ಸಹಕಾರ ಭಾರತಿಗೆ ಎಸ್ಕೆ ಮರಿಯಪ್ಪ ಸವಾಲು



ಸುದ್ದಿಲೈವ್/ಶಿವಮೊಗ್ಗ

ನಬಾರ್ಡ್ ಗೂ ಸಹಕಾರ ಭಾರತಿಗೂ ಏನು ಸಂಬಂಧ ಎಂಬುದು ಸ್ಪಷ್ಟವಾಗಬೇಕೆಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಾಟಗೋಡು ಸುರೇಶ್ ಪ್ರಶ್ನಿಸಿದ್ದಾರೆ. 

ನಿನ್ನೆ ಸಹಕಾರ ಭಾರತಿಯ ಪ್ರಸನ್ನ ಕುಮಾರ್ ಮತ್ತು ಮ್ಯಾನ್ ಕೋಸ್ ನ ಸದಸ್ಯರು, ಪುನರ್ಧನ ಕಡಿತಗೊಳಿಸಿರುಬ ಬಗ್ಗೆ ಒಕ್ಕೂಟ ನಡೆಸಿದ ಪ್ರತಿಭಟನೆಯಲ್ಲಿ ಅರ್ಥವಿಲ್ಲ. ಅದೊಂದು ವ್ಯರ್ಥ ಪ್ರತಿಭಟನೆ ಎಂದು ಬಣ್ಣಿಸಿತ್ತು. 

ಇದಕ್ಕೆ ಪ್ರತಿಯಾಗಿ ಒಕ್ಕೂಟ ಸುದ್ದಿಗೋಷ್ಠಿ ನಡೆಸಿ, 750 ಕೋಟಿ ಪುನರ್ಧನ ಸೌಲಭ್ಯ ನಿಡುವಂತೆ ಡಿಸಿಸಿ ಬ್ಯಾಂಕ್, ನಬಾರ್ಡ್ ಗೆ ಬೇಡಿಕೆ ಇಟ್ಟರೆ, ನಬಾರ್ಡ್ 113 ಕೋಟಿ ರೂ. ಮಾತ್ರ ನೀಡಲಾಗಿದೆ. ಶೂನ್ಯ ದರ ಬಡ್ಡಿಗೆ ರೈತರಿಗೆ ಹಣಕೊಟ್ಟರೆ ಸಮಸ್ಯೆ ಏನು? ಎಂದು ಪ್ರಶ್ನಿಸಿದೆ.

ಈ ಹಿಂದೆ ಡಿ ದರ್ಜೆಯಲ್ಲಿದ್ದ ಡಿಸಿಸಿ ಬ್ಯಾಂಕ್ ಪ್ರಸ್ತುತ ನಬಾರ್ಡ ಎ ದರ್ಜೆಗೆ ಏರಿಸಿದೆ. 2020ನೇ ಸಾಲಿನಲ್ಲಿ 1833.63 ಕೋಟಿ ರೂಗಳಷ್ಟಿದ್ದು, 2024 ಕ್ಕೆ 3039 ಕೋಟಿಗಳಾಗಿವೆ ಶೇ.66 ರಷ್ಟು ಪ್ರಗತಿ ಸಾಧಿಸಿದೆ ಎಂದರು. 

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ಕೆ ಮರಿಯಪ್ಪ ಮಾತನಾಡಿ, 2020 ನೇ ಸಾಲಿನಲ್ಲಿ ಬ್ಯಾಂಕ್ ನ  6.71 ಎನ್ ಪಿಎ ಇದ್ದಿದ್ದನ್ನ 2024 ನೇ ಸಾಲಿನಲ್ಲಿ  0.78 ಎನ್ ಪಿಎಗೆ ಇಳಿಸಲಾಗಿದೆ. ಇದು ಸಹಕಾರ ಭಾರತಿ ಸಮಯದಲ್ಲಿ ನಡೆದಿದೆ ಎಂದು ದೂರಿದರು. 

ಅಪೆಕ್ಸ್‌ನ ಪ್ರಥಮ ಬ್ಯಾಂಕ್ ಆಗಿ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಆಗಿದೆ. ಸಹಕಾರ ಭಾರತಿಯವರು ತಾಲೂಕಿನ ಯಾವುದಾದರೂ ಸಹಕಾರ  ಬ್ಯಾಂಕ್‌ನ್ನ ದತ್ತುಪಡೆದು  ಶೂನ್ಯ ಬಡ್ಡಿದರದಲ್ಲಿ ನೀಡಲಿ ರೈತರಿಗೆ ಸಾಲ ನೀಡಲಿ ಎಂದು ಸವಾಲು ಎಸೆದರು. 

ಡಿಸಿಸಿ ಬ್ಯಾಂಕ್ ತೆಗೆಯಬೇಕು ಎಂಬ ಉದ್ದೇಶದಿಂದ ಸಹಕಾರಿ ಬ್ಯಾಂಕಿನವರ ವರ್ತನೆ ನಡೆಯುತ್ತಿದೆ ಎಂದು ಆಗ್ರಹಿಸಿದರು.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close