ಸುದ್ದಿಲೈವ್/ಶಿವಮೊಗ್ಗ
ಇಷ್ಟುದಿನ ಮೊಬೈಲ್ ಟವರ್ ನ್ನ ಅಳವಡಿಸುತ್ತಿದ್ದ ಬ್ಯಾಟರಿಗಳನ್ನ ಕದಿಯುತ್ತಿದ್ದ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿತ್ತು. ಮೊಬೈಲ್ ಟವರೇ ಕದ್ದಿರುವ ಪ್ರಕರಣವೊಂದು ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಿಪ್ಪುನಗರದ ಹೆಚ್ ಕೆ ಜಿಎನ್ ಕಾಂಪ್ಲೆಕ್ಸ್ ನಲ್ಲಿ ಅಳವಡಿಸಿದ್ದ ಮೊಬೈಲ್ ಟವರನ್ನ 2008 ನೇ ಇಸವಿಯಲ್ಲಿ ಅಳವಡಿಸಲಾಗಿತ್ತು. ಇದರ ನಿರ್ವಹಣೆಯನ್ನ ಕಂಪನಿಯವರೆ ನಿರ್ವಹಿಸುತ್ತಿದ್ದರು.
ಕೋವಿಡ್ ನಂತರದ ದಿನಗಳಲ್ಲಿ ಇದರ ನಿರ್ವಹಣೆ ನಿಷ್ಕ್ರಿಯವಾದುದರಿಂದ 2021 ರಂದು ಮೊಬೈಲ್ ಟವರ್ ಅಳವಡಿಸಿದ ಸಂಸ್ಥೆಯವರು ಪರಿಶೀಲಿಸಿದಾಗ ಟವರೇ ಇಲ್ಲದೆ ಇರುವುದು ಪತ್ತೆಯಾಗಿದೆ. ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್ ಲಿ. ಸಂಸ್ಥೆ ಭಾರತಾದ್ಯಂತ ಟವರ್ ಅಳವಡಿಸುವ ಸಂಸ್ಥೆಯಾಗಿದೆ.
ಹೆಚ್ ಕೆಜಿಎನ್ ಕಾಂಪ್ಲೆಕ್ಸ್ ನವರೊಂದಿಗೆ 2008 ರಲ್ಲಿ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದರಿಂದ ನ್ಯಾಯಾಲಯದ ಪಿಸಿಆರ್ ಮೂಲಕ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.