ಮಳೆಗೆ ಕುಸಿದು ಬಿದ್ದ ಮನೆಗಳು



ಸುದ್ದಿಲೈವ್/ಶಿವಮೊಗ್ಗ

ಮನೆಗಳಿಗೆ ನೀರು ನುಗ್ಗಿದ ಮಳೆ ನೀರು ಕೆಲ ಮಳೆಗಳಿಗೆ ಹಾನಿಯನ್ನೂ ಉಂಟು ಮಾಡಿದೆ. ಸತತ ಎರಡು ಗಂಟೆಗಳ ವರೆಗೆ ಸುರಿದ ಮಳೆ ಅರ್ದ ಗಂಟೆ ವಿರಾಮ ನೀಡಿದರು 9 ಗಂಟೆಯ ನಂತರ ಮತ್ತೆ ಸಣ್ಣದಾಗಿ ಬೀಳಲು  ಆರಂಭಗೊಂಡಿದೆ. 

18 ನೇ ವಾರ್ಡ್‌ ‌ನ  ವಿನೋಬ ನಗರದ 7 ನೇ ತಿರುವಿನ ಚಾಲುಕ್ಯ ಬಾರಿನ ಮುಂಭಾಗದಲ್ಲಿರುವ ಮನೆಗಳು ಜಲಾವೃತಗೊಂಡಿರುವುದು ಅಷ್ಟೆ ಅಲ್ಲ ಮನೆಗಳು ಬಿದ್ದುಹೋಗಿದೆ. ಪರ್ವಿನ್ ತಾಜ್, ಸೌಮ್ಯ ಮತ್ತು ಫಿಲೋಮಿನಾ ಎಂಬುವರ ಮನೆಗಳು ಹಾನಿಯಾಗಿವೆ. 



ಸೌಮ್ಯ ಮತ್ತು ಫಿಲೋಮಿನಾ ಎಂಬುವರ ಮನೆ ಗೋಡೆ ಬಿದ್ದರೆ, ಫರ್ವಿನ್ ತಾಜ್ ಅವರ ಮನೆ ಸಂಪೂರ್ಣ ಹಾನಿಯಾಗಿದೆ. ಮಾಜಿ ಉಪಮೇಯರ್ ಪಾಲಾಕ್ಷಿ ಹಾನಿಯಾಗಿರುವ ಮನೆಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.‌

ಹೊಸಮನೆ - ವಿನೋಬನಗರ ಮಧ್ಯದ ಸಣ್ಣ ಸೇತುವೆ ಮೇಲೆ  ಮಳೆ ನೀರು ಹರಿಯುತ್ತಿದೆ. ಅಕ್ಕಪಕ್ಕದ ರಸ್ತೆಯ ಸುಮಾರು 12 ಮನೆಗಳಿಗೆ ನೀರು ನುಗ್ಗಿದೆ. ಅಂಗಳಯ್ಯನ ಕೇರಿಯಲ್ಲೂ ಮಳೆಯಿಂದಾಗಿ ಕೆಲ ಮನೆಗಳಿಗೆ ನೀರು ನುಗ್ಗಿದೆ. 

ಎಲ್ ಬಿಎಸ್ ನಗರದ ಕೃಷ್ಣಮಠ ರಸ್ತೆ ಸಂಪೂರ್ಣ ಹಾನಿಗೊಳಗಾಗಿವೆ. ಕೋಟೆಗಂಗೂರು, ಬೊಮ್ಮನ್ ಕಟ್ಟೆಯ ಕೆರೆತುಂಬಿದ ಪರಿಣಾಮ ಕೃಷ್ಣ ಮಠ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಆರ್ ಎಂ ಎಲ್ ನಗರದಲ್ಲೂ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಕೆಲ ಕಡೆ ಮನೆಗಳು ಜಲಾವೃತಗೊಂಡಿದೆ.‌

ಟಿಪ್ಪುನಗರ, ಮಂಜುನಾಥ ಬಡಾವಣೆ, ಇಮಾಮ್ ಬಾಡಾ, ಖಾಜಿ ನಗರಗಳಲ್ಲೂ ಮನೆಗಳಿಗೆ ನೀರು ನುಗ್ಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close