Girl in a jacket

ಜೋಶಿ ರಾಜೀನಾಮೆ ನೀಡಲಿ-ಆಯನೂರು ಮಂಜುನಾಥ್



ಸುದ್ದಿಲೈವ್/ಶಿವಮೊಗ್ಗ

ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರನ ವಿರುದ್ಧ ಸುನೀತಾ ಚಹಾಣ್ ಎಂಬುವರು ವಂಚನೆ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದಲ್ಲಿ ಕೇಂದ್ರ ಸಚಿವರು ರಾಜೀನಾಮೆ ನೀಡುವಂತೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು,  ಸುನೀತಾ ಚೌಹಾಣ್ ಗೆ ಪಾರ್ಲಿಮೆಂಟ್ ಟಿಕೇಟ್ ಕೊಡಿಸುವುದಾಗಿ ಹೇಳಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ 25 ಲಕ್ಷ ಹಣವನ್ನ ಮುಂಗಡವಾಗಿ ಪಡೆದು ವಂಚಿಸಿರುವುದಾಗಿ ದೂರು ದಾಖಲಾಗಿದೆ. 

ನನ್ನ ಸಹೋದರ ಕೇಂದ್ರದ ಪ್ರಭಾವಿ ನಾಯಕರಾಗಿದ್ದಾರೆ. ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಆಗುವುದರಿಂದ ಗೆಲುವು ಸಿಶ್ಚಿತ ಎಂದು ಹೇಳಿ ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲೇ 5 ಕೋಟಿ ಹಣದಲ್ಲಿ ಮುಂಗಡ ಹಣವಾಗಿ 25 ಲಕ್ಷ ರೂ ಪಡೆದಿದ್ದಾರೆ. ಟಿಕೇಟ್ ಸಿಗಲಿಲ್ಲ ಎಂದು ದೂರಿನಲ್ಲಿ ದಾಖಲಾಗಿದೆ ಎಂದರು. 

ಜಾತಿ ನಿಂದನೆಯಾಗಿದೆ. ಸಂಸದರ ಕಚೇರಿಯಲ್ಲಿ ಕುಳಿತು ವ್ಯವಹಾರ ನಡೆಸಿದ್ದಾರೆ. ಆದರೆ ಸಚಿವರು ನನಗೂ ನನ್ನ ಸಹೋದರನಿಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಒಂದು ಕಾಲು ಕೋಟಿ ವ್ಯವಹಾರ ನಡೆದಿದೆ. ಕೇಂದ್ರ ಸಚಿವಾಲಯದಲ್ಲಿ ಕುಳಿತು ನಡೆದಾಗ ಸಂಬಂಧ ಚೆನ್ನಾಗಿತ್ತು. ವಂಚನೆಯಾದಾಗ ಸಂಬಂಧವನ್ನ ಜೋಶಿ ಕಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಹಿಳೆಯೊಬ್ಬರಿಗೆ ಟಿಕೇಟ್ ನೀಡುವುದಾಗಿ ಹೇಳಿ ವಂಚಿಸಿದ ಪ್ರಕರಣ ನಡೆದಿದೆ. ಬಿಜೆಪಿಯಲ್ಲಿ ಟಿಕೇಟ್ ವಂಚನೆ ಪ್ರಕರಣ ಹೆಚ್ಚಾಗಿದೆ. ಭ್ರಷ್ಠ ಹಣದ ವಹಿವಾಟನ್ನ ಪಕ್ಷ ಮೈಗೂಡಿಸಿಕೊಂಡಿದೆ. ಜೋಶಿ ಅವರ ಬ್ರದರ್ ಅಮಿತ್ ಶಾ ಅವರ ಹೆಸರು ಪ್ರಸ್ತಾಪಿಸಿರುವುದಾಗಿ ದೂರು ದಾರೆ ತಿಳಿಸಿದ್ದಾರೆ. ಹಗರಣದ ಬೀಜ ಮೊಳಕೆ ಒಡೆದಿದೆ ಗಂಭೀರ ತನಿಖೆಯಾಗಬೇಕು. 

ಜೋಶಿ ಅವರ ರಾಜೀನಾಮೆ ಪಡೆಯಬೇಕು. ಬೇರೆಯವರಿಗೆ ನೈತಿಕತೆಯ ಬಗ್ಗೆ ಪಾಠ ಮಾಡುವರು ತಾವು ಮೊದಲು ನೈತಿಕತೆಯಿಂದ ರಾಜೀನಾಮೆ ನೀಡಲಿ ಎಂದರು. 

ಬಿಜೆಪಿ ಅವರು ಯಾವುದೇ ತಮ್ಮ ದೋಷವನ್ನ ಮಾತನಾಡುವುದೇ ಇಲ್ಲ. ಮುನಿರತ್ನ ಅವರ ಬಗ್ಗೆ ಬಿಜೆಪಿಯವರು ಮಾತನಾಡುವುದೇ ಇಲ್ಲ. ಭಯದಿಂದ ಬಿಜೆಪಿ ನಾಯಕರು ಇದ್ದಾರೆ. ಅವರ ಬಗ್ಗೆ ಬಿಜೆಪಿ ನಾಯಕರು ಮಾತನಾಡಬೇಕು. ಯತ್ನಾಳ್  ಸಿಎಂ ಆಗಲು ಹಣದ ಬಗ್ಗೆ ಮಾತನಾಡಿದ್ದಾರೆ. ಯತ್ನಾಳ್ ವಿಚಾರದಲ್ಲಿ ಇಡಿ ಯಾಕೆ ಮದ್ಯಪ್ರವೇಶಿಸೊಲ್ಲ ಎಂದು ಪ್ರಶ್ನಿಸಿದರು. 

ಜನರಲ್ ಸೆಕ್ರೆಟರಿ ವೇಣುಗೋಪಲ್ ರಾಜ್ಯಕ್ಕೆ ಬಂದರೆ ಹಣತೆಗೆದುಕೊಳ್ಳಲು ಬಂದಿದ್ದಾರೆ ಎಂದು ಸಿಟಿ ರವಿ ಹೇಳುತ್ತಾರೆ. ಸಿಟಿ ರವಿನೂ ಬಿಜೆಪಿಯ ಜನರಲ್ ಸೆಕ್ರೆಟರಿ ಆಗಿದ್ದರು‌. ಇವರು ಸಹ ಬೇರೆ ರಾಜ್ಯಕ್ಕೆ ಹೋದಾಗ ಹಣತರಲೇ ಹೋಗುತ್ತಿದ್ದಾರಾ? ಎಂದು ಪ್ರಶ್ನಿಸಿದರು. ನಿಮ್ಮ ಕೈಯಲ್ಲೇ ಎಲ್ಲಾ ತನಿಖಾ ಸಂಸ್ಥೆಗಳಿವೆ ತನಿಖೆ ನಡೆಸಿ ಎಂದರು.

ಭ್ರಷ್ಠಾಚಾರದ ನೈತಿಕತೆಯನ್ನ ಬಿಜೆಪಿ ಕಳೆದುಕೊಂಡಿದೆ. ಪ್ರತಿದಿನ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾತನಾಡುತ್ತಾರೆ. ಯತ್ನಾಳ್ ಸ್ಥಾನವನ್ನ ವಿಜೇಂದ್ರ ಪಡೆದಿದ್ದಾರೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live