Girl in a jacket

ಯತಿ ನರಸಿಂಹಾನಂದರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು



ಸುದ್ದಿಲೈವ್/ಶಿವಮೊಗ್ಗ

ಉತ್ತರ ಪ್ರದೇಶದ ಘಾಜೀಯಾಬಾದ್‌ನಲ್ಲಿ ಯತಿ ನರಸಿಂಹ ಅವರ ಭಾಷಣದ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಶಿವಮೊಗ್ಗ ಜಿಲ್ಲಾ ಜಮಾಯತ್ ಉಲ್ಮಾ-1 ಅಧ್ಯಕ್ಷರು ದೂರು ದಾಖಲಿಸಿದ್ದಾರೆ. 

ಘಾಜಿಯಾಬಾದ್‌ನಲ್ಲಿ ಯತಿ ನರಸಿಂಹರವರು ಇಸ್ಲಾಂ ಧರ್ಮದ ಪ್ರವಾದಿ ಮೊಹಮದ್ ಅವರನ್ನ ರಾವಣ ಮತ್ತು ಪುತ್ರ ಮೇಘರಾಜನನ್ನ ಸುಡುವ ಹಾಗೆ ಪ್ರವಾದಿಯರನ್ನ ಸುಡುವಂತೆ ಹಿಂದೂಗಳಿಗೆ ಕರೆ ನೀಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಇದನ್ನ x(twitter) ಮತ್ತು ಮುಸ್ಲೀಮೇತರರು ಬಳಸುವ  sanatan usha dal@maysh0893 ಅಡಿಯಲ್ಲಿ ಪೋಸ್ಟ್ ಮಾಡಲಾಗಿದ್ದು ಹಿಂದೂ ಮತ್ತು ಮುಸ್ಲೀಂ ಧರ್ಮಿಯದವರ ನಡುವೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಪ್ರಚೋದಿಸುವ ಉದ್ದೇಶಪೂರಿತ ಭಾಷಣವಾಗಿದೆ ಎಂದು ಜಮಾಯತ್ ಉಲ್ಮಾ-1 ಅಧ್ಯಕ್ಷರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಈ ಹೇಳಿಕೆಗಳು ಮುಸ್ಲೀಂ ಭಾವನೆಗಳಿಗೆ ಘಾಸಿಗೊಳಿಸುವುದು ಮಾತ್ರವಲ್ಲದೆ ಸಮಾಜದಲ್ಲಿ ಅಪಾಯಕಾರಿ ಹಾಗೂ ವಿಭಾಜಕ ವಾತಾವರಣ ಸೃಷ್ಠಿಸಲು ಕಾರಣವಾಗಿದೆ. ಹಾಗಾಗಿ ಯತಿ ನರಸಿಂಹಾನಂದರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಧ್ಯಕ್ಷರು ಒತ್ತಾಯಿಸಿದಿದ್ದಾರೆ. 

ನರಸಿಂಹಾನಂದ ಅವರು ದಸರಾ ಹಬ್ಬಕ್ಕೆ ಮುನ್ನ ಮಾಡಿದ ಭಾಷಣದಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ನಾಂಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. 


ಫಲಕ್‌ನುಮಾ, ಮಾದನ್ನಪೇಟೆ, ಹಬೀಬ್‌ನಗರ, ಗೋಲ್ಕೊಂಡ, ಬಹದ್ದೂರ್‌ಪುರ, ಹುಸೇನಿಯಂ ಮತ್ತು ಇತರ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ದೂರುಗಳು ಇವರ ವಿರುದ್ಧ ದಾಖಲಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು