ಸುದ್ದಿಲೈವ್/ಶಿವಮೊಗ್ಗ
ಮೆಗ್ಗಾನ್ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟುವಂತೆ ಶಸ್ತ್ರಾಸ್ತ್ರಗಳನ್ನ ತೋರಿಸಿಕೊಂಡು ರೌಡಿಗಳ ರೀತಿ ವರ್ತಿಸುತ್ತಿದ್ದ ಇಬ್ಬರು ಆರೊಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಮೆಗ್ರಾನ್ ಆಸ್ಪತ್ರೆಯ ಆವರಣದ ವಾಹನದ ಪಾರ್ಕಿಂಗ್ ಏರಿಯಾದಲ್ಲಿ ಇಬ್ಬರು ವ್ಯಕ್ತಿಗಳು ರೌಡಿ ತರಹ ವರ್ತನೆ ಮಾಡುತ್ತಾ ಅವರಲ್ಲಿ ಒಬ್ಬ ವ್ಯಕ್ತಿಯು ಕೈಯಲ್ಲಿ ಕಬ್ಬಿಣದ ಮಚ್ಚು ಇಟ್ಟುಕೊಂಡು ಹೊರಗೆ ತೆಗೆಯುವುದು, ಸಾರ್ವಜನಿಕರಿಗೆ ತೋರಿಸುವುದು ಮಾಡುತ್ತಾ ಜನರಿಗೆ ಭಯ ಹುಟ್ಟಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗದೆ.
ಮೆಗ್ರಾನ್ ಆಸ್ಪತ್ರೆ ಆವರಣದ ಬಳಿ ಪೊಲೀಸರು ವಾಹನ ನಿಲ್ಲಿಸಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಅತ್ತಿಂದಿತ್ತ ಓಡಾಡುತ್ತಾ ಜನರಿಗೆ ಕಾಣುವಂತೆ ಕಬ್ಬಿಣದ ಮಚ್ಚು ತಿರುಗಿಸುತ್ತಾ ಜನರಿಗೆ ಭಯ ಹುಟ್ಟುವಂತೆ ಮಾಡುತ್ತಿದ್ದನು.
ಇನ್ನೊಬ್ಬ ವ್ಯಕ್ತಿಯು ಅವನ ಜೊತೆಯಲ್ಲಿ ತಿರುಗಾಡುತ್ತಿದ್ದು, ಅವರಿಬ್ಬರನ್ನು ದಾಳಿ ನಡೆಸಿ ಹಿಡಿದು ಕೊಂಡ ಪೊಲೀಸರು ಹೆಸರು ಮತ್ತು ವಿಳಾಸ ಕೇಳಿದ್ದಾರೆ. 1) ಮಹಮ್ಮದ್ ಗೌಸ್ ತಂದೆ ಮಹಮ್ಮದ್ ಭಕ್ಷಿ, 19 ವರ್ಷ, ಮುಸ್ಲಿಂ ಜನಾಂಗ ಎಂಗ್ ಕೆಲಸ, ವಾಸ ವಾಸ 01ನೇ ತಿರುವು ಬಲಭಾಗ, ಟಿಪ್ಪುನಗರ, 2) ಅಯಾನ್ ತಂದೆ ರಹಮತುಲ್ಲಾ, 19 ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, ವಾಸ 01ನೇ ತಿರುವು ಬಲಭಾಗ, ಟಿಪ್ಪುನಗರ, ಶಿವಮೊಗ್ಗ ಅಂತ ತಿಳಿಸಿದ್ದಾರೆ.
ಓರ್ವನ ಬಳಿ ಲಾಗು, ಮತ್ತೋರ್ವನ ಬಳಿ ಚಾಕು ಇರುವುದುಪತ್ತೆಯಾಗಿದ್ದು ಇಬ್ಬರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.