಸಿಎಂ ಸ್ಥಾನದಲ್ಲಿ ಉಳಿಯುತ್ತಾರೆ ಎಂದು ಪ್ರಶ್ನಿಸಿದರು. ಕದ್ದ ಮಾಲುಗಳೆಲ್ಲ ವಾಪಾಸ್ ಬರುತ್ತಿದೆ. ಈ ಸರ್ಕಾರದಲ್ಲಿ  ಕದಿಯಬಹುದು ಸಿಕ್ಕಿಕೊಂಡ ಮೇಲೆ ಸಾರಿ ಕೇಳಿದರೆ ಈ ಸರ್ಕಾರದಲ್ಲಿ ಮಾಫಿಕೂಡ ಇದೆ ಎಂದು ದೂರಿದರು. 

ಆಕಸ್ಮಾತ್ ಆಗಿ ಶಿವಮೊಗ್ಗಕ್ಕೆ ಭೇಟಿ ನೀಡಿರುವೆ. ಉಡುಪಿ ಮತ್ತು ಮಂಗಳೂರಿನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ತೆರವಿನಿಂದ ಖಾಲಿಯಾಗಿರುವ ಎಂಎಲ್ ಸಿ ಸ್ಥಾನಕ್ಕೆ ಚುನಾವಣೆ ನಿಗದಿಯಾದ ಪರಿಣಾಮ ಭೇಟಿ ನೀಡಲಾಗಿತ್ತು. ಹಾಗೆ ಶಿವಮೊಗ್ಗಕ್ಕೆ ಭೇಟಿ ನೀಡಿರುವುದಾಗಿ ಹೇಳಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು