ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ದಸರಾಕ್ಕೆ ಹಲವು ಬಾರಿ ಸಕ್ರೆ ಬೈಲಿನ ಆನೆಗಳನ್ನ ತೊಡಗಿಸಿಕೊಂಡು ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದೆ. ಈ ಬಾರಿಯ ದಸರಾಕ್ಕೂ ಸಕ್ರೆಬೈಲಿನ ಆನೆಗಳನ್ನ ಕರೆತರಿಸಿ ಅಂಬಾರಿ ಹೋರುವ ಪ್ರಕ್ರಿಯೆ ನಡೆದಿದೆ.
ಕಳೆದ ಎರಡು ಬಾರಿಯ ಘಟನೆಗಳು ಕಹಿ ಅನುಭವನ್ನ ಉಂಟು ಮಾಡಿದೆ. ಇದರಲ್ಲಿ ಆನೆಗಳ ತಪ್ಪು ಎಂದರೆ ಅಕ್ಷಶಃ ಸ್ಥೀಮಿತ ಕಳೆದುಕೊಂಡು ಮಾತನಾಡಿದಂತಾಗುತ್ತದೆ. ಇದನ್ನ ನೋಡಿಕೊಳ್ಳುವ ಇಲಾಖೆ ಈ ಎರಡು ದಸರಾದಲ್ಲಿ ಕಹಿ ಅನುಭವ ಉಣಬಡಿಸಿದೆ.
ಆನೆಗಳ ಅಂಬಾರಿ ಹೋರುವ ಹಿಂದಿನ ದಿನಗಳು ಆದಂತಹ ಘಟನೆಗಳು ದಸರಾ ಹಬ್ಬವನ್ನೇ ಮಂಕಾಗಿಸಿತ್ತು. ಒಮ್ಮೆ ಸಾಗರ ಎಂಬ ಆನೆ ತಾಲೀಮು ನಡೆಸಿ ಮೆರವಣಿಗೆ ನಡೆಯುವ ಹಿಂದಿನ ದಿನವೇ ಬೇದಿಯಿಂದ ನರಳಿತ್ತು.
ಇದಾದದ ನಂತರ ಕಳೆದ ದಸರಾದಲ್ಲಿ ಅಂಬಾರಿ ಮೆರವಣಿಗೆ ಹೊರಡುವ ಹಿಂದಿನ ದಿನ ಕುಂತಿ ಎಂಬ ಆನೆ ಮರಿಯಿಂದಕ್ಕೆ ಜನ್ಮ ನೀಡಿತ್ತು. ಈ ದಸರಾ ಎಲ್ಲರಲ್ಲೂ ಬೇಸರ ಉಂಟು ಮಾಡಿಸಿತ್ತು. ಇನ್ನೊಂದು ಕಡೆ ಆಕ್ರೋಶಕ್ಕೂ ಕಾರಣವಾಗಿತ್ತು. ಆನೆ ಗರ್ಭವಾಗಿದ್ದು ಸಹ ಅರಣ್ಯ ಇಲಾಖೆಗೆ ಗೊತ್ತಾಗಲಿಲ್ವಾ ಎಂಬ ಆಕ್ರೋಶ ಅರಣ್ಯ ಇಲಾಖೆ ವಿರುದ್ಧ ವ್ಯಕ್ತವಾಗಿತ್ತು.
ಈ ಬಾರಿ ಡಿಎಫ್ಒ ಪ್ರಸನ್ನ ಕುಮಾರ್ ಪಟಗಾರ್ ಗೆ ಸಹಜವಾಗಿಯೇ ಪತ್ರಕರ್ತರು ಕಳೆದ ಬಾರಿ ಆನೆಗಳಿಗೆ ಡೆಲಿವರಿ ಆಗಿತ್ತು ಎಂದು ಪ್ರಶ್ನಿಸಲಾಗಿದೆ. ಹಿಂದಿನದು ಬೇಡ, ಸುಮ್ಮನೆ ಹಿಂದಿನದ್ದನ್ನ ಕೆಣಕಬೇಡಿ ಎನ್ನುವ ಮೂಲಕ ಮೀಡಿಯಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಸಿಡಿಮಿಡಿಗೊಳ್ಳುವುದು ಏಕೆ ಎಂಬುದನ್ನ ಅಧಿಕಾರಿಗಳು ಸ್ಪಷ್ಟಪಡಿಸಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲಿ. ಮೆರವಣಿಗೆ ಹಿಂದಿನದಿನ ಆನೆ ಮರಿಹಾಕಿದ್ದು ಮೀಡಿಯಾದ ಬೇಜವಬ್ದಾರಿ ತನವೇ? ಅಥವಾ ಅರಣ್ಯ ಅಧಿಕಾರಿಗಳ ಅಜಾಗರೂಕತನವೇ?
ಹಿಂದಿನ ಘಟನೆಗಳು ಮರುಕಳಿಸದಂತೆ ಜವಬ್ದಾರಿತನವಾಗಿ ಮೆರಯಲಿ ಎಂಬುದು ಮೀಡಿಯಾದ ಕಾಳಜಿಯೇ ಹೊರತು ಅಧಿಕಾರಿಗಳು ವೈಯಕ್ತಿವಾಗಿ ತೆಗೆದುಕೊಂಡು ಸಿಡಿಮಿಡಿಗೊಳ್ಳಲಿ ಎಂಬ ಉದ್ದೇಶವಲ್ಲ. ಇಲ್ಲಿ ಸಿಡಿಮಿಡಿಗೊಂಡು ಹಿಂದಿನದ್ದನ್ನ ಕೆಣಕಬೇಡಿ ಎಂದರೆ ಏನು ಅರ್ಥ?
ದಸರಾ ಹಬ್ಬ ಕಳೆದ ಎರಡು ಬಾರಿ ಬೇಸರದ ಸಂಗತಿ ನಡೆದಿದೆ. ಒಬ್ಬ ಪ್ರಜೆಯಾಗಿಯೂ ಇವರಿಗೆ ಪ್ರಶ್ನೆ ಕೆಳುವಂತಿಲ್ಲ ಎಂದಾದರೆ ಇವರೇನು ಸರ್ವಾಧಿಕಾರಿನಾ?