Girl in a jacket

ಅವ್ಯವಸ್ಥೆಯ ಆಗರವಾದ ಕೃಷಿ ಮೇಳ



ಸುದ್ದಿಲೈವ್/ಶಿವಮೊಗ್ಗ

ನವುಲೆ ಕೃಷಿ ಮಹಾವಿದ್ಯಾಲಯದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿಗಳ ಸಹಯೋಗದೊಂದಿಗೆ ಕೃಷಿ ತೋಟಗಾರಿಕೆ ಮೇಳ-2024 ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಗಿದೆ.  ರೈತರ ಹಿಡಿಶಾಪಕ್ಕೆ ಗುರಿಯಾಗಿದೆ.  

ನಾಲ್ಕುದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಉದ್ಯಾನವನ, ಹೈ ತೋಟಗಾರಿಕೆ, ಕೀಟಪ್ರಪಂಚ, ಜೇನುಸಾಕಾಣಿಕೆ, ಸಾವಯಕೃಷಿ ಮತ್ತು ಅಣಬೆ ಬೇಸಾಯ, ರೈತವಿಜ್ಞಾನ ಸಂವಾದ,  ಸಿರಿಧಾನ್ಯಗಳ ಮಹತ್ವ, ಮೀನುಗಾರಿಕೆ ಮೊದಲಾದ ಕೃಷಿ ಉತ್ಪನ್ನಗಳ ಬೆಳೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಆದರೆ ಕಾರ್ಯಕ್ರಮದ ಕಾರ್ಯಕ್ರಮ ಕೊಚ್ಚೆಗುಂಡಿಯಿಂದ ತುಂಬಿದೆ. 

ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾದರೂ ಆರಂಭಗೊಳ್ಳುವ ಲಕ್ಷಣಗಳೇ ಕಂಡುಬರುತ್ತಿಲ್ಲ. ಆಗಮಿಸಬೇಕಿದ್ದ ಸಚಿವತ್ರಯರು ಕಾರ್ಯಕ್ರಮದಲ್ಲಿ ಗೈರು ಆಗಿದ್ದಾರೆ. ಕೃಷಿ ಸಚಿವ ಚಲುರಾಯ ಸ್ವಾಮಿ ಮತ್ತು ಸಚಿವ ಮಧು ಬಂಗಾರಪ್ಪ ಗೈರು ಆಗಿದ್ದಾರೆ. ಕೃಷಿ ಮೇಳವನ್ನ ಡಾ.ಮಲ್ಲಿಜಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳಿಂದ ಉದ್ಘಾಟಿಸಲಾಗಿದೆ 

ಕಾರ್ಯಕ್ರಮದಲ್ಲಿ ವಾಸನೆ ಮಗ್ಗಟ್ಟತ್ತಿದೆ. 200 ಸ್ಟಾಲ್ ಗಳನ್ನ ಸ್ಥಾಪಿಸಲಾಗಿದ್ದರು ಎಲ್ಲಾ ಸ್ಟಾಲ್ ಗಳು ಖಾಲಿಇವೆ. ನಾಲ್ಕು ದಿನಗಳವರೆಗೆ ನಡೆಯುವ ಈ ಮೇಳದಲ್ಲಿ 200  ಸ್ಟಾಲ್‌ಗಳು ಭರ್ತಿಯಾಗುತ್ತವಾ ಎಂಬುದೇ ಕುತೂಹಲ ಮೂಡಿಸಿವೆ. ಒಂದು ಸ್ಟಾಲ್ ಗೆ 20 ಸಾವಿರ ರೂ. ನಿಗದಿ ಪಡಿಸಲಾಗಿದೆ. ಕೊಚ್ಚೆ ಮುಚ್ಚಲು ಜೆಸಿಬಿಗಳ ಅಬ್ವರವೇ ಕೇಳಿ ಬರುತ್ತಿದೆ. 



ಮೊದಲೇ ವ್ಯವಸ್ಥೆ ಮಾಡಿಕೊಳ್ಳದ ವಿವಿಯು ಆರಂಭದ ದಿನದಂದು ಎಲ್ಲ ಮುಚ್ಚಿಕೊಳ್ಳಲು ಹೋಗಿ ಅವ್ಯವಸ್ಥೆಯ ಆಗರವನ್ನ ಮಾಡಿಕೊಂಡಿರುವುದು ಕಂಡುಬರುತ್ತಿದೆ. ವಸ್ತುಪ್ರದರ್ಶನದ ಒಳಗಡೆನೇ ವಾಹನ ತೆರವಿಗೆ ಧ್ವನಿವರ್ಧಕದಲ್ಲಿ ಪದೇ ಪದೇ ಅನೌನ್ಸ್ ಮೆಂಟ್ ಮಾಡಿದರೂ ಸಹ   ಯಾರೂ ಕೇಳದೆ ವಾಹನವನ್ನ ತೆರವುಗೊಳಿಸದ ಇರುವುದು ಕಂಡು ಬಂದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು