ಮದುವೆ ಆಗು ಇಲ್ಲ ಆಸಿಡ್ ಹಾಕುವುದಾಗಿ ಧಮ್ಕಿ


ಸುದ್ದಿಲೈವ್/ಭದ್ರಾವತಿ

31 ವರ್ಷದ ಮಹಿಳೆಗೆ ಮದುವೆ ಆಗು ಇಲ್ಲವೆಂದರೆ ಮೈಮೇಲೆ ಆಸಿಡ್ ಹಾಕಿ ರಿವೇಂಜ್ ತೀಸ್ಕೋಂತಿನಿ ಎಂದು ಧಮಿಕಿ ಹಾಕಿರುವ ಘಟನೆ ಭದ್ರಾವತಿಯ ದೊಣಬಘಟ್ಟದಲ್ಲಿ ನಡೆದಿದೆ. 

ಸದ್ದಾಂ ಹುಸೇನ್ ಎಂಬಾತ ಮಹಿಳೆಯ ಮನೆಗೆ ಏಕಾಏಕಿ ಮನೆಗೆ ನುಗ್ಗಿ  ಅವಾಚ್ಯ ಶಬ್ದಗಳಿಂದ ಬೈದು, ನನ್ನ ಫೋನ್ನನ್ನು ಏಕೆ ರಿಸೀವ್ ಮಾಡುತ್ತಿಲ್ಲ, ನೀನು ನನ್ನನ್ನು ಇವತ್ತೇ ಮದುವೆ ಆಗು ಇಲ್ಲದಿದ್ದರೇ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಹೇಳಿದ್ದಾನೆ.  

ಕಪಾಳಕ್ಕೆ ಹೊಡೆದು ಕುತ್ತಿಗೆಗೆ ಚಾಕು ಹಿಡಿದ ಸದ್ದಾಂ ರೌಂಡ್ ಅಪ್ ವಿಷದ ಬಾಟಲಿಯನ್ನು ಓಪನ್ ಮಾಡಿ ಮಹಿಳೆಗೆ ಕುಡಿಸಲು ಪ್ರಯತ್ನಿಸಿದ್ದಾನೆ. ಮಹಿಳೆಯ ಅತ್ತಿಗೆ,  ಸಹೋದರ ಮತ್ತು ಮಹಿಳೆಯ ತಾಯಿ ಬಂದು ಈ ವೇಳೆ ಜಗಳ ಬಿಡಿಸಿದ್ದಾರೆ. 

ಮಹಿಳೆಯ ಕಾಲಿಗೆ ಆರೋಪಿ ಬಲವಾಗಿ ಗುಂಡುಪಿನ್ನಿನಿಂದ ಚುಚ್ಚಿದ್ದಾನೆ. ಈ ಘಟನೆ ನಡೆದ ನಂತರ ಮನೆಯ ಸೋಫಾದ ಮೇಲೆ ಕುಳಿತ ಮಹಿಳೆಯ ಬಳಿ ಬಂದ ಸದ್ದಾಂ ಇವತ್ತು ಏನೇ  ತೀಮ‌ಾನವೇನೇ ಇದ್ದರು ಇಲ್ಲಿಯೇ ತಿರ್ಮಾನವಾಗಬೇಕು, ನಿನ್ನ ಬಟ್ಟೆಯನ್ನು ಸಂಪೂರ್ಣವಾಗಿ ಬಿಚ್ಚಿ ನಿನ್ನನ್ನು ಮನೆಯಿಂದ ಹೊರಹಾಕುತ್ತೇನೆಂದು ಧಮಕಿ ಹಾಕಿದ್ದಾನೆ.  

ಮದುವೆ ಮಾಡಿಕೊಳ್ಳದಿದ್ದರೆ, ನಿನ್ನ ಮೇಲೆ ಆಸಿಡ್ ಹಾಕಿ ರಿವೇಂಜ್ ತೀರಿಸಿಕೊಳ್ಳುವುದಾಗಿ  ಧಮಕಿ ಹಾಕಿರುವುದಾಗಿ ಮಹಿಳೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌ ತೀವ್ರಗಾಯಗೊಂಡ ಮಹಿಳೆಯನ್ನ

ಸಹೋದರ ಮತ್ತು ಕುಟುಂಬದವರ ಸಹಾಯದಿಂದ ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಮಹಿಳೆ ಆರೋಪಿಯ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಸೂಕ್ತ ನ್ಯಾಯ ಮತ್ತು ರಕ್ಷಣೆ ಒದಗಿಸಬೇಕೆಂದು ದೂರಿನಲ್ಲಿ ಕೋರಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close